FLASH NEWS : ಚಳ್ಳಕೆರೆ ಸಂತೆಯಲ್ಲಿ ಜನ ಬೆಚ್ಚಿಬೀಳುವ ಘಟನೆ,,,?

    ನಿತ್ಯವಾಣಿ, ಚಿತ್ರದುರ್ಗ, (ನ.14) : ಚಳ್ಳಕೆರೆ ಸಂತೆ ಮೈದಾನದಲ್ಲಿ ನಗರದ ನಾಗರಿಕರು ಬೆಚ್ಚಿಬೀಳುವ ಭಯಾನಕ ದೃಶ್ಯಗಳು ಕಂಡು ಬಂದಿದೆ, ಈ ಸಂತೆ ಮೈದಾನದಲ್ಲಿ ಪ್ರತಿದಿನ ಜೀವನ ಸಾಗಿಸಲು ತರಕಾರಿ ವ್ಯಾಪಾರಸ್ಥರು ಸಾಕಷ್ಟು ಟೆಂಟುಗಳನ್ನು ಹಾಕಿದ್ದು ವ್ಯಾಪಾರವಿಲ್ಲದೆ ತರಕಾರಿಗಳನ್ನು ಕೊಂಡುಕೊಳ್ಳಲು ಜನಗಳು ಬಾರದೆ ಇರುವುದು ವ್ಯಾಪಾರಸ್ಥರಿಗೆ ಮಂಕುಬಡಿದಂತೆ ಆಗಿದೆ, ವಿಡಿಯೋಸ್,,,,

ಕಾರಣವೇನೆಂದರೆ ಸುಮಾರು ತಿಂಗಳಿನಿಂದ ಮಳೆ ಬಂದಾಗ ಕೆಸರುಗದ್ದೆ ಯಂತಿರುವ ಈ ಸ್ಥಳ,ಜನಗಳು ವ್ಯಾಪಾರಕ್ಕೆ ಬರಲು ಹಿಂದೆ ಮುಂದೆ ನೋಡುತ್ತಿದ್ದಾರೆ, ಚಳ್ಳಕೆರೆ ಪುರಸಭೆ ನಗರಸಭೆ ಯಾಗಿ ಸಾಕಷ್ಟು ಸರ್ಕಾರದಿಂದ ಅನುದಾನವನ್ನು ತೆಗೆದುಕೊಂಡು ಇದನ್ನು ಸರಿಪಡಿಸಲು ಇರುವುದು ದೌರ್ಭಾಗ್ಯ, ಹಳೆಯ ಸಂತೆ ಮೈದಾನವನ್ನು ಈ ನಗರದ ಹೃದಯಭಾಗದಲ್ಲಿರುವ ನೆಹರೂ ಸರ್ಕಲ್ ಹತ್ತಿರ ಈ ಸಂತೆಯನ್ನು ಮಾಡಲು ಸುಮಾರು ತಿಂಗಳುಗಳ ಹಿಂದೆ ಚಳ್ಳಕೆರೆ ಕೃಷಿ ಮಾರ್ಕೆಟ್ ನಿಂದ 30 ಲಕ್ಷ ಅನುದಾನವನ್ನು ಪಡೆದು ಇದುವರೆಗೂ 12 ಕಟ್ಟೆಗಳನ್ನು ಕಟ್ಟಿರುವುದು ಅಷ್ಟಕ್ಕೆ ಸೀಮಿತವಾಗಿದೆ, ನಗರಸಭೆಯವರು ಏನೂ ಗೊತ್ತಿಲ್ಲದಂತೆ ಅಧ್ಯಕ್ಷರಾಗಲಿ ಕಮಿಷನರ್ ಆಗಲಿ ನಗರಸಭೆ ಸದಸ್ಯರಾಗಲಿ ಮೌನವಾಗಿರುವುದು ಸರಿಯಲ್ಲ, ಚಳ್ಳಕೆರೆಯ ಶಾಸಕರು ರಾಜ್ಯದಲ್ಲೇ ಪ್ರಥಮ ಅಭಿವೃದ್ಧಿ ಶಾಸಕರೆಂದು ಪ್ರಶಸ್ತಿ ಪಡೆದಿರುವ ಇವರ ಗಮನಕ್ಕೆ ಬಂದಿಲ್ಲವೇ…? ನಗರದ ರಾಜಕಾರಣಿಗಳಾಗಲಿ ಇದಕ್ಕೆ ಸಂಬಂಧಪಟ್ಟವರ ಆಗಲಿ ಶಾಸಕರ ಗಮನಕ್ಕೆ ತಂದು ಇದನ್ನು ಸರಿಪಡಿಸಬೇಕು, ಈ ಮಾಹಿತಿಯನ್ನು ಮನಗೊಂಡು ಚಳ್ಳಕೆರೆ ಸಂತೆ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ವಿಜಯಕುಮಾರ್ ರವರು, ನಿತ್ಯ ವಾಣಿ ದಿನಪತ್ರಿಕೆ ಗೆ ದೂರವಾಣಿ ಮುಖಾಂತರ ಕರೆ ಮಾಡಿ ವ್ಯಾಪಾರಸ್ಥರ ಅಳಲನ್ನು ನಮ್ಮ ಬಳಿ ತೋಡಿಕೊಂಡಿದ್ದಾರೆ, ಆದಷ್ಟು ಬೇಗನೆ ಕ್ರಮವನ್ನು ತೆಗೆದುಕೊಂಡು ಸಂಪೂರ್ಣ ವ್ಯವಸ್ಥೆಯನ್ನು ನಗರಸಭೆ ಯಾಗಲಿ ಶಾಸಕರಾಗಲಿ ಜವಾಬ್ದಾರಿ ವಹಿಸಬೇಕು, ಇಲ್ಲವಾದಲ್ಲಿ ಇಲ್ಲಿ ನಡೆಯುವಂತಹ ಸಂಕಷ್ಟದ ಘಟನೆಗಳಿಗೆ ತಾವುಗಳೇ ಕಾರಣಕರ್ತರಾಗುತೀರಿ, ನಿತ್ಯವಾಣಿ ದಿನಪತ್ರಿಕೆ ತಮ್ಮೆಲ್ಲರಿಗೂ ಎಚ್ಚರಿಸಿದೆ, ಇದನ್ನುಸರಿಪಡಿಸದಿದ್ದರೆ ನಮ್ಮ ನಿತ್ಯವಾಣಿ ದಿನಪತ್ರಿಕೆ ಮುಂದಿನ ವಿಶೇಷ ಸುದ್ದಿಗೆ ಕಾರಣರಾಗುತ್ತೀರಿ

Leave a Reply

Your email address will not be published.