ನಿತ್ಯವಾಣಿ ನ್ಯೂಸ್, ಅ.01 : ಆತ್ಮೀಯ ಸಮಾಜದ ಬಂಧುಗಳೇ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠವು ವಿಶ್ವಗುರು ಬಸವಣ್ಣನವರು ಸ್ಥಾಪಿಸಿದ ಶೂನ್ಯಪೀಠದ ಪರಂಪರೆಯನ್ನು ಮುಂದುವರಿಸಿ ಕೊಂಡು ಬಂದ ಲಿಂಗಾಯಿತ ಧರ್ಮದ ಮಠ.
ಸೈಟ್ ಸುರೇಶ್ ಬಾಬಣ್ಣ ಲಿಂಗ ಗಾಯತ ಧರ್ಮವು ಜಾತ್ಯಾತೀತವಾಗಿ 12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರ ನೇತೃತ್ವದಲ್ಲಿ ನಡೆದ ಆಂದೋಲನದಲ್ಲಿ ಎಲ್ಲಾ ಜನಾಂಗದವರು ಜಾತಿಯಿಂದ ಹೊರಬಂದು ಶರಣರೆಂದು ಗುರುತಿಸಿಕೊಂಡು ಶರಣ ಸಂಪ್ರದಾಯ- ಸಂಸ್ಕೃತಿಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಲಿಂಗ ದೀಕ್ಷೆ ಪಡೆದು ಲಿಂಗಾಯಿತರಾಗಿ ಮುಂದುವರೆದಿರುವುದು ಇತಿಹಾಸ..
ಮುರುಘಾ ಮಠ ಶ್ರೀ ಮುರುಘಾಮಠವು ಶ್ರೀ ಶಾಂತವೀರಸ್ವಾಮೀಗಳಿಗೆ ಅಂದಿನ ಪಾಳೇಗಾರ ಬಿಚ್ಚುಗತ್ತಿ ಭರಮಣ್ಣ ನಾಯಕರು ಭಕ್ತಿಯಿಂದ ಕಟ್ಟಿಸಿಕೊಟ್ಟ ಧರ್ಮದ ಕೊಡುಗೆ ಮಾತ್ರ , ಶ್ರೀ ಮುರುಘಾಮಠವು ಶರಣ ಪರಂಪರೆಯ ಲಿಂಗಾಯತ ಸಮುದಾಯದ ಮಠವಾಗಿ ಜಾತಿ ಭೇದವಿಲ್ಲದೆ ಎಲ್ಲಾ ಸಮುದಾಯದವರಿಗೆ ಸೇವೆಸಲ್ಲಿಸಿಕೊಂಡು ಈ ವರೆಗೂ ಬಂದಿರುತ್ತದೆ. ಸದ್ಯ ಹಾಲಿ ಮಠಾಧ್ಯಕ್ಷರ ಬಗ್ಗೆ ಸಮುದಾಯದಲ್ಲಿ ಅಸಮಾಧಾನ ವಿರುವುದು ಸತ್ಯ. ಅದನ್ನು ನಮ್ಮ ಸಮುದಾಯದವರೇ ಬಗೆಹರಿಸಿ ಮುನ್ನಡೆಯುತ್ತೇವೆ ಈ ವಿಚಾರದಲ್ಲಿ ಇತರ ಸಮುದಾಯಗಳು ಹಸ್ತಕ್ಷೇಪ ಮಾಡಿ ಗೊಂದಲ ಸೃಷ್ಟಿಸಬಾರದೆಂದು ವಿನಂತಿಸಿಕೊಳ್ಳುತ್ತೇವೆ. ಎಂದು ಚಿತ್ರದುರ್ಗ ಜಿಲ್ಲಾ ವೀರಶೈವ ಲಿಂಗಾಯತ ಮಹಾಸಭಾ ಗೌರವ ಅಧ್ಯಕ್ಷರಾದ ಸುರೇಶ್ ಬಾಬು ಸೈಟ್ ನಮ್ಮ ನಿತ್ಯವಾಣಿ ಪತ್ರಿಕೆಗೆ ದೂರವಾಣಿ ಮುಖಾಂತರ ಮಾತನಾಡಿ ವಿಷಯವನ್ನು ಪ್ರಕಟಿಸಲು ಕೋರಿಕೊಂಡಿದ್ದಾರೆ
__