Flipkart :: ಆಪಲ್, ಸ್ಯಾಮ್ಸಂಗ್ ಸೇರಿ ಹಲವು ಬ್ರ್ಯಾಂಡ್ ಗಳ ಆಫರ್

ಗಣರಾಜ್ಯೋತ್ಸವ ಮುಂಚಿತವಾಗಿ ಫ್ಲಿಪ್ ಕಾರ್ಟ್ ನಿಂದ ಬಿಗ್ ಸೇವಿಂಗ್ ಡೇಸ್ ಪ್ರಯುಕ್ತ ಹಲವು ಆಫರ್ ಗಳನ್ನು ನೀಡಲಾಗುತ್ತಿದೆ. ಈ ಮಾರಾಟವನ್ನು ಜನವರಿ 20ನೇ ತಾರೀಕಿನಿಂದ ಆರಂಭಿಸಲಾಗುತ್ತದೆ. ಆದರೆ ಫ್ಲಿಪ್ ಕಾರ್ಟ್ ಪ್ಲಸ್ ಚಂದಾದಾರರಿಗೆ ಇತರರಿಗಿಂತ ಒಂದು ದಿನ ಮುಂಚಿತವಾಗಿ ಈ ಆಫರ್ ಸಿಗುತ್ತದೆ. ಈ ಮಾರಾಟವು ಜನವರಿ 19ರ ಮಧ್ಯರಾತ್ರಿ 12 ಗಂಟೆಯಿಂದ ಶುರುವಾಗುತ್ತದೆ.

ಈ ಮಾರಾಟದ ಅವಧಿಯಲ್ಲಿ ಬ್ಯಾಂಕ್ ರಿಯಾಯಿತಿ ಸಿಗುತ್ತದೆ. ಎಚ್ ಡಿಎಫ್ ಸಿ ಬ್ಯಾಂಕ್ ಕಾರ್ಡ್ ಗಳನ್ನು ಬಳಸುವವರು ಮತ್ತು ಅದರಲ್ಲಿ ಇಎಂಐ ವಹಿವಾಟು ನಡೆಸುವವರಿಗೆ ಖರೀದಿ ಮೇಲೆ ಶೇಕಡಾ 10ರಷ್ಟು ರಿಯಾಯಿತಿ ದೊರೆಯುತ್ತದೆ. ವಿವಿಧ ಬೆಲೆಯ ಸ್ಮಾರ್ಟ್ ಫೋನ್ ಗಳು, ಎಲೆಕ್ಟ್ರಾನಿಕ್ಸ್, ಸ್ಮಾರ್ಟ್ ಟೀವಿಗಳು, ವರ್ಕ್ ಫ್ರಮ್ ಹೋಮ್ ಸಲಕರಣೆಗಳು, ಪೀಠೋಪಕರಣಗಳು, ಫ್ಯಾಷನ್ ಉತ್ಪನ್ನಗಳು ದೊರೆಯುತ್ತವೆ.

ಈ ವಿಶೇಷ ಮಾರಾಟದ ಸಂದರ್ಭದಲ್ಲಿ ಕೆಲವು ಸ್ಮಾರ್ಟ್ ಫೋನ್ ಗಳಿಗೆ ಅತ್ಯುತ್ತಮ ಡೀಲ್ ನೀಡಲಾಗಿದೆ. ಅವುಗಳ ವಿವರ ಹೀಗಿದೆ:

ರಿಯಾಲ್ಮಿ (Realme)

ರಿಯಾಲ್ಮಿ C12- 3GB RAM ಮತ್ತು 32 GB ಆಂತರಿಕ ಸಂಗ್ರಹ ಸಾಮರ್ಥ್ಯದ ಫೋನ್ ಮಾರಾಟ ಬೆಲೆ ರು. 8,499

ರಿಯಾಲ್ಮಿ 7 ರು. 13,999ರಿಂದ ಆರಂಭ. ಈ ಫೋನ್ RAM 8GB ತನಕ ಸಿಗುತ್ತದೆ ಮತ್ತು 64 MP ಕ್ವಾಡ್ ಕ್ಯಾಮೆರಾದೊಂದಿಗೆ ಬರುತ್ತದೆ.

ರಿಯಾಲ್ಮಿ 7 Pro ರು. 18,999. ಈ ಫೋನ್ ನಲ್ಲಿ sAMOLED ಡಿಸ್ ಪ್ಲೇ ಮತ್ತು 65W ಫಾಸ್ಟ್ ಚಾರ್ಜಿಂಗ್ ಬರುತ್ತದೆ.

ರಿಯಾಲ್ಮಿ 6 ಜತೆ 90Hz ರಿಫ್ರೆಷ್ ದರ ಮತ್ತು 30W ಫಾಸ್ಟ್ ಚಾರ್ಜಿಂಗ್ ಮಾರಾಟ ದರ ರು. 13,999.

ಐಫೋನ್ (iPhone)

ಐಫೋನ್ 11 ರು. 48,999ಕ್ಕೆ ಮಾರಾಟ. ಈ ಹಿಂದಿನ ದರ ರು. 54,900 ಇತ್ತು.

ಐಫೋನ್ SE A13 ಬಯೋನಿಕ್ ಚಿಪ್ ಸೆಟ್ ಬೆಲೆ ರು. 27,999 ಅದರಲ್ಲಿ ಎಚ್ ಡಿಎಫ್ ಸಿ ಕಾರ್ಡ್ ದಾರರಿಗೆ ರು. 4000 ರಿಯಾಯಿತಿ.

ಐಫೋನ್ XRಗೆ ರಿಯಾಯಿತಿ ಮತ್ತು ಬ್ಯಾಂಕ್ ಕಾರ್ಡ್ ಆಫರ್ ಇದೆ. ಆಫರ್ ಜತೆಗೆ ರು. 35,999.

ಶಿಯೋಮಿ (Xiaomi)

ಶಿಯೋಮಿ Mi 10T ರು. 26,999ಕ್ಕೆ ಖರೀದಿಸಬಹುದು. ವಿನಿಮಯ, ರಿಯಾಯಿತಿ ಹಾಗೂ ಬ್ಯಾಂಕ್ ಆಫರ್ ಮೂರೂ ಸೇರಿ ಈ ದರಕ್ಕೆ ಲಭ್ಯವಾಗುತ್ತದೆ.

ಪೊಕೊ X3 ರು. 14,999. ಸ್ನ್ಯಾಪ್ ಡ್ರಾಗನ್ 732 ಚಿಪ್ ಸೆಟ್ ಮತ್ತು 6000 mAh ಬ್ಯಾಟರಿ ಸಹಿತ ಬರುತ್ತದೆ.

ಪೊಕೊ M2 Pro ರು. 11,999ಕ್ಕೆ ಲಭ್ಯ.

ರೆಡ್ಮಿ 9i 4GB RAM ರು. 7,999.

ಸ್ಯಾಮ್ಸಂಗ್

ಸ್ಯಾಮ್ಸಂಗ್ Galaxy F41 sAMOLED ಡಿಸ್ ಪ್ಲೇ ಮತ್ತು 64MP ಕ್ಯಾಮೆರಾ ಲೆನ್ಸ್ ಬೆಲೆ ರು. 13,999. ಈ ದರದಲ್ಲಿ ಪ್ರೀ ಆರ್ಡರ್ ಗೆ ರು. 1000 ರಿಯಾಯಿತಿ ಒಳಗೊಂಡಿದೆ.

ಸ್ಯಾಮ್ಸಂಗ್ S20+ ರು. 44,999

ಸ್ಯಾಮ್ಸಂಗ್ Note 10+ ರು. 54,999.

ಮೊಟೊರೊಲಾ

ಮೊಟೊರೊಲಾ Moto G 5G ರು. 18,999. ಇದರಲ್ಲಿ ಹೊಸ ಸ್ನ್ಯಾಪ್ ಡ್ರ್ಯಾಗನ್ 750G ಇದೆ.

ಮೊಟೊರೊಲಾ One Fusion+ 6GB RAM ರು. 15,999. ಇದರಲ್ಲಿ ಸ್ನ್ಯಾಪ್ ಡ್ರ್ಯಾಗನ್ 730G ಮತ್ತು ಪಾಪ್- ಅಪ್ ಕ್ಯಾಮೆರಾ ಹಾಗೂ 64MP ಪ್ರಾಥಮಿಕ ಲೆನ್ಸ್ ಇದೆ.

Leave a Reply

Your email address will not be published.