ನಿತ್ಯವಾಣಿ,ಚಿತ್ರದುರ್ಗ,(ಜೂ.16) : ಶ್ರೀ ಕನ್ಯಕಾಪರಮೇಶ್ವರಿ ಸೌಹಾರ್ಧ ಸಹಕಾರಿ ನಿಯಮಿತ ಚಿತ್ರದುರ್ಗ ವತಿಯಿಂದ ಜಿಲ್ಲಾಸ್ಪತ್ರೆಯಲ್ಲಿ ಬುಧವಾರ ರೋಗಿಗಳಿಗೆ ಹಾಗೂ ಅವರ ಸಂಬಂಧಿಗಳಿಗೆ ಆಹಾರದ ಪೊಟ್ಟಣ ಹಾಗೂ ನೀರಿನ ಪ್ಯಾಕೆಟ್‍ಗಳನ್ನು ವಿತರಿಸಿ ಕೈಗಳಿಗೆ ಸ್ಯಾನಿಟೈಸ್ ಕೂಡ ಸಿಂಪಡಿಸಲಾಯಿತು.
ಕೋವಿಡ್-19 ಲಾಕ್‍ಡೌನ್ ಸಂಕಷ್ಟದ ಸಮಯದಲ್ಲಿ ಜಿಲ್ಲಾಸ್ಪತ್ರೆಗೆ ಬರುವ ರೋಗಿಗಳು ಹಾಗೂ ಅವರ ಅವಲಂಭಿತರು ಹಸಿವಿನಿಂದ ಇರಬಾರದೆನ್ನುವ ಸದುದ್ದೇಶದಿಂದ ಆಹಾರದ ಪೊಟ್ಟಣ ಹಾಗೂ ನೀರಿನ ಪ್ಯಾಕೆಟ್‍ಗಳನ್ನು ವಿತರಿಸಲಾಗುತ್ತಿದೆ. ಇದೇ ತಿಂಗಳ 20 ರಂದು ಬೆಂಗಳೂರಿನಲ್ಲಿ ವಾಸವಿ ಪೀಠಾರೋಹಣವಿರುವುದರಿಂದ ಒಂದು ವಾರಗಳ ಕಾಲ ಪ್ರತಿನಿತ್ಯವೂ ಜಿಲ್ಲಾಸ್ಪತ್ರೆಯಲ್ಲಿ ಸುಮಾರು 450 ರಿಂದ 500 ರೋಗಿಗಳಿಗೆ ಉಪಹಾರದ ಪ್ಯಾಕೆಟ್‍ಗಳನ್ನು ವಿತರಿಸಲಾಗುವುದೆಂದು ಶ್ರೀ ಕನ್ಯಕಾಪರಮೇಶ್ವರಿ ಸೌಹಾರ್ಧ ಸಹಕಾರಿ ನಿಯಮಿತದ ಉಪಾಧ್ಯಕ್ಷ ಎಂ.ಹೆಚ್.ಪ್ರಾಣೇಶ್ ತಿಳಿಸಿದರು.
ಶ್ರೀ ಕನ್ಯಕಾಪರಮೇಶ್ವರಿ ಸೌಹಾರ್ಧ ಸಹಕಾರಿ ನಿಯಮಿತ ನಿರ್ದೇಶಕರಾದ ಎಲ್.ಬ್ರಹ್ಮಾನಂದಗುಪ್ತ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಶೈಲಜ ಹಾಗೂ ಸಿಬ್ಬಂದಿಯವರು ಈ ಸಂದರ್ಭದಲ್ಲಿ ಹಾಜರಿದ್ದರು.ಸುದ್ದಿಗಾಗಿ, ಜಾಹೀರಾತಿಗಾಗಿ ,👉ನಿತ್ಯವಾಣಿ ಕನ್ನಡ ದಿನಪತ್ರಿಕೆ, ಸಂಪಾದಕರು ಎಸ್ ಟಿ ನವೀನ್ ಕುಮಾರ್, ಚಿತ್ರದುರ್ಗ, ಮೊಬೈಲ್ -9901254020 www.nithyavaninews.com