ನಿತ್ಯವಾಣಿ, ಚಿತ್ರದುರ್ಗ,(ಜೂ.27) : ಕೊರೋನಾ ಲಾಕ್‍ಡೌನ್‍ನಿಂದ ಕಳೆದ ಒಂದು ತಿಂಗಳಿನಿಂದಲೂ ಜಿಲ್ಲಾಸ್ಪತ್ರೆಯಲ್ಲಿ ಆರ್ಯವೈಶ್ಯ ಸಮಾಜದಿಂದ ರೋಗಿಗಳಿಗೆ ಆಹಾರದ ಪೊಟ್ಟಣ, ನೀರಿನ ಬಾಟಲ್‍ಗಳನ್ನು ನೀಡಲಾಗುತ್ತಿದ್ದು, ಶನಿವಾರ ಅಂತ್ಯಗೊಂಡಿತು.
ಆರ್ಯವೈಶ್ಯ ಸಮಾಜದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಡಿ.ಪುಟ್ಟರಾಜು ರೋಗಿಗಳಿಗೆ ಆಹಾರದ ಪೊಟ್ಟಣಗಳನ್ನು ವಿತರಿಸಿ ಮಾತನಾಡುತ್ತ ಕೊರೋನಾ ಮಹಾಮಾರಿಯನ್ನು ಓಗಲಾಡಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಲಾಕ್‍ಡೌನ್ ಘೋಷಿಸಿರುವುದರಿಂದ ಜಿಲ್ಲಾಸ್ಪತ್ರೆಗೆ ಬರುವ ರೋಗಿಗಳಿಗೆ ಹಾಗೂ ಅವರ ಸಂಬಂಧಿಕರಿಗೆ ಊಟಕ್ಕೆ ತೊಂದರೆಯಾಗಬಾರದೆನ್ನುವ ಕಾರಣಕ್ಕಾಗಿ ಕಳೆದ ಒಂದು ತಿಂಗಳಿನಿಂದಲೂ ಆಹಾರ ಹಾಗೂ ನೀರಿನ ಬಾಟಲ್‍ಗಳನ್ನು ವಿತರಿಸಲಾಯಿತು. ಸಾರ್ವಜನಿಕರು ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಕೊರೋನಾ ನಿಗ್ರಹಕ್ಕೆ ಸಹಕರಿಸುವಂತೆ ಮನವಿ ಮಾಡಿದರು.
ಆರ್ಯವೈಶ್ಯ ಸಮಾಜದ ಹೆಚ್.ಸಿ.ಕಾಂತರಾಜು, ಯಶಸ್‍ಪಾಲ, ಎಲ್.ಎನ್.ರಾಜ್‍ಕುಮಾರ್, ಮೋಹನ್‍ಕುಮಾರ್‍ಗುಪ್ತ, ಪವನ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.