ನಿತ್ಯವಾಣಿ, ಚಿತ್ರದುರ್ಗ,(ಜೂ.14) : ಕೊರೋನಾ ಎರಡನೆ ಹಂತದ ಅಲೆ ವ್ಯಾಪಕವಾಗಿ ಬಾಧಿಸುತ್ತಿರುವುದರಿಂದ ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿ ವತಿಯಿಂದ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳಿಗೆ ಹಾಗೂ ಅವರ ಸಂಬಂಧಿಕರಿಗೆ ಸೋಮವಾರ ಊಟದ ಪ್ಯಾಕೆಟ್, ನೀರಿನ ಬಾಟಲ್ ಹಾಗೂ ಬಾಳೆಹಣ್ಣು ವಿತರಿಸಲಾಯಿತು.
ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಎಂ.ನಿಶಾನಿ ಜಯಣ್ಣ ರೋಗಿಗಳಿಗೆ ಊಟದ ಪ್ಯಾಕೆಟ್ ವಿತರಿಸಿ ಮಾತನಾಡುತ್ತ ಕೊರೋನಾ ನಿಗ್ರಹಕ್ಕಾಗಿ ರಾಜ್ಯ ಸರ್ಕಾರ ಲಾಕ್‍ಡೌನ್ ಘೋಷಿಸಿರುವುದರಿಂದ ಹೊರಗಡೆ ಎಲ್ಲಿಯೂ ನೀರು ಆಹಾರ ಸಿಗದಂತ ಕಷ್ಟದ ಪರಿಸ್ಥಿತಿಯಲ್ಲಿ ಜಿಲ್ಲಾಸ್ಪತ್ರೆಗೆ ಬರುವ ರೋಗಿಗಳು ಹಾಗೂ ಅವರ ಸಂಬಂಧಿಕರು ಹಸಿವಿನಿಂದ ಬಳಲಬಾರದೆಂದು ಊಟ, ನೀರಿನ ಬಾಟಲ್, ಬಾಳೆಹಣ್ಣು ವಿತರಿಸಿದ್ದೇವೆ. ಕೊರೋನಾ ಬಗ್ಗೆ ಯಾರಲ್ಲೂ ನಿರ್ಲಕ್ಷೆ ಬೇಡ. ಕಡ್ಡಾಯವಾಗಿ ಎಲ್ಲರೂ ಮಾಸ್ಕ್ ಧರಿಸಿ, ಸ್ಯಾನಿಟ್‍ಸ್ ಬಳಸಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಮನವಿ ಮಾಡಿದರು.
ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿ ಉಪಾಧ್ಯಕ್ಷ ಡಾ.ರಹಮತ್‍ವುಲ್ಲಾ, ನಿರ್ದೇಶಕರುಗಳಾದ ಶ್ರೀನಿವಾಸ್‍ಮೂರ್ತಿ, ನಾಗರಾಜ್‍ಬೇದ್ರೆ, ಸೂರ್ಯಪ್ರಕಾಶ್, ಚಂದ್ರಪ್ಪ, ಪ್ರಕಾಶ್, ಚಿಕ್ಕಣ್ಣ, ಪ್ರಸನ್ನಕುಮಾರ್, ಮುರುಗೇಶ್, ಸೊಸೈಟಿಯ ಮ್ಯಾನೇಜರ್ ನಯೀಂ ಹಾಗೂ ಸಿಬ್ಬಂದಿ ವರ್ಗದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ಸುದ್ದಿಗಾಗಿ, ಜಾಹೀರಾತಿಗಾಗಿ ,👉ನಿತ್ಯವಾಣಿ ಕನ್ನಡ ದಿನಪತ್ರಿಕೆ, ಸಂಪಾದಕರು ಎಸ್ ಟಿ ನವೀನ್ ಕುಮಾರ್, ಚಿತ್ರದುರ್ಗ, ಮೊಬೈಲ್ -9901254020 www.nithyavaninews.com