ಆರ್ಯವೈಶ್ಯ ಸಮಾಜದಿಂದ ಹಸಿದವರಿಗೆ ಅನ್ನ,,

ನಿತ್ಯವಾಣಿ, ಚಿತ್ರದುರ್ಗ, (ಜೂ. 4) : ಚಿತ್ರದುರ್ಗ ಆರ್ಯವೈಶ್ಯ ಸಮಾಜದಿಂದ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಎಡೆಬಿಡದೆ ಆರನೇ ದಿನವಾದ ಗುರುವಾರ ಕೋವಿಡ್ ನಿಂದ ಬಳಲುತ್ತಿರುವ ರೋಗಿಗಳಿಗೆ ಮತ್ತು ಸಂಬಂಧಿಕರಿಗೆ , ಆಸ್ಪತ್ರೆಯ ಕೋವಿಡ್ ವಾರಿಯರ್ಸ್ ಗಳಿಗೆ ಹಾಗೂ ಬಡ ಜನಗಳಿಗೆ ಹಸಿದವರಿಗೆ  ಅನ್ನವನ್ನು ನೀಡಿ ಆರ್ಯವೈಶ್ಯ ಸಮಾಜ ಮಾನವಿತೆ ಮೆರೆದಿದೆ , ಪ್ರತಿದಿನ ಬಿಸಿಯಾದ ಊಟದ ಪಾಕೆಟ್ ಗಳು  ಹಾಗೂ ನೀರಿನ ಬಾಟಲಿಗಳನ್ನು ಕೊಡುತ್ತಿದೆ, ಗುರುವಾರದ ಕಾರ್ಯಕ್ರಮದ ದಾನಿಗಳಾದ ಶ್ರೀ ವೆಂಕಟೇಶ್ವರ ಜ್ಯೂವೆಲರ್ಸ್ ಮಾಲೀಕರಾದ ಎಚ್ ಸಿ ವೆಂಕಟೇಶ್ ಶೆಟ್ಟಿ ನಡೆಸಿದರು, ಈ ಕಾರ್ಯಕ್ರಮವನ್ನು ಶಾಸಕ ತಿಪ್ಪಾರೆಡ್ಡಿ ಅವರು ಉದ್ಘಾಟನೆ ಮಾಡಿದರು, ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಕಾಶಿ ವಿಶ್ವನಾಥ ಶೆಟ್ಟಿ, ಕಾರ್ಯದರ್ಶಿ ಕೆ ಆನಂದ್, ನಿರ್ದೇಶಕರುಗಳಾದ ಪಿಡಿ ಪುಟ್ಟರಾಜು, ಹೆಚ್ ಸಿ ಕಾಂತರಾಜು, ಹೆಚ್ ಕೆ ವೆಂಕಟೇಶ್, ಬಿ ಎ ರಾಮಾಂಜನೇಯ ಶೆಟ್ಟಿ, ಎಸ್ ಪಿ ಮಂಜುನಾಥ್, ಹೆಚ್ ಕೆ ನಾಗರಾಜಶೆಟ್ಟಿ, ಯುವಕರಾದ ಪಿ ಯಶಸ್ಸು, ಹರೀಶ್, ಈಶ್ವರ ಶೆಟ್ಟಿ, ಈ ಕಾರ್ಯಕ್ರಮಕ್ಕೆ ಕೈಜೋಡಿಸಿದರು, ಸುದ್ದಿಗಾಗಿ ನಿತ್ಯವಾಣಿ ಕನ್ನಡ ದಿನಪತ್ರಿಕೆ ಸಂಪಾದಕರು, ಎಸ್ ಟಿ ನವೀನ್ ಕುಮಾರ್, ಮೊಬೈಲ್ -9901254020, ಚಿತ್ರದುರ್ಗ

Leave a Reply

Your email address will not be published.