ನಿತ್ಯವಾಣಿ ,ಚಿತ್ರದುರ್ಗ,(ಮೇ.30) : ಚಿತ್ರದುರ್ಗ ಕೋಟೆಯಲ್ಲಿ ಸುಮಾರು 18 ಜನ ಪ್ರವಾಸಿ ಮಾರ್ಗದರ್ಶಿಗಳು ಪ್ರವಾಸೋದ್ಯಮ ಇಲಾಖೆಯಿಂದ ನೊಂದಾಯಿತ ರಾಗಿ ಚಿತ್ರದುರ್ಗ ಕೋಟೆ ಮತ್ತು ಚಂದ್ರವಳ್ಳಿ ಪ್ರದೇಶಗಳಲ್ಲಿ ಸರ್ಕಾರದ ಯಾವುದೇ ಸಹಾಯಧನ ಸಂಬಳವಿಲ್ಲದೆ ಕಾರ್ಯನಿರ್ವಹಿಸುತ್ತಿದ್ದ ರಾಜ್ಯ ಸರ್ಕಾರವಾಗಲಿ ಅಥವಾ ಕೇಂದ್ರ ಸರ್ಕಾರವಾಗಲೀ ನಮಗೆ ಯಾವುದೇ ಸಹಾಯವನ್ನು ನೀಡುವುದಿಲ್ಲ ಪ್ರವಾಸಿಗರು ಕೊಡುವಂತಹ ಸಲ್ಪಸ್ವಲ್ಪ ಹಣದಿಂದ ಕುಟುಂಬಗಳನ್ನು ನಿರ್ವಹಿಸಿಕೊಂಡು ಬರುತ್ತಿರುವ ಇವರಿಗೆ ಕೋವಿಡ್ ಸಂದರ್ಭದಲ್ಲಿ ಬಹಳ ಕಷ್ಟವಾಗಿರುವುದರಿಂದ ಇದನ್ನು ಮನಗೊಂಡು ಆಹಾರದ ಕಿಟ್ಟುಗಳನ್ನು ಚಿತ್ರದುರ್ಗಲೋಕಸಭಾ ಸದಸ್ಯರಾದ ಎ ನಾರಾಯಣಸ್ವಾಮಿ ರವರು ಹಂಚಿದರು.
ಈ ಸಮಯದಲ್ಲಿ ಮಾರ್ಗದರ್ಶಿಗಳು ರಾಜ್ಯ ಮತ್ತು ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಕರ್ನಾಟಕ ರಾಜ್ಯದಲ್ಲಿ ಇರುವಂತಹ ಎಲ್ಲಾ ಪ್ರವಾಸಿ ಕಾರ್ಯಗಳಿಗೆ ವಿಶೇಷ ಅನುದಾನ ಅಂದರೆ ಪ್ಯಾಕೇಜ್ ಕೊಡಿಸ ಬೇಕಾಗಿ ಸಂಸದರಲ್ಲಿ ಮನವಿ ಮಾಡಿದರು, ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ನವೀನ್, ಜಿಲ್ಲಾ ಮುಖಂಡ ಮೋಹನ್ ಇನ್ನಿತರರು ಭಾಗವಹಿಸಿದ್ದರು