ಬಡ ಕುಟುಂಬಗಳಿಗೆ ಆಸೆರೆಯಾದ ಬಿಜೆಪಿ  ಜಿಲ್ಲಾ ಯುವಮೋರ್ಚ ಅಧ್ಯಕ್ಷ ಹನುಮಂತೇಗೌಡ  : ಸಂಸದ  ಎ .ನಾರಾಯಣಸ್ವಾಮಿ.

ನಿತ್ಯವಾಣಿ, ಹಿರಿಯೂರು, (ಜೂ.10) : ಕರೋನಾ ಎರಡನೇ ಅಲೆಯ ಸಂದಿಗ್ನ ಪರಿಸ್ಥಿಯಲ್ಲಿ ಹಿರಿಯೂರಿನ 3000 ಬಡ ಕುಟುಂಬಗಳಿಗೆ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಹನುಮಂತೇ ಗೌಡ ಅವರು ಆಹಾರ ಕಿಟ್ ವಿತರಣೆ ಮಾಡುವ ಮೂಲಕ ಕುಟುಂಬಕ್ಕೆ ಆಸೆಯಾಗಿದ್ದಾರೆ ಎಂದು ಸಂಸದ ಎ ನಾರಾಯಣಸ್ವಾಮಿ ಹೇಳಿದರು.  ನಗರದ  ನೆಹರು ಮೈದಾನದಲ್ಲಿ ಗುರುವಾರ ನಡೆದ  ಬಿಜೆಪಿ  ಜಿಲ್ಲಾ ಯುವಮೋರ್ಚ ಅಧ್ಯಕ್ಷರಾದ ಹನುಮಂತೇಗೌಡರವರ ಸುಮಾರು 3000 ಕುಟುಂಬಗಳಿಗೆ ಅವರ ಮುಂದಾಳತ್ವದಲ್ಲಿ ಪೌರ ಕಾರ್ಮೀಕರಿಗೆ,ಆಟೋ ಚಾಲಕರಿಗೆ. ಕ್ಷೌರೀಕರಿಗೆ, ˌಮಡಿವಾಳ ಸಮಾಜದವರಿಗೆ,ˌ ಚಮ್ಮಾರ ಸಮಾಜದವರಿಗೆ ಈಗೆ ಸುಮಾರು 3000 ಸಾವಿರ ಕಿಟ್ ಗಳನ್ನು ವಿತರಿಸಿದರು.
ಕೊರೋನಾ ಸಮಯದಲ್ಲಿ ಜಿಲ್ಲಾದ್ಯಂತ ಆಹಾರ ಕಿಟ್ ಗಳನ್ನೂ ವಿತರಿಸಲಾಗುತ್ತಿದ್ದು ಅದರಂತೆ ಹಿರಿಯೂರಿನಲ್ಲಿ ಹನುಮಂತೇ ಗೌಡ್ರೂ ಸ್ನೇಹ ಬಳಗದಿಂದ ಹಲವಾರು ಸೇವಾ ಕಾರ್ಯಗಳನ್ನೂ ಮಾಡಲಾಗುತ್ತಿದ್ದು ಶ್ಲಾಘನಿಯ ಎಂದರೂ ಹಾಗೂ ಪ್ರತಿಯೋಬ್ಬರು ಕೋವಿಡ್ ಲಸಿಕೆ ಪಡೆಯುವಂತೆ ಮನವಿ ಮಾಡಿದರು
ವಿಧಾನಪರಿಷತ್ ಸದಸ್ಯರಾದ ಚಿದಾನಂದ ಗೌಡ  ಮಾತನಾಡಿ ಪದವೀಧರ ಕ್ಷೇತ್ರದ ಕಲ್ಯಾಣಕ್ಕೆ ಸದಾ ಕಂಕಣಾಬದ್ದಾರಾಗಿರುವುದು ಎಂದು ತಿಳಿಸಿದರು ಹಾಗೂ ಅತಿಥಿ ಶಿಕ್ಷಕರಿಗೆ ಸರ್ಕಾರದಿಂದ ಪಾಕೆಜ್ ಘೋಷಿಸಲಾಗಿದ್ದೂ ಎಲ್ಲಾರು ಅದರ ಸದುಪಯೋಗಪಡೆದುಕೋಳ್ಳಬೇಕು ಎಂದರು.
 ಹಿರಿಯೂರು ಕ್ಷೇತ್ರದ ಶಾಸಕರಾದ ಪೂರ್ಣಿಮ ಶ್ರೀನಿವಾಸ್ ಮಾತನಾಡಿ ಕೊರೊನಾ ಸಂಕಷ್ಟದ ಸಮಯದಲ್ಲಿ ಕೊರೊನಾ ರೋಗಿಗಳಿಗೆ ತೋಂದರೆಯಾಗದಂತೆ ಹಿರಿಯೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಎಲ್ಲಾ ರೀತಿಯ ವ್ಯವಸ್ಥೆ ಹಾಗೂ ಇತರ ಸಂಘಸಂಸ್ಥೆಗಳಿಂದ ಉತ್ತಮ ಸಹಕಾರ ದೊರೆತಿದ್ದೂ ಕೋರೋನಾ ಬೇರೆ ಜಿಲ್ಲೆಗಳಿಗೆ ಹಾಗೂ ತಾಲ್ಲೂಕಗಳಿಗೆ ಹೋಲಿಕೆ ಮಾಡಿದರೆ ಕೋರೊನಾ ನಿಯಂತ್ರಣದಲ್ಲಿದೆ ಎಂದರು.
ಬಿಜೆಪಿ ರಾಜ್ಯಕಾರ್ಯದರ್ಶಿಗಳಾದ ನವೀನ್ˌ ಚಿತ್ರದುರ್ಗ ಜಿಲ್ಲಾ  ಬಿಜೆಪಿ ಅಧ್ಯಕ್ಷರಾದ ಮುರುಳಿˌ ತಾಲ್ಲೂಕ ಅಧ್ಯಕ್ಷರಾದ ವಿಶ್ವನಾಥ್ , ಹಾಗೂ ಚಿತ್ರದುರ್ಗ ಜಿಲ್ಲಾ ಮತ್ತು ತಾಲ್ಲೂಕು ಬಿಜೆಪಿ ಮುಖಂಡರುಗಳು ಪಾಲ್ಗೋಂಡಿದ್ದರುˌ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಹನುಮಂತೇಗೌಡ್ರು ಮಾತಾನಾಡಿ ಕೋರೊನಾದಿಂದ ಜಿಲ್ಲೆಯಾದ್ಯಂತ ಹಲವಾರು ಬಡ ಕುಟುಂಬಗಳು ಮಾಧ್ಯಮ ವರ್ಗದವರು ಸಂಕಷ್ಟಕ್ಕೆ ಸಿಲುಕಿದ್ದೂ ಈ ನಿಟ್ಟಿನಲ್ಲಿ ಹಿರಿಯೂರಿನ ತಾಲ್ಲೂಕಿನದ್ಯಾಂತ ಸುಮಾರು ಮೂರುಸಾವಿರ ಕುಟುಂಬಗಳಿಗೆ ಉಚಿತ ಆಹಾರ ಕಿಟ್ ನೀಡುತ್ತಿರುವುದಾಗಿ ಹೇಳಿದರು ಹಾಗೂ ಯುವಕರನ್ನೂ ಕೋರೋನಾ ಸಮಯದಲ್ಲಿ ಸರ್ಕಾರದ ನಿಯಮಗಳನ್ನೂ ಪಾಲಿಸುವಂತೆ ಜಾಗ್ರೃತಗೊಳಿಸಲಾಗುವುದು ಹಾಗೂ ಕೋವಿಡ್ ಲಸಿಕೆ ಕಡ್ಡಾಯ ಹಾಕಿಸಿಕೋಳ್ಳೂವಂತೆ ಮನವಿ ಮಾಡಲಾಗುವುದು ಎಂದರು
ಈ ಸಂಧರ್ಭದಲ್ಲಿ ಬಿಜೆಪಿ ಯುವಮೋರ್ಚ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಂಪಾ ಹಾಗೂ ಚಂದ್ರಶೇಖರ್ ಹಾಗೂ ಜಿಲ್ಲಾ ಕಾರ್ಯದರ್ಶಿ ಹೆಚ್ ಕೆ ಚಂದ್ರಶೇಖರ್ ಮತ್ತು ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಧನಂಜಯ್ ಹಾಗೂ ಹನುಮಂತೇಗೌಡ ಸ್ನೇಹ ಬಳಗದವರು  ಉಪಸ್ಥಿತರಿದ್ದರು ಹಾಗೂ ಮುಂದೀನ ದಿನಗಳಲ್ಲಿ ಹಿರಿಯೂನದ್ಯಾಂತ ಹಲವು ಸೇವಾ ಕಾರ್ಯಗಳನ್ನೂ ಕೈಗೋಳ್ಳಲಾಗುವುದು ಎಂದರು.

ಸುದ್ದಿಗಾಗಿ, ಜಾಯಿರಾತಿಗಾಗಿ 👉  ನಿತ್ಯವಾಣಿ  ಕನ್ನಡ ದಿನಪತ್ರಿಕೆ, ಸಂಪಾದಕರು ಎಸ್ ಟಿ ನವೀನ್ ಕುಮಾರ್, ಚಿತ್ರದುರ್ಗ, ಮೊಬೈಲ್ -9901254020

Leave a Reply

Your email address will not be published.