ನಿತ್ಯವಾಣಿ,ಚಿತ್ರದುರ್ಗ,(ಜೂ.11) : ಜಿಲ್ಲಾಸ್ಪತ್ರೆಗೆ ಬರುವ ರೋಗಿಗಳು ಹಾಗೂ ಅವರ ಕುಟುಂಬದವರಿಗೆ ಕೊರೋನಾ ಲಾಕ್‍ಡೌನ್‍ನಿಂದಾಗಿ ಊಟಕ್ಕೆ ಸಮಸ್ಯೆಯಾಗಬಾರದೆನ್ನುವ ಉದ್ದೇಶದಿಂದ ಯುವ ವಕೀಲ ಸಮೂಹದಿಂದ ಶುಕ್ರವಾರ ಜಿಲ್ಲಾಸ್ಪತ್ರೆಯಲ್ಲಿ ಆಹಾರದ ಪೊಟ್ಟಣ, ನೀರಿನ ಬಾಟಲ್‍ಗಳನ್ನು ವಿತರಿಸಲಾಯಿತು.
ಕೊರೋನಾ ಎರಡನೆ ಹಂತದ ಅಲೆ ಶ್ರೀಮಂತರಿಂದ ಹಿಡಿದು ಬಡವರನ್ನು ಕಾಡುತ್ತಿದ್ದು, ಲಾಕ್‍ಡೌನ್‍ನಿಂದಾಗಿ ಯಾರು ಮನೆಯಿಂದ ಹೊರಬರದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂಕಷ್ಟದಲ್ಲಿ ರೋಗಿಗಳು ಹಾಗೂ ಅವರ ಸಂಬಂಧಿಕರುಗಳು ಹಸಿವಿನಿಂದ ಬಳಲಬಾರದೆಂದು ಯುವ ವಕೀಲರುಗಳು ತಮ್ಮ ಸ್ವಂತ ಖರ್ಚಿನಿಂದ ಆಹಾರದ ಪೊಟ್ಟಣ ಹಾಗೂ ನೀರಿನ ಬಾಟಲ್‍ಗಳನ್ನು ವಿತರಿಸಿ ಮಾನವೀಯತೆ ಮೆರೆದರು.
ಜೀವದ ಹಂಗು ತೊರೆದು ಕೊರೋನಾ ಕರ್ತವ್ಯದಲ್ಲಿರುವ ಪೊಲೀಸ್ ಹಾಗೂ ಗೃಹರಕ್ಷಕದಳದವರಿಗೆ ಬಿಸ್ಕತ್, ನೀರಿನ ಪ್ಯಾಕೆಟ್‍ಗಳನ್ನು ವಕೀಲರುಗಳು ವಿತರಿಸಿದರು.
ಮಾಸ್ಕ್ ಇಲ್ಲದೆ ಬಂದ ಕೆಲವರಿಗೆ ಮಾಸ್ಕ್‍ಗಳನ್ನು ನೀಡಿ ಕೊರೋನಾ ನಿಯಂತ್ರಣಕ್ಕೆ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸ್ಯಾನಿಟೈಸ್ ಬಳಸಿ ಸಾಮಾಜಿಕ ಅಂತರ ಕಾಪಾಡಿಕೊಂಡು ಕೊರೋನಾ ವಿರುದ್ದ ಎಚ್ಚರಿಕೆಯಿಂದಿರುವಂತೆ ಜಾಗೃತಿ ಮೂಡಿಸಿದರು.
ಯುವ ವಕೀಲರುಗಳಾದ ಟಿ.ನಾಗೇಂದ್ರಪ್ಪ, ರವೀಂದ್ರ, ಸುದರ್ಶನ್, ಎಂ.ಕೆ.ಲೋಕೇಶ್, ವೀರೇಶ್, ಶರಣಪ್ಪ, ಪ್ರಸನ್ನ, ರಾಮು, ರಾಜಪ್ಪ, ಜಿ.ವಿ.ತಿಪ್ಪೇಸ್ವಾಮಿ, ರಾಘವೇಂದ್ರ, ಬಿ.ಟಿ.ತಿಪ್ಪೇಸ್ವಾಮಿ, ತುಕ್ಕೇಶ್, ಪ್ರದೀಪ, ಗಿರೀಶ್, ಕೃಷ್ಣಮೂರ್ತಿ, ಪಾಂಡುರಂಗ, ಈ ಸಂದರ್ಭದಲ್ಲಿದ್ದರು. ಸುದ್ದಿಗಾಗಿ, ಜಾಹೀರಾತಿಗಾಗಿ 👉 ನಿತ್ಯವಾಣಿ ಕನ್ನಡ ದಿನಪತ್ರಿಕೆ, ಸಂಪಾದಕರು ಎಸ್ ಟಿ ನವೀನ್ ಕುಮಾರ್, ಚಿತ್ರದುರ್ಗ, ಮೊಬೈಲ್ -9901254020