ನಿತ್ಯವಾಣಿ, ಚಿತ್ರದುರ್ಗ,(ಸೆ.1) : 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆ ಅಂಗವಾಗಿ ಇಂದು ಚಿತ್ರದುರ್ಗ ನಗರದ ನೆಹರು ನಗರ ಫಸ್ಟ್ ಕ್ರಾಸ್ ವಾರ್ಡ್ ನಂಬರ್ 14 ರಲ್ಲಿ ಅಸಂಘಟಿತ ಕಾರ್ಮಿಕರ ಕಾಂಗ್ರೆಸ್ ವಿಭಾಗದ ಚಿತ್ರದುರ್ಗ ಜಿಲ್ಲಾ ಘಟಕದ ಸಹಯೋಗದೊಂದಿಗೆ ಚಿತ್ರದುರ್ಗ ಜಿಲ್ಲೆಯ ಕಾರ್ಮಿಕ ಇಲಾಖೆಯ ವತಿಯಿಂದ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರಿಗೆ ಅಗತ್ಯ ದಿನಸಿ ವಸ್ತುಗಳ ಕಿಟ್ ಗಳನ್ನು ವಿತರಿಸಲಾಯಿತು.
ಅಸಂಘಟಿತ ಕಾರ್ಮಿಕರ ಜಿಲ್ಲಾ ವಿಭಾಗದ ಜಿಲ್ಲಾ ಅಧ್ಯಕ್ಷರಾದ ಮೋಹನ್ ಪೂಜಾರಿ ಇವರ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮ ನಡೆಸಲಾಯಿತು.
ಇನ್ನು ವಿಧಾನಪರಿಷತ್ ಸದಸ್ಯರಾದ ರಘು ಆಚಾರ್ ರವರ ನಿರ್ದೇಶನದಂತೆ ಹಾಗೂ ಅಸಂಘಟಿತ ಕಾರ್ಮಿಕರ ಕಾಂಗ್ರೆಸ್ ವಿಭಾಗ ಕೆಪಿಸಿಸಿ ರಾಜ್ಯ ಅಧ್ಯಕ್ಷರಾದ ಜಿ ಎಸ್ ಮಂಜುನಾಥ್ ಇವರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಕ್ರಮದ ಉಸ್ತುವಾರಿಯನ್ನು ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳಾದ ಹನುಮಲಿ ಷಣ್ಮುಖಪ್ಪ ರವರು ವಹಿಸಿದ್ದರು, ಈ ಕಾರ್ಯಕ್ರಮದಲ್ಲಿ ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಎಂ ಕೆ . ತಾಜ್ ಪೀರ್ ರವರು ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗದ ಪದಾಧಿಕಾರಿಗಳಾದ ರವಿಕುಮಾರ್, ನಿವೃತ್ತ ಹೆಡ್ಮಾಸ್ಟರ್ ಪುಟ್ಟಸ್ವಾಮಿ, , ಇಂಟಕ್ ಚಿತ್ರದುರ್ಗ ಜಿಲ್ಲಾ ಅಧ್ಯಕ್ಷರಾದ ಅಶೋಕ್ ನಾಯ್ಡು, ಮಂಜಣ್ಣ, ಬಸವರಾಜಣ್ಣ ಹಾಗೂ ಇತರೆ 14ನೇ ವಾರ್ಡ್ ಮುಖಂಡರುಗಳು, ಸ್ವತಂತ್ರ ಹೋರಾಟಗಾರರು, ಹಿರಿಯ ನಾಗರಿಕರು, ಯುವ ಮುಖಂಡರು, ಮಹಿಳೆಯರು, ಸ್ಥಳೀಯರೆಲ್ಲ ರ ಸಹಕಾರದೊಂದಿಗೆ ನಿರ್ಗತಿಕ ಬಡ ಕಾರ್ಮಿಕರಿಗೆ ಆಹಾರ ಪದಾರ್ಥಗಳನ್ನು ವಿತರಿಸಲಾಯಿತು.