ಬಹುಜನ ಸಮಾಜ ಪಾರ್ಟಿ ಚಿತ್ರದುರ್ಗ ಜಿಲ್ಲಾ ಘಟಕ ವತಿಯಿಂದ ಆಟೋ ಚಾಲಕರಿಗೆ ಆಹಾರ ಕಿಟ್ಟು ವಿತರಣೆ

ನಿತ್ಯವಾಣಿ, ಚಿತ್ರದುರ್ಗ, (ಜೂ. 4) : ಇಂದು  ಬಹುಜನ ಸಮಾಜ ಪಾರ್ಟಿ BSP ಚಿತ್ರದುರ್ಗ ಜಿಲ್ಲಾ ಘಟಕ ವತಿಯಿಂದ ಚಿತ್ರದುರ್ಗ ನಗರದ ವಿಜ್ಞಾನ ಕಾಲೇಜ್ ಆವರಣದಲ್ಲಿ ಆಟೋ ಚಾಲಕರಿಗೆ ಉಚಿತವಾಗಿ ಆಹಾರ ಕಿಟ್ಟು ವಿತರಿಸಲಾಯಿತು.
R.k. ಪಾಂಡುರಂಗಯ್ಯ ನಿವೃತ್ತ ತಹಸೀಲ್ದಾರರು. ಉಧ್ಘಟಸಿ ರೋಗ್ಯಆರೋಗ್ಯವೇ ಸಂಪತ್ತು. ಆರೋಗ್ಯವೇ ಐಶ್ವರ್ಯ. ಎನ್ನುವ ಮೂಲಕ ಆಟೋ ಚಾಲಕರು ತುಂಬಾ ಶ್ರಮವಹಿಸಿ ದುಡಿದರು. ಆರ್ಥಿಕವಾಗಿ ಸಬಲರಾಗಲು ಸಾಧ್ಯವಿಲ್ಲ. ಹಾಗಾಗಿ ತಮ್ಮ ಮಕ್ಕಳನ್ನು ಉತ್ತಮ ವ್ಯಾಸಂಗ ಮಾಡಿಸಿ. ಮುಂದಿನ ಭವಿಷ್ಯದ ಆಸ್ತಿಯನ್ನಾಗಿ ಸ ಬೇಕೆಂದರು. ಈ ಕಾರ್ಯಕ್ರಮದಲ್ಲಿ BSP ಜಿಲ್ಲಾಧ್ಯಕ್ಷರಾದ ಎಸ್. ವೆಂಕಟೇಶ್ ಐಹೊಳೆ ಯವರು ಮಾತನಾಡಿ ಆಟೋರಿಕ್ಷಾ ಚಾಲನೆಯನ್ನು ಮಾಡಿ ಬರುವ ಆದಾಯದಲ್ಲಿ ಕುಟುಂಬ ನಿರ್ವಹಣೆ ಮಾಡುತ್ತಿದ್ದರು. ಮಾರಕವಾದ ಕಾಯಿಲೆ ಕೊರೋನಾ ಹರಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಗಳು ಏಕಾಏಕಿ ಲಾಕ್ ಡೌನ್ ಘೋಷಣೆ ಮಾಡಿರುವುದರಿಂದ, ಕೆಲಸವಿಲ್ಲದೆ .ದುಡಿಮೆ. ಇಲ್ಲದೆ .ಒಂದು ಹೊತ್ತಿನ ಊಟಕ್ಕೂ ಕಷ್ಟವಾಗಿದೆ. ಒಟ್ಟಾರೆ ಹೇಳುವುದಾದರೆ ಆಟೋ ಚಾಲಕರು. ಆರ್ಥಿಕ ಸಂಕಷ್ಟದಲ್ಲಿ ಆರೋಗ್ಯ ಸುಧಾರಿಸ ಲಾಗದೆ ಕಣ್ಣೀರಿನಲ್ಲಿ ಕೈ ತೊಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರಗಳು ಅವರಿಗೆ ಯಾವುದೇ ಮೂಲ ಸೌಲಭ್ಯಗಳನ್ನು ಒದಗಿಸದೇ ವಂಚಿಸಿ ವೆ. ಆಟೋ ಚಾಲನೆ ನಡೆಸಿ ಜೀವನ ನಡೆಸುತ್ತಿರುವುದರ ಲ್ಲಿ sc.st.obc. ಧಾರ್ಮಿಕ ಅಲ್ಪಸಂಖ್ಯಾತರು. ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇದನ್ನು ಮನಗಂಡು ಬಿಎಸ್ಪಿ ಚಿತ್ರದುರ್ಗ ಜಿಲ್ಲಾ ಘಟಕ ವತಿಯಿಂದ ಉಚಿತ ಆಹಾರ ಕಿಟ್ಟು ನೀಡಿ ಬಹುಸಂಖ್ಯಾತರಿಗೆ ಧೈರ್ಯ ತುಂಬಲಾಯಿತು. ಜಿಲ್ಲಾ ಸಂಯೋಜಕರಾದ ಮಹಾಂತೇಶ್. ಕೂನಬೇವು ಮಾತನಾಡಿ ಅಸಂಘಟಿತ ಕಾರ್ಮಿಕರು. ಒಗ್ಗಟ್ಟಾಗಿ ಉತ್ತಮ ಜೀವನ ನಡೆಸಲು ಒಬ್ಬರಿಗೊಬ್ಬರು ಸಹಕಾರಕ್ಕೆ ನಿಲ್ಲಬೇಕೆಂದರು. ಮುಖಂಡರಾದ ಮೈಲಾರಪ್ಪ ಅಂಜನಪ್ಪ ದಿಲೀಪ್ ಹನುಮಂತಪ್ಪ ಎಸ್ ಮಂಜುನಾಥ್ ಜಯಣ್ಣ ರವರು ಭಾಗವಹಿಸಿದ್ದರು. ಆಟೋ ಚಾಲಕರಾದ ಹರೀಶಣ್ಣ, ಅಂಟೋನಿ, ವಾಹಿದ್, ನಾಗಣ್ಣ,   ಕಣ್ಮೆಶ್ ,    ಜಯಣ್ಣ , ಕೆಂಚಣ್ಣ, ಪ್ರೇಮ್ ಕುಮಾರ್, ಮತ್ತಿತರರು ಹಾಜರಿದ್ದರು.

Leave a Reply

Your email address will not be published.