ನಿತ್ಯವಾಣಿ, ಚಿತ್ರದುರ್ಗ, (ಜೂ. 13) : ಸರ್ಕಾರದ ಕೋರೋನಾ ಮಾರ್ಗ ಸೂಚಿ ಪಾಲಿಸದ ಕಾರಣ ಕೆಲಹಳ್ಳಿಗಳು ರೆಡ್ ಝೂನ್ ಗೆ ಒಳಪಟ್ಟಿದೆ. ಇದಕ್ಕೆ ಮಠದಹಟ್ಟಿ ಗ್ರಾಮ ಹೊರತಾಗಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. ಕೊರೋನಾ ವೈರಸ್ ಭೀತಿ ಹಿನ್ನಲೆಯಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ನಿರ್ದೇಶನ ಮಾಡಿದಂತೆಯೇ ಎಲ್ಲರೂ ನಡೆದುಕೊಳ್ಳಬೇಕು. ಮನೆಯಿಂದ ಯಾರೊಬ್ಬರೂ ಅನವಶ್ಯಕ ಹೊರಗೆ ಬರಬಾರದು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಮನೆಯಿಂದ ಹೊರಬರುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಜೊತೆಗೆ ಆಗಾಗ ಕೈತೊಳೆಯಬೇಕು ಎಂದು ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ತಿಳಿಸಿದರು.
ಮಠದಕುರುಬರಹಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 2000 ಬಡಕುಟುಂಬಗಳಿಗೆ ಶ್ರೀ ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನ ಭೋವಿ ಗುರುಪೀಠದಿಂದ ಅಳಿಲು ಸೇವೆಯಲ್ಲಿ ಸಹಭಾಗಿತ್ವ ಒತ್ತುಕೊಂಡು ಮಾತನಾಡಿದ ಅವರು ಸಂಕಷ್ಟ ಸ್ಥಿತಿಯಲ್ಲಿ ಸಿಲುಕಿದ ಜನರಿಗೆ ಸಹಾಯ ಮಾಡುವುದೇ ನಿಜವಾದ ಮಾನವೀಯತೆ. ಕೊರೋನಾ 2 ನೇ ಅಲೆಯ ವಿಪತ್ತಿನ ಸಮಯದಲ್ಲಿ ತೊಂದರೆಗೆ ಒಳಗಾಗಿದ್ದ ಬಡ ಕುಟುಂಬಗಳಿಗೆ ಆಹಾರಧಾನ್ಯಗಳ ಕಿಟ್ ವಿತರಿಸುವ ಮೂಲಕ ಭೋವಿ ಗುರುಪೀಠ ನೆರವಿನ ಹಸ್ತ
ಚಾಚಿದೆ. ಚಿತ್ರದುರ್ಗ ಮಠದಹಟ್ಟಿ ಗ್ರಾಮಪಂಚಾಯ್ತಿಯ ವಿವಿಧ ಭಾಗಗಳಲ್ಲಿ ಬಡಕುಟುಂಬಗಳು ಅತೀವ ಸಂಕಷ್ಟಕ್ಕೆ ಒಳಗಾಗಿವೆ, ಇಂತಹ ಕುಟುಂಬಗಳನ್ನು ಗ್ರಾಮ ಪಂಚಾಯತ್ ಸದಸ್ಯರು ಭೋವಿ ಗುರುಪೀಠದ ಹಾಗೂ ವಿವಿಧ ದಾನಿಗಳ ಸಹಾಯದಿಂದ ಗುರುತಿಸಿ ಅವರ ಮನೆ ಬಾಗಿಲಿಗೆ ಆಹಾರ ಧಾನ್ಯಗಳ ಕಿಟ್ ವಿತರಿಸುವ ಮೂಲಕ ಮಾನವೀಯತೆ ಮೆರೆಯುತ್ತಿದೆ. ಕೊರೋನಾ ಕಾರಣದಿಂದ ಸಂಚಾರಕ್ಕೆ ನಿರ್ಬಂಧ
ವಿಧಿಸಿರುವ ಕಾರಣದಿಂದ ಇಂತಹ ಕುಟುಂಬಗಳುತಮ್ಮ ಕಾಯಕಕ್ಕೆ ತೆರಳುವಂತಿಲ್ಲ. ಹೀಗಾಗಿ ಇಂತಹಕುಟುಂಬಗಳ ಪರಿಸ್ಥಿತಿಯನ್ನು ಅರಿತು ಈ ಗ್ರಾಮ ಪಂಚಾಯತ್ ಸದಸ್ಯರುಗಳು ಮನೆ-ಮನೆಗೆ ಭೇಟಿ ನೀಡಿ ಅವರ ಅಗತ್ಯತೆಯನ್ನು ತಿಳಿದುಕೊಂಡು ದಾನಿಗಳ ಮೂಲಕ ದವಸ-ಧಾನ್ಯಗಳ ಕಿಟ್‍ಅನ್ನು ವಿತರಿಸುತ್ತಿದ್ದಾರೆ. ಮನೆ ಬಾಗಿಲಿಗೆ ಬಂದು ಯೋಗಕ್ಷೇಮ ವಿಚಾರಿಸಿ ಆಹಾರ ಧಾನ್ಯಗಳನ್ನು ವಿತರಿಸುವ ಗ್ರಾಮ ಪಂಚಾಯತ್ ಸದಸ್ಯರುಗಳು ಹಾಗೂ ಪಿಡಿಒ ಕಾರ್ಯಕ್ಕೆ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಮುಕ್ತ ಕಂಠದಿಂದಶ್ಲಾಘಿಸಿದ್ದಾರೆ.
ಸಮಾರಂಭದಲ್ಲಿ ಭೋವಿ ಸಮಾಜದ ರಾಜ್ಯಾಧ್ಯಕ್ಷರಾದ ಹೆಚ್.ಆನಂದಪ್ಪ, ಪಿಡಿಒ ಪಾತಣ್ಣ, ಅಧ್ಯಕ್ಷರಾದ ಶ್ರೀಮತಿ ಗೀತಾ, ಉಪಾಧ್ಯಕ್ಷರಾದ ನಿಂಗಪ್ಪ, ಸದಸ್ಯರುಗಳಾದ ರಾಮಾಂಜನೇಯ, ಶ್ರೀಮತಿ ಸವಿತಾ, ಗಣೇಶ, ಶ್ರೀಮತಿ ಯಶೋಧಮ್ಮ, ಬಯ್ಯಣ್ಣ, ಮಾಜಿ ಸದಸ್ಯ ರುದ್ರಪ್ಪ ಇನ್ನಿತರರು ಉಪಸ್ಥಿತಿಯಿದ್ದರು. ಸುದ್ದಿಗಾಗಿ, ಜಾಹೀರಾತಿಗಾಗಿ ,👉 ನಿತ್ಯವಾಣಿ ಕನ್ನಡ ದಿನಪತ್ರಿಕೆ, ಸಂಪಾದಕರು ಎಸ್ ಟಿ ನವೀನ್ ಕುಮಾರ್, ಚಿತ್ರದುರ್ಗ, ಮೊಬೈಲ್ -9901254020 www.nithyavaninews.com