ಅರಣ್ಯ ಇಲಾಖೆಯವರು ಇಟ್ಟಿದ್ದ ಬೋನಿಗೆ ಆರು ವರ್ಷದ ಚಿರತೆ ಸೆರೆಯಾಗಿರುವ ಘಟನೆ ತಾಲ್ಲೂಕಿನಲ್ಲಿ ನಡೆದಿದೆ.
ಸಿರಾತಾಲ್ಲೂಕಿನ ಸೀಬಿ ಪಂಚಾಯ್ತಿ ವ್ಯಾಪ್ತಿಯ ಉಮಾಪತಿ ಹಳ್ಳಿ ಬಳಿ ಕಳೆದ ರಾತ್ರಿ ಅರಣ್ಯ ಇಲಾಖೆಯವರು ಇಟ್ಟಿದ್ದ ಬೋನಿ ಈ ಚಿರತೆ ಬೀಳುವ ಮೂಲಕ ಜನತೆ ನಿಟ್ಟುಸಿರು ಬಿಡುವಂತಾಗಿದೆ.
ಈ ಭಾಗದಲ್ಲಿ ಹಲವು ದಿನಗಳಿಂದ ಜಾನುವಾರುಗಳು, ಸಾಕು ಪ್ರಾಣಿಗಳ ಮೇಲೆ ಚಿರತೆ ದಾಳಿ ಮಾಡಿ ಕೊಂದು ಹಾಕುತ್ತಿತ್ತು. ಇದರಿಂದ ಜನತೆ ಹೆದರಿ ಜಮೀನುಗಳಿಗೆ ಹೋಗಲು ಸಹ ಹಿಂದೇಟು ಹಾಕುವಂತಾಗಿತ್ತು.
ಚಿರತೆ ಹಾವಳಿ ನಿಯಂತ್ರಿಸುವಂತೆ ಹಲವಾರು ಬಾರಿ ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳ ಗಮನ ಸೆಳೆದಿದ್ದರು.
ಗ್ರಾಮಸ್ಥರ ಮನವಿ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ಕೈಗೊಂಡು ಚಿರತೆ ಓಡಾಡುವ ಚಲನವಲನ ಗಮನಿಸಿ ಬೋನು ಉಮಾಪತಿ ಹಳ್ಳಿ ಬಳಿ ಬೋನ್ ಇಟ್ಟಿದ್ದರು.
ಅರಣ್ಯ ಇಲಾಖೆಯವರು ಇಟ್ಟಿದ್ದ ಬೋನಿ ಕಳೆದ ರಾತ್ರಿ 6 ವರ್ಷದ ಚಿರತೆ ಬಿದ್ದಿದ್ದು, ಸೆರೆಯಾಗಿರುವ ಈ ಚಿರತೆಯನ್ನು ಅರಣ್ಯಕ್ಕೆ ಬಿಡಲು ಕೊಂಡೊಯ್ಯಲಾಗಿದೆ.