ನುಸಿ ರೋಗದ ಕಾಟದಿಂದಾಗಿ ಕಂಗಲಾದ ರೈತ

ನಿತ್ಯವಾಣಿ, ಚಿತ್ರದುರ್ಗ,(ಅ.11) : ಚಿತ್ರದುರ್ಗ ತಾಲ್ಲೂಕಿನ ಲಿಂಗಾವರಹಟ್ಟಿ ಗ್ರಾಮದ ರೈತ ದೊರೆಸ್ವಾಮಿ ಅವರು ಪೇಪರ್ ಎಲ್ಲೋ ಹೂವ್ವನ್ನ ಬೆಳೆದಿದ್ದು ಇದೀಗ ಕಾಣಿಸಿಕೊಂಡಿರುವ ನುಸಿ ರೋಗದ ಕಾಟದಿಂದಾಗಿ ಕಂಗಾಲಾಗಿ ಹೋಗಿದ್ದಾನೆ. ರೈತ ದೊರೆಸ್ವಾಮಿ ಎಂಬುವವರು ಇರುವ ಎರಡು ಎಕರೆ ಜಾಗದಲ್ಲಿ ಸುಮಾರು ಎರಡು ಲಕ್ಷ ಹಣ ಖರ್ಚು ಮಾಡಿ ಪೇಪರ್ ಎಲ್ಲೋ ಹೂವ್ವನ್ನ ಬೆಳೆದಿದ್ದಾನೆ ಒಂದೆರಡು ಬಾರಿ ಈಗಾಗಲೆ ಹೂವ್ವನ್ನ ಕಿತ್ತಿದ್ದು ಮಾರಾಟ ಸಹ ರೈತ ಮಾಡಿದ್ದಾನೆ ಆದರೆ ಇದೀಗ ಈ ಹೂವ್ವಿನ ಗಿಡಗಳಿಗೆ ನುಸಿ ರೋಗ ಕಾಣಿಸಿಕೊಂಡಿದ್ದು ರೈತ ತಲೆಮೇಲೆ ಕೈ ಹೊತ್ತು ಕೂತಿದ್ದು ಇನ್ನೇನು ಈ ಗಿಡಗಳು ಉಪಯೋಗಕ್ಕೆ ಬಾರದ ಹಿನ್ನೆಲೆ ಕುರಿಗಳನ್ನ ಹೊಲದಲ್ಲಿ ಬಿಟ್ಟು ಮೇಯಿಸುತ್ತಿರುವುದು ಕಂಡು ಬಂದಿದೆ. ಇನ್ನೂ ಬೆಳೆದ ಬೆಳೆ ಸಂಪೂರ್ಣ ನುಸಿ ರೋಗಕ್ಕೆ ತುತ್ತಾಗಿ ಬೆಳೆ ಹಾಳಾಗಿದ್ದು ಯಾವುದೇ ಉಪಯೋಗಕ್ಕೆ ಬಾರದ ಹಿನ್ನೆಲೆ ಇದರಿಂದ ನೊಂದಿರುವ ರೈತ ದೊರೆಸ್ವಾಮಿ ಅವರು ಕುರಿಗಳನ್ನ ಬಿಟ್ಟು ಮೇಯಿಸುತ್ತಿದ್ದು ಇದರಿಂದ ರೈತನಿಗೆ ಸುಮಾರು ಹತ್ತು ಲಕ್ಷಕ್ಕೂ ಹೆಚ್ಚು ನಷ್ಟ ಉಂಟಾಗಿದೆ ಎಂದು ರೈತ ತನ್ನ ಅಳಲನ್ನ ತೋಡಿಕೊಂಡಿದ್ದಾನೆ. ಇನ್ನೂ ಈ ಗಿಡಗಳು ಹಾಗೆ ಇದ್ದರೆ ಇದರಿಂದ ದೀಪಾವಳಿ ಹಬ್ಬದ ವರೆಗೂ ಸಹ ಇದರಲ್ಲಿ ಹೂವ್ವುಗಳು ಬಿಟ್ಟು ರೈತನಿಗೆ ಉತ್ತಮ ಲಾಬದಾಯಕವು ಆಗುತ್ತಿದ್ದು ಆದರೆ ಇಂತಹ ಸಂದರ್ಭದಲ್ಲಿ ಈ ನುಸಿ ರೋಗ ಕಾಣಿಸಿಕೊಂಡಿದ್ದು ಬೆಳೆದ ಬೆಳೆ ಕೈಗೆ ಸಿಗದೆ ಖರ್ಚು ಮಾಡಿದ ಹಣವು ಬಾರದೆ ಅನ್ನಧಾತ ಕಂಗಾಲಾಗಿ ಹೋಗಿದ್ದು ಸರ್ಕಾರ ಇವರ ನೆರವಿಗೆ ಬರಬೇಕಿದೆ ಎಂದು ರೈತರು ಕೇಳಿಕೊಂಡಿದ್ದಾರೆ

Leave a Reply

Your email address will not be published.