ಸಾಣೇಹಳ್ಳಿಯ ಶ್ರೀಮಠದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಉಚಿತ ಪ್ರವೇಶ

ನಿತ್ಯವಾಣಿ,ಸಾಣೇಹಳ್ಳಿ, (ಜೂನ್. 18 ) : ಇಲ್ಲಿನ ಶ್ರೀಮಠದ ಆಶ್ರಯದಲ್ಲಿ ನಡೆಯುತ್ತಿರುವ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಉಚಿತ ಊಟ-ವಸತಿ ನೀಡುವ ಕುರಿತು ಮಾತನಾಡಿದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಕಳೆದ ಎರಡು ವರ್ಷಗಳಿಂದ ಸತತವಾಗಿ ಕಾಡುತ್ತಿರುವ ಕೋವಿಡ್ ಎಲ್ಲ ಕ್ಷೇತ್ರಗಳನ್ನು ಹೈರಾಣಾಗಿಸಿದೆ. ಇದಕ್ಕೆ ಶೈಕ್ಷಣಿಕ, ಸಾಂಸ್ಕøತಿಕ, ಆರ್ಥಿಕ ಕ್ಷೇತ್ರಗಳೂ ಹೊರತಾಗಿಲ್ಲ. ಆರ್ಥಿಕವಾಗಿ ಸುಸ್ಥಿಯಲ್ಲಿದ್ದ ಅನೇಕ ಕುಟುಂಬಗಳು ಸೂಕ್ತ ವರಮಾನವಿಲ್ಲದೆ ಒಂದು ಹೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ಈ ಹಿನ್ನೆಲೆಯಲ್ಲಿ ಶ್ರೀಮಠವನ್ನು ಆಶ್ರಯಿಸಿ ಬರುವವರ ಸಂಖ್ಯೆಯೂ ಹೆಚ್ಚಾಗಿದೆ. ಅದರಲ್ಲೂ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಮಕ್ಕಳನ್ನು ಸೇರಿಸುವ ಇಂಗಿತವನ್ನು ವ್ಯಕ್ತಪಡಿಸುವವರ ಸಂಖ್ಯೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ನಮ್ಮಲ್ಲಿರುವ ಭೌತಿಕ ಮತ್ತು ಮಾನವ ಸಂಪನ್ಮೂಲಗಳನ್ನು ದಷ್ಟಿಯಲ್ಲಿಟ್ಟುಕೊಂಡು 5 ನೆಯ ತರಗತಿಯಿಂದ 10 ನೆಯ ತರಗತಿಯ ವರೆಗಿನ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಪ್ರತಿ ತರಗತಿಗೆ 30 ವಿದ್ಯಾರ್ಥಿಗಳಂತೆ 180 ವಿದ್ಯಾರ್ಥಿಗಳಿಗೆ ಉಚಿತ ಊಟ-ವಸತಿ ನೀಡುವ ಸಂಕಲ್ಪ ಮಾಡಿದ್ದೇವೆ.

ಈಗಾಗಲೇ 25-30 ಲಕ್ಷಗಳ ವೆಚ್ಚದಲ್ಲಿ ಪ್ರಾಥಮಿಕ, ಪ್ರೌಢಶಾಲೆ ಮತ್ತು ಬಾಲಕಿಯರ ಮತ್ತು ಬಾಲಕರ ವಿದ್ಯಾರ್ಥಿ ನಿಲಯಗಳನ್ನು ದುರಸ್ಥಿ ಮಾಡಿಸಿ ಸುಣ್ಣ-ಬಣ್ಣ ಮಾಡಿಸಲಾಗಿದೆ. ಶೈಕ್ಷಣಿಕ ಪ್ರಗತಿಯ ಹಿನ್ನೆಲೆಯಲ್ಲಿ ಸಿಬ್ಬಂದಿವರ್ಗ ಸಕಲ ಸಿದ್ಧತೆಯನ್ನೂ ಮಾಡಿಕೊಳ್ಳುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಕೈಲಾದಮಟ್ಟಿಗೆ ನೆರವಾಗುವುದು ಎಲ್ಲರ ಆದ್ಯ ಕರ್ತವ್ಯ. ಈ ಹಿನ್ನೆಲೆಯಲ್ಲಿ ಎಂದಿನಂತೆ ಶ್ರೀಮಠದ ಭಕ್ತರು, ಅನುಯಾಯಿಗಳು, ಅಭಿಮಾನಿಗಳು, ಹಳೆಯ ವಿದ್ಯಾರ್ಥಿಗಳು ಮೊದಲಾದವರೆಲ್ಲರೂ ಹಣದ ರೂಪದಲ್ಲಿ, ದವಸ-ದಾನ್ಯ, ತರಕಾರಿ, ಶೈಕ್ಷಣಿಕ ಪರಿಕರಗಳ ರೂಪದಲ್ಲಿ ಸಹಾಯ ಮಾಡುವವರು ಮುಂದೆ ಬರಬೇಕಾಗಿದೆ. ಹಣದ ರೂಪದಲ್ಲಿ ಸಹಾಯ ಮಾಡುವವರು ಎಸ್ ಬಿ ಖಾತೆ ಸಂಖ್ಯೆ: 10796101011119 (IFSC :PKGB0010796) ಗೆ ಆರ್ ಟಿ ಜಿ ಎಸ್ ಅಥವ ನೆಪ್ಟ್ ಮೂಲಕ ವರ್ಗಾಯಿಸಬಹುದು. ಆದಾಯ ತೆರಿಗೆ ವಿನಾಯಿತಿಗೆ ಸಂಬಂಧಿಸಿದಂತೆ `80 ಜಿ’ ರಸೀದಿಯನ್ನು ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9663177254, 9741014115, 9972704696 ಗಳನ್ನು ಸಪರ್ಕಿಸಬಹುದು ಎಂದು ತಿಳಿಸಿದರು..ಸುದ್ದಿಗಾಗಿ, ಜಾಹೀರಾತಿಗಾಗಿ ,👉ನಿತ್ಯವಾಣಿ  ಕನ್ನಡ ದಿನಪತ್ರಿಕೆ, ಸಂಪಾದಕರು ಎಸ್ ಟಿ ನವೀನ್ ಕುಮಾರ್, ಚಿತ್ರದುರ್ಗ, ಮೊಬೈಲ್ -9901254020   www.nithyavaninews.com

 

Leave a Reply

Your email address will not be published.