ನಿತ್ಯವಾಣಿ, ಹಿರಿಯೂರು,(ಜೂ.5) : ಶುಕ್ರವಾರ ಹನುಮಂತೇ ಗೌಡ್ರು ಸ್ನೇಹ ಬಳಗ ಹಿರಿಯೂರು ಇವರ ವತಿಯಿಂದ ಹಿರಿಯೂರಿನ ಎ ಪಿ ಎಂ ಸಿ ಮಾರುಕಟ್ಟೆಯಲ್ಲಿ ವಿವಿಧ ಹಳ್ಳಿಗಳ ರೈತರಿಗೆ ಹಾಗೂ ನಿರಾಶ್ರೀತರಿಗೆ & ಹಮಾಲರೀಗೆ ಬೆಳಗಿನ ಉಚಿತ ಉಪಾಹಾರ ವ್ಯವಸ್ಥೆ ಮಾಡಲಾಗಿತ್ತು ಈ ಸಂದರ್ಭದಲ್ಲಿ ಬಿಜೆಪಿ ಯುವಮೋರ್ಚ ಜಿಲ್ಲಾಧ್ಯಕ್ಷರು ಮತ್ತು ಹನುಮಂತೇಗೌಡ್ರು ಸ್ನೇಹಿತರಾದ ಹಾಗೂ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಕಾರ್ಯದರ್ಶಿಯಾದ ಹೆಚ್ ಕೆ ಚಂದ್ರಶೇಖರ್ ಮಾತನಾಡಿ ಕೋವಿಡ್ 2 ನೇ ಅಲೆಯ ಸಂದೀಗ್ನ ಸಮಾಯದಲ್ಲಿ ಸಮಾಜದಲ್ಲಿನ ಪ್ರತಿಯೊಬ್ಬರೂ ಸಹ ತಮ್ಮ ಕೈಲಾದಷ್ಟು ಸಹಾಯ ಸಹಕಾರಗಳನ್ನು ನಿರಾಶ್ರಿತರಿಗೆ ಹಾಗೂ ಬಡವರಿಗೆ ಮಾಡಬೇಕು ಎಂದರು ಮತ್ತು ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾದ ಹಾಗೂ ಹನುಮಂತೇಗೌಡರವರ ಸ್ನೇಹˌ ಸಹಕಾರˌ ಸಹಾಯದˌ ಹಾಗೂ ಅವರ ನಾಯಕತ್ವ ಮತ್ತು ಮುಂದಾಳತ್ವದ ಗುಣಗಳು ನಮ್ಮ ಯುವಜನಾಂಗಕ್ಕೆ ಹಾಗೂ ನಮ್ಮ ಸ್ನೇಹಿತರಿಗೆ ಸ್ಫೂರ್ತಿದಾಯಕವಾಗಿದ್ದೂ ಹಾಗೂ ಅವರ ಸಂಘಟನಾ ಚಾತುರ್ಯ ನನ್ನೇಲ್ಲಾ ಸ್ನೇಹಿತರಿಗೆ ಮಾರ್ಗದರ್ಶನದ ದಾರೀ ದೀಪವಾಗಿದ್ದೂ ಮುಂದೀನ ದಿನಗಳಲ್ಲಿ ಚಿತ್ರದುರ್ಗ ಜಿಲ್ಲಾದ್ಯಾಂತ ಹನುಮಂತೇಗೌಡ ರವರ ಮುಂದಾಳತ್ವದಲ್ಲಿ ಹಲವಾರು ಸೇವಾ ಕಾರ್ಯಗಳನ್ನು ಮಾಡಲಾಗುವುದು ಎಂದು ತಿಳಿಸಿದರು.
ಈ ಸಂರ್ಭದಲ್ಲಿ ಹನುಮಂತಗೌಡ್ರೂ ಸ್ನೇಹಬಳಗದ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಕಾರ್ಯಕಾರಣಿ ಸದಸ್ಯರಾದ ಧನಂಜಯ್ˌ ಶಿವಪ್ರಸಾದ್ˌ ಹರೀಶ್ˌ ವಸಂತ್ ಕುಮಾರ್ˌ ಕಿಶನ್ ಹಾಗೂ ಬಂಜಾರ ಜಾಗೃತದಳದ ತಾಲ್ಲೂಕು ಅಧ್ಯಕ್ಷರು ಮಂಜುನಾಥ್ ಮತ್ತು ಭರತ್ ಮುಂತಾದವರು ಉಪಸ್ಥಿತರಿದ್ದರು.