ಕೊರೋನದಿಂದ ತಂದೆ-ತಾಯಿ ಕಳೆದುಕೊಂಡ ಅನಾಥ ಮಕ್ಕಳ ಉಚಿತ  ವಿದ್ಯಾಭ್ಯಾಸಕ್ಕೆ ಮುಂದಾದ ಪುರುಷೋತ್ತಮಾನಂದಪುರಿ ಶ್ರೀಗಳು

 ನಿತ್ಯವಾಣಿ ,ಚಿತ್ರದುರ್ಗ,(ಜೂ.1) :  ಕೊರೋನ ಮಹಾಮಾರಿ ಯಿಂದ ಮರಣಹೊಂದಿದ ಅನಾಥ ಮಕ್ಕಳಿಗೆ ಪುರುಷೋತ್ತಮಾನಂದಪುರಿ ಶ್ರೀಗಳು ಭಗೀರಥ ಪೀಠ, ಬ್ರಹ್ಮ ವಿದ್ಯಾನಗರ, ಹೊಸದುರ್ಗ ಇವರು ಸಹಾಯ ಹಸ್ತ ಚಾಚಿದ್ದಾರೆ,  ಶ್ರೀಗಳು ಮಠದ ಟ್ರಸ್ಟಿನ ಪದಾಧಿಕಾರಿಗಳ ಜೊತೆಯಲ್ಲಿ ಮಹೋನ್ನತವಾದ ಕಾರ್ಯವನ್ನು ಕೈಗೊಂಡಿದ್ದಾರೆ,
ಯಾವುದೇ ಮೂಲೆಯಲ್ಲಿರುವ ಅನಾಥ ಮಕ್ಕಳಿಗೆ ಯಾವುದೇ ಪಂಗಡದಲ್ಲಿ ಇದ್ದರು ಅಂತವರಿಗೆ ನಮ್ಮ ಶ್ರೀಮಠದಲ್ಲಿ ಬರುವಂತಹ ಶಾಲಾ-ಕಾಲೇಜುಗಳಲ್ಲಿ ಒಂದನೇ ತರಗತಿಯಿಂದ ದ್ವಿತೀಯ ಪಿಯುಸಿ ವರೆಗೆ ಉಚಿತ ವಿದ್ಯಾಭ್ಯಾಸ ಹಾಗೂ ವಸತಿ ಬಟ್ಟೆ ಊಟ ಶಿಕ್ಷಣ ಕೊಡಿಸಲು ಮುಂದೆ ಬಂದಿರುತ್ತಾರೆ,
ಹಾಗೆ ಈ ಮಕ್ಕಳಿಗೆ ದಾನಿಗಳಿಂದ ಇವರ ಹೆಸರಿಗೆ ಹತ್ತು ಸಾವಿರ ಠೇವಣಿಗಳನ್ನು ಮಾಡಲಿಕ್ಕೆ ವ್ಯವಸ್ಥೆ ಮಾಡಿದ್ದಾರೆ, ಈ ಕರೋನಾ ಮಹಾಮಾರಿ ಕಡಿಮೆಯಾದ ನಂತರ ನಮ್ಮ ಶ್ರೀಮಠಕ್ಕೆ ಕರೆತರಲು ನಾಗರಿಕರಿಗೆ ಮಾಧ್ಯಮದ ಮುಖಾಂತರ ಹೇಳಿಕೆಯನ್ನು ಕೊಟ್ಟಿದ್ದಾರೆ, ಹಾಗೂ ಇದಲ್ಲದೆ ಪ್ರತಿದಿನ ಶ್ರೀಮಠದಲ್ಲಿ ಬಡವರಿಗೆ ಆಹಾರದ ಕಿಟ್ಟು ಗಳನ್ನು ನೀಡುತ್ತಿರುವುದು ಶ್ಲಾಘನೀಯ, ಶ್ರೀಗಳಿಗೆ ಸಂಘ-ಸಂಸ್ಥೆಗಳು ಮುಂದೆ ಬಂದು ಉನ್ನತ ಈ ಕಾರ್ಯಕ್ಕೆ ಕೈಜೋಡಿಸಬೇಕಾಗಿದೆ ಎಂದು ನಮ್ಮ ನಿತ್ಯವಾಣಿ ದಿನಪತ್ರಿಕೆ ಮನವಿ ಮಾಡಿದೆ

Leave a Reply

Your email address will not be published.