ಮುಂಬೈ, ಫೆ.1- ನಿನ್ನೆಯಷ್ಟೇ ಪ್ರಧಾನಿ ಮೋದಿ ಅವರು ತಮ್ಮ ಮನ್‍ಕಿಬಾತ್‍ನಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ತರಬೇತುದಾರ ರವಿಶಾಸ್ತ್ರಿಯವರನ್ನು ಗುಣಗಾನ ಮಾಡಿದ್ದರು.
ಆಸ್ಟ್ರೇಲಿಯಾ ನೆಲದಲ್ಲಿ ಭಾರತ ಸರಣಿ ಗೆಲ್ಲುವಲ್ಲಿ ಕೊಹ್ಲಿ ಹಾಗೂ ಶಾಸ್ತ್ರಿಯವರ ಕೊಡುಗೆ ಅಪಾರವಾಗಿದೆ ಎಂದು ಅವರನ್ನು ಗುಣಗಾನ ಮಾಡಿದ್ದರು.
ಮೋದಿಯವರು ನೀಡಿದ ಶಹಬಾಸ್‍ಗಿರಿಗೆ ಬದಲಾಗಿ ರವಿಶಾಸ್ತ್ರಿ ಟ್ವಿಟ್ ಮಾಡಿ, ನೀವು ಟೀಂ ಇಂಡಿಯಾ ಬಗ್ಗೆ ಆಡಿರುವ ಮನದಾಳದ ಮಾತುಗಳಿಗೆ ಧನ್ಯವಾದಗಳು, ನಿಮ್ಮ ನುಡಿಗಳು ಮುಂದಿನ ದಿನಗಳಲ್ಲಿ ಎಷ್ಟೇ ಕ್ಲಿಷ್ಟ ಪರಿಸ್ಥಿತಿಯನ್ನು ಎದುರಿಸಲು ಧೈರ್ಯ ತುಂಬುವ ನುಡಿಗಳಾಗಿವೆ, ಧನ್ಯವಾದಗಳು ಜೈ ಹಿಂದ್ ಎಂದು ಟ್ವಿಟ್ ಮಾಡಿದ್ದಾರೆ.
ವಿರಾಟ್ ಕೊಹ್ಲಿ ಹಾಗೂ ಅಜಿಂಕ್ಯಾ ರಹಾನೆ ಅವರು ಕೂಡ ಮೋದಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.