ನಿತ್ಯವಾಣಿ, ಚಿತ್ರದುರ್ಗ, (ಮೇ. 19) : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತಾಲ್ಲೂಕು ಶಾಖೆ ಹೊಸದುರ್ಗ ವತಿಯಿಂದ ಇಂದು ಸಾರ್ವಜನಿಕ ಆಸ್ಪತ್ರೆ ಹೊಸದುರ್ಗ ಇವರಿಗೆ 2 ಲಕ್ಷ ಬೆಲೆಯ 3 ಆಮ್ಲಜನಕ ಸಾಂದ್ರಕ ಗಳನ್ನು ವಿತರಿಸಲಾಯಿತು.
ಹೊಸದುರ್ಗ ಸರ್ಕಾರಿ ಆಸ್ಪತ್ರೆಯ ಆಡಳಿತ ಅಧಿಕಾರಿಯಾದ ಡಾಕ್ಟರ್ ಸಂಜಯ್ ರವರು ಸರ್ಕಾರಿ ಆಸ್ಪತ್ರೆಗೆ ಅಗತ್ಯವಾದ ಆಮ್ಲಜನಕ ಸಾಂದ್ರತೆಗಳನ್ನು ಪಡಿಸುವಂತೆ ಕೊಡಿಸುವಂತೆ ಸರ್ಕಾರಿ ನೌಕರರ ಸಂಘದ ಹೊಸದುರ್ಗ ಶಾಖೆಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ಮನವಿ ಮಾಡಲಾಗಿತ್ತು ಮನವಿಗೆ ಸ್ಪಂದಿಸಿದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸರಿಸುಮಾರು ಎರಡು ಲಕ್ಷ ರೂಗಳ ವೆಚ್ಚದಲ್ಲಿ 3ಆಮ್ಲಜನಕ ಸಾಂದ್ರಕಗಳನ್ನು ಕೊಡುಗೆಯಾಗಿ ನೀಡಿರುತ್ತಾರೆ. ಇದು ಇಡೀ ಹೊಸದುರ್ಗ ತಾಲೂಕಿನ ಹಾಗೂ ಚಿತ್ರದುರ್ಗ ಜಿಲ್ಲೆಯ ಸಮಸ್ತ ಸರ್ಕಾರಿ ನೌಕರರು ಹೆಮ್ಮೆಪಡುವಂತಹ ವಿಚಾರವಾಗಿದೆ ಎಂದು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಕೆ ಮಂಜುನಾಥ್ ರವರು ಮಾತನಾಡಿ ಈ ಕರೋನಾ ಸಂದಿಗ್ಧ ಪರಿಸ್ಥಿತಿಯಲ್ಲಿ ಮೊದಲ ಸಾಲಿನಲ್ಲಿ ನಿಂತು ಕೆಲಸ ನಿರ್ವಹಿಸುತ್ತಿರುವ ನನ್ನೆಲ್ಲಾ ಆತ್ಮೀಯ ಕರೋನಾ ಯೋಧರಾದ ವೈದ್ಯರು ಪೊಲೀಸರು ಶುಶ್ರೂಷಕರು ಅಂಗನವಾಡಿ ಕಾರ್ಯಕರ್ತರು ಹಾಗೂ ಶಿಕ್ಷಕರು, ಅಗತ್ಯ ಸೇವೆ ಸಲ್ಲಿಸುತ್ತಿರುವ ಎಲ್ಲಾ ಇಲಾಖೆಗಳ ನೌಕರರಿಗೆ ಸರ್ಕಾರಿ ನೌಕರರ ಸಂಘದ ವತಿಯಿಂದ ವಿಶೇಷವಾದಂತಹ ಅಭಿನಂದನೆಗಳು ಧನ್ಯವಾದಗಳನ್ನು ತಿಳಿಸಿದರು. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಸರ್ಕಾರಿ ನೌಕರರ ಬಗ್ಗೆ ಒಂದಷ್ಟು ಅಭಿಮಾನದ ಪ್ರೋತ್ಸಾಹದ ಉತ್ಸಾಹಭರಿತ ಮಾತುಗಳನ್ನು ಪತ್ರಿಕ ಮಾಧ್ಯಮದವರು ಪ್ರಕಟಿಸಿ ಕರೋನಾ ಕರ್ತವ್ಯದಲ್ಲಿ ನಿರತ ನೌಕರರಿಗೆ ಉತ್ಸಾಹಭರಿತರಾಗಿ ಕೆಲಸ ನಿರ್ವಹಿಸುವಂತಹ ವಾತಾವರಣ ನಿರ್ಮಾಣವಾಗಿದೆ. ಜೊತೆಗೆ ಇದೀಗ ಬಂದಂತಹ ಪತ್ರಿಕಾ ಮಾಧ್ಯಮಗಳ ವರದಿಯಂತೆ *ಶಿಕ್ಷಕರನ್ನು ಫ್ರೆಂಟ್ ಲೈನ್ ವಾರಿಯರ್ಸ್ ಎಂದು ಘೋಷಣೆ ಮಾಡಿರುವ ಕರ್ನಾಟಕ ರಾಜ್ಯ ಸರ್ಕಾರ ಮುಖ್ಯಮಂತ್ರಿಗಳು ಸರ್ಕಾರಿ ನೌಕರರ ಬಗ್ಗೆ ಅಪಾರ ಕಾಳಜಿ ಗೌರವ ಅಭಿಮಾನ ಹೊಂದಿರುವ ಎಮ್ಮೆಯ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪ ಅವರಿಗೆ ಕಾರ್ಯದಲ್ಲಿ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿ ಈ ಆದೇಶ ಹೊರಡಿಸುವಲ್ಲಿ ಪ್ರಮುಖ ಪಾತ್ರವಹಿಸಿದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಷಡಕ್ಷರಿಯವರಿಗೆ ಹಾಗೂ ಕೇಂದ್ರ ಸಂಘದ ಎಲ್ಲಾ ಪದಾಧಿಕಾರಿಗಳಿಗೆ* ಹಾಗೂ ಈ ಆದೇಶ ಹೊರಡಿಸಲು ಕಾರಣೀಭೂತರಾದ ಎಲ್ಲಾ ಹಂತದ ಅಧಿಕಾರಿ/ನೌಕರ ವರ್ಗದವರಿಗೆ ಪತ್ರಿಕಾ ಮಾಧ್ಯಮಗಳ ಮೂಲಕ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆಯ ಎಲ್ಲಾ ಪದಾಧಿಕಾರಿಗಳ ಪರವಾಗಿ ಅಭಿನಂದನೆಗಳನ್ನು ಹಾಗೂ ಧನ್ಯವಾದಗಳನ್ನು ಈ ಮೂಲಕ ತಿಳಿಯಪಡಿಸುತ್ತೇನೆ.
ಸರ್ಕಾರಿ ನೌಕರರು ಸರ್ಕಾರದ ಆಡಳಿತಯಂತ್ರದ ಒಂದು ಭಾಗವಾಗಿ ಸರ್ಕಾರದ ಯೋಜನೆಗಳನ್ನು ಕಾರ್ಯಕ್ರಮಗಳನ್ನು ಸಾರ್ವಜನಿಕರಿಗೆ ತಲುಪಿಸುವಂತಹ ಜವಾಬ್ದಾರಿಯುತವಾದ ಕೆಲಸಗಳನ್ನು ನಿರ್ವಹಿಸುವ ಜೊತೆಗೆ ಸಾರ್ವಜನಿಕರಿಗಾಗಿ ಆಮ್ಲಜನಕ ಸಾಂದ್ರಕಗಳನ್ನು ಕೊಡುಗೆಯಾಗಿ ನೀಡುವ ಮೂಲಕ ಸಮಾಜಮುಖಿ ಕೆಲಸಗಳಲ್ಲಿ ಸೈ ಎನಿಸಿಕೊಂಡಿದೆ. ಪ್ರಕೃತಿ ವಿಕೋಪಗಳು ಸಂಭವಿಸಿದಾಗ ಹಾಗೂ ಕಳೆದ ಬಾರಿಯ ಕರೋನಾ ನಿಯಂತ್ರಣ ನಿಧಿಗೆ ಸರ್ಕಾರಿ ನೌಕರರ ಒಂದು ದಿನದ ವೇತನವನ್ನು ನೀಡುವ ಮೂಲಕ ಮಾನವೀಯತೆಯನ್ನು ಮೆರೆದಿದ್ದಾರೆ ಎಂದು ತಿಳಿಸಿದರು. ಹಾಗೂ ಕರೋನಾ ಕರ್ತವ್ಯ ನಿರತ ಸರ್ಕಾರಿ ನೌಕರರು ತಮ್ಮ ವೈಯಕ್ತಿಕ ರಕ್ಷಣೆಯ ಜೊತೆಗೆ ತಮ್ಮ ಕುಟುಂಬದ ರಕ್ಷಣೆಯನ್ನು ಮಾಡಿಕೊಂಡು ಸರ್ಕಾರದ ಕೆಲಸಕ್ಕೆ ಕಿಂಚಿತ್ತು ಕುಂದುಬಾರದಂತೆ ಕೆಲಸ ನಿರ್ವಹಿಸಿ ಎಂದು ಜಿಲ್ಲೆಯ ಹಾಗೂ ನಾಡಿನ ಸಮಸ್ತ ಸರ್ಕಾರಿ ನೌಕರರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಶಾಖೆಯ ಅಧ್ಯಕ್ಷರಾದ ಎಂ ಆರ್ ಶಾಂತಪ್ಪ, ಸಾರ್ವಜನಿಕ ಕ್ಷೇತ್ರ ಶಿಕ್ಷಣಾಧಿಕಾರಿ ಗಳಾದ ಎಲ್.ಜಯಪ್ಪ, ಹಾಗೂ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು.. ಕಾರ್ಯಕಾರಿ ಸಮಿತಿ ಸದಸ್ಯರು ಹಾಜರಿದ್ದರು.