ನಿತ್ಯವಾಣಿ ಚಿತ್ರದುರ್ಗ, (ಆ.16) :ಲಯನ್ಸ್ ಕ್ಲಬ್ ಚಿತ್ರದುರ್ಗ ಫೋರ್ಟ್ ಸಿಟಿ ವತಿಯಿಂದ ಇಂದು 75 ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ನ ಪ್ರಥಮ ವಿಪಿ ಲಯನ್ ಕೆ ವಿ ಜಗದೀಶ್ ಅವರ ಕೊಡುಗೆಯಾಗಿ ಚಿತ್ರದುರ್ಗದ ಫಯಾಜ್ ಭಾಷ (48 ವರ್ಷ, ಬಾರ್ ಬೆಂಡಿಗ್ ವರ್ಕ್ಸ್), ಇವರಿಗೆ ವೀಲ್ ಚೇರ್ ಅನ್ನು ನೀಡಲಾಯಿತು. ಭಾಷ ಅವರು ಕರೆಂಟ್ ಶಾಕ್ ನಿಂದ ತಮ್ಮ ಎರಡೂ ಕಾಲುಗಳು ಸ್ವಾಧೀನ ಕಳೆದುಕೊಂಡರುತ್ತಾರೆ.
ಈ ಸಂದರ್ಭದಲ್ಲಿ ಚಿತ್ರದುರ್ಗ ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ ಲಯನ್ ಆರ್ ಉದಯಶಂಕರ್ MJF, ಖಜಾಂಚಿ ಲಯನ್ ಪಿ ನಾಗೇಂದ್ರಚಾರ್, ಸಹ-ಕಾರ್ಯದರ್ಶಿ ಲಯನ್ ಯೋಗೀಶ್ ಸಹ್ಯಾದ್ರಿ, ಕ್ಲಬ್ ವಿಸ್ತರಣಾಧಿಕಾರಿ ಲಯನ್ ಬಿ ಕೃಷ್ಣಮೂರ್ತಿ, ದಾನಿಗಳಾದ ಲಯನ್ ಕೆ ವಿ ಜಗದೀಶ್, ಚಿತ್ರದುರ್ಗ ಕಟ್ಟಡ ಕಾರ್ಮಿಕರ ಅಧ್ಯಕ್ಷರಾದ ಮಂಜುನಾಥ್ ಹಾಗು ಭಾಷ ಅವರ ಕುಟುಂಬ ಸದಸ್ಯರು, ಇತರರು ಉಪಸ್ಥಿತರಿದ್ದರು.