ರಿಲಾಯನ್ಸ್ ಜಿಯೋ ಹೊಸ ಜಿಯೋಫೋನ್ ಗ್ರಾಹಕರಿಗೆ ಭರ್ಜರಿ ಆಫರ್ ನೀಡಿದೆ. 1,999 ರೂಪಾಯಿ ನೀಡಿ ಜಿಯೋಫೋನ್ʼಗೆ ಖರೀದಿಸಿದ್ರೆ ಎಲ್ಲಾ ನೆಟ್ ವರ್ಕ್ʼಗಳಿಗೆ ಉಚಿತ ಅನಿಯಮಿತ ವಾಯ್ಸ್ ಕರೆಗಳ ಪ್ರಯೋಜನಗಳು ಮತ್ತು ಪ್ರತಿ ತಿಂಗಳು 2GB ಹೈಸ್ಪೀಡ್ ಡೇಟಾ ದೊರೆಯಲಿದೆ. ಈ ಅನ್ ಲಿಮಿಟೆಡ್ ಆಫರ್ 2 ವರ್ಷಗಳ ಕಾಲ ಇರಲಿದೆ.
ಇನ್ನು 1,499 ರೂಪಾಯಿ ಪಾವತಿಸಿ ಜಿಯೋಫೋನ್ ಖರೀದಿಸಿದ್ರೆ, 1 ವರ್ಷಕ್ಕೆ ಉಚಿತ ಅನಿಯಮಿತ ವಾಯ್ಸ್ ಕರೆಗಳು ಮತ್ತು 2ಜಿಬಿ ಅನಿಯಮಿತ ಡೇಟಾವನ್ನ ಪಡೆಯಬೋದು. ಇನ್ನು ನೀವು 2GB ಡೇಟಾವನ್ನ ಖಾಲಿ ಮಾಡಿದ್ರೂ ಆನ್ ಲೈನ್ʼನಲ್ಲಿ ವಿಷಯವನ್ನ ಬ್ರೌಸ್ ಮಾಡ್ಬೋದು. ಆದ್ರೆ, ಅದು ವೇಗದಲ್ಲಿ ಸ್ಲೋ ಇರುತ್ತೆ.
ರಿಲಾಯನ್ಸ್ ಜಿಯೋ ಹಾಲಿ ಜಿಯೋಫೋನ್ ಬಳಕೆದಾರರಿಗೆ ಕೂಡ ಆಫರ್ ಘೋಷಿಸಿದೆ. ನೀವು ಈಗಾಗಲೇ ಜಿಯೋಫೋನ್ ಹೊಂದಿದ್ರೆ, 749 ರೂ. ರಿಚಾರ್ಜ್ ಮಾಡಿಸಿ. ಆಗ ನೀವು ಅನಿಯಮಿತ ವಾಯ್ಸ್ ಕರೆಗಳು ಮತ್ತು 2GB ಮಾಸಿಕ ಡೇಟಾ ಬೆನಿಫಿಟ್ʼಗಳನ್ನ (ಪ್ರತಿ ತಿಂಗಳು) 12 ತಿಂಗಳವರೆಗೆ ಪಡೆಯಬಹುದು.
ಅಂದ್ಹಾಗೆ, ಜಿಯೋಫೋನ್ ಈ ಎಲ್ಲಾ ಆಫರ್ʼಗಳು ಮಾರ್ಚ್ 1 ರಿಂದ ಲಭ್ಯವಾಗಲಿದ್ದು, ಫೀಚರ್ ಫೋನ್ ಅನ್ನು ರಿಲಯನ್ಸ್ ರಿಟೇಲ್ ಮತ್ತು ಜಿಯೋ ಚಿಲ್ಲರೆ ಮಾರಾಟಗಾರರ ಮೂಲಕ ಮಾರಾಟ ಮಾಡಲಾಗುತ್ತದೆ.