ಉತ್ತರ ಕರ್ನಾಟಕದ ಐತಿಹಾಸಿಕ ‘ಶ್ರೀ ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವದಲ್ಲಿ ಗೊರವಯ್ಯ ನುಡಿಯುವ ಭವಿಷ್ಯ ನುಡಿದಿದ್ದು ಸುಖ ದುಃಖ ಸಮಾನ ಎಂಬ ರೀತಿಯಲ್ಲಿ ಭವಿಷ್ಯ ನುಡಿದಿದೆ.
ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನ ಮೈಲಾರ ಗ್ರಾಮದಲ್ಲಿ ಕೊರೊನಾ ಹಿನ್ನೆಲೆ ಕಾರ್ಣಿಕ ಕೇಳಲು ಅವಕಾಶ ಸಿಗದ ಹಿನ್ನೆಲೆ ಹಾವನೂರು ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಭಾಗಿಯಾಗಿದ್ದರು.
“ಸವನಿಧಿ ಆಯಿತಲೇ ಪರಾಕ್ “ಎಂದು ಗೊರವಯ್ಯ ಕಾರ್ಣಿಕ ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವ’ನುಡಿದಿದ್ದು, ಸವನಿಧಿ ಆಯಿತಲೇ ಎಂಬುವುದಕ್ಕೆ ಸುಖ ದುಃಖ, ಮಳೆ ಬೆಳೆ ಎಲ್ಲವೂ ಸಮಾನ ರೀತಿಯಲ್ಲಿ ಆಗುತ್ತದೆ ಎಂಬ ಅರ್ಥ ಊಹಿಸಲಾಗಿದೆ.