ನಿತ್ಯವಾಣಿ, ಚಿತ್ರದುರ್ಗ,(ನ.28) : ಚಿತ್ರದುರ್ಗ ನಗರದ ಐಯುಡಿಪಿ ಲೇಔಟ್ ಮೇಲ್ಬಾಗ ಕೆಹೆಚ್ ಬಿ ಕಾಲೋನಿ ಸೂರ್ಯಪುತ್ರ ನಗರದಲ್ಲಿ ಶ್ರೀ ಶನೇಶ್ವರ ಸ್ವಾಮಿ ಲೋಕಕಲ್ಯಾಣ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ಶ್ರೀ ಶನೇಶ್ವರ ಸ್ವಾಮಿಯ ಕಾರ್ತಿಕ ದೀಪೋತ್ಸವಕ್ಕೆ ಜನ ಸಾಗರದಂತೆ ಬಂದ ಭಕ್ತರು,
ಶ್ರೀ ಶನೇಶ್ವರ ಸ್ವಾಮಿ ಮತ್ತು ಪತ್ನಿ ಜೇಷ್ಠ ದೇವಿಯ ಹೂವಿನ ಅಲಂಕಾರ, ಕೆಂಡಾರ್ಚನೆ, ಶಿವನ ಅವತಾರದಲ್ಲಿ ವೀರಗಾಸೆಯ ನೃತ್ಯಗಳು, ಮನಮೋಹಕವಾದ ವಿಡಿಯೋಸ್
ವಿಶೇಷವಾಗಿ ಪ್ರತಿವರ್ಷದಂತೆ ಕೆಂಡವನ್ನು ತುಳಿಯುವ ಮಹಿಳಾ ಭಕ್ತರು, ಮತ್ತು ಮಹಾಮಂಗಳಾರತಿ ಪ್ರಸಾದ ವಿನಿಯೋಗ ಎಲ್ಲವೂ ಕೂಡ ಸಂಪ್ರದಾಯದಂತೆ ನಡೆಯಿತು ಪ್ರತಿ ವರ್ಷವೂ ಇಲ್ಲಿ ನಡೆಯುವ ಈ ಒಂದು ಕಾರ್ಯಕ್ರಮ ವರ್ಷದ ಕೊನೆಯ ಭಾಗವಾದ ನವಂಬರ್ ತಿಂಗಳಿನಲ್ಲಿ ಕಡೆ ಕಾರ್ತಿಕ ನಡೆಯುತ್ತದೆ, ಭಕ್ತಾದಿಗಳು ಹೊರ ಜಿಲ್ಲೆಯಿಂದ ಹಾಗೂ ಹೊರ ರಾಜ್ಯದಿಂದಲೂ ಕೂಡ ವೈಭವವನ್ನು ನೋಡಲು ಬರುತ್ತಿದ್ದಾರೆ, ವರ್ಷಕ್ಕಿಂತ ವರ್ಷ ಭಕ್ತಾದಿಗಳು ಹೆಚ್ಚಿನ ರೀತಿಯಲ್ಲಿ ಸೇರುತ್ತಿದ್ದಾರೆ, ಈ ಸಮಾರಂಭವು ಶ್ರೀ ಶನೇಶ್ವರ ಸ್ವಾಮಿಯ ಪ್ರತಿವರ್ಷದ ಜಾತ್ರೆಯೆಂದೇ ಹೇಳಬಹುದು, ವಿಶೇಷ ವಾಗಿ ಸನ್ನಿಧಿಯಲ್ಲಿ ಪ್ರತಿ ಶನಿವಾರ ಶ್ರೀ ಮೋಹನ ಕುಮಾರ ಸ್ವಾಮೀಜಿಯವರಲ್ಲಿ ಶನೇಶ್ವರ ಸ್ವಾಮಿಯು ಇವರ ಮೇಲೆ ಪ್ರೇರಣೆಯಾಗಿ ಸಾವಿರಾರು ಭಕ್ತರು ಒಳಿತನ್ನು ಕಂಡಿದ್ದಾರೆ, ಇಲ್ಲಿ ಇವರು ನುಡಿದಂತೆ ನಡೆಯುತ್ತದೆ,
ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಚಿತ್ರದುರ್ಗ ನಗರಸಭೆ ಅಧ್ಯಕ್ಷೆ ತಿಪ್ಪಮ್ಮ ವೆಂಕಟೇಶ್, ನಗರಾಭಿವೃದ್ಧಿ ಅಧ್ಯಕ್ಷರಾದ ಬದ್ರಿನಾಥ್, ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ ಎಸ್ ನವೀನ್, ಜಿಲ್ಲಾ ಸರ್ಕಾರಿ ನೌಕರರ ಅಧ್ಯಕ್ಷ ಕೆ ಮಂಜುನಾಥ್,ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಇಂದಿರಾ ಕಿರಣ್, ಇವರಿಗೆ ಸಾಥ್ ಕೊಟ್ಟ ಬಿಜೆಪಿ ಮುಖಂಡ ಸೇತುರಾಮ್,ನಗರಸಭೆ ಸದಸ್ಯ ವೆಂಕಟೇಶ್, ಚಂದ್ರಶೇಖರ್, ಕಾಂಗ್ರೆಸ್ ಮುಖಂಡ ಕಿರಣ್ ಕುಮಾರ್ ಯಾದವ್, ವಾಣಿಜ್ಯೋದ್ಯಮಿ ಗುರುರಾಜ್, ಬಾಬು, ಖ್ಯಾತ ವೈದ್ಯರಾದ ವಿಜಯಕುಮಾರ್, ವೀರಶೈವ ಲಿಂಗಾಯತ ಯುವ ವೇದಿಕೆ ಅಧ್ಯಕ್ಷ ಎಚ್ ಎಂ ಮಂಜುನಾಥ್, ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜನೆ ಮಾಡಿದ್ದ ಟ್ರಸ್ಟಿನ ಅಧ್ಯಕ್ಷರಾದ ಸಿ ಶಂಕರಮೂರ್ತಿ ಇವರ ಜೊತೆಯಲ್ಲಿ ಉಪಧ್ಯಕ್ಷರಾದ ರಘುನಾಥ್, ಕಾರ್ಯಧ್ಯಕ್ಷ ಈ ಮಂಜುನಾಥ್ ಸಹಕಾರ್ಯದರ್ಶಿ ಎಸ್ ಟಿ ನವೀನ್ ಕುಮಾರ್, ಖಜಾಂಚಿ ಶಂಕರ್, ಉಪ ಖಜಾಂಚಿ ಬಾಲಾಜಿ, ಚಿಕ್ಕಣ್ಣ, ಮಹೇಶ್, ಗೋಪಿ, ಮಲ್ಲೇಶ್, ಮಾಲತೇಶ್ ಅರಸ್ಇ,ರಾಜೇಶ್ವರಿ, ಇನ್ನಿತರರು ಇದ್ದರು