ಚಿತ್ರದುರ್ಗ: ಮಹಾಮಾರಿ ಕೊರೋನಾದಿಂದ ದೇಶ ಸಂಕಷ್ಟದಲ್ಲಿದೆ ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಕೊರೋನಾ ನಿರ್ಮೂಲನೆಗೆ ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಹೊಸುದುರ್ಗ ಕುಂಚಿಟಿಗ ಮಹಾಸಂಸ್ಥಾನ ಮಠದ ಡಾ.ಶಾಂತವೀರಸ್ವಾಮೀಜಿ ತಿಳಿಸಿದರು.
ಚಾಮುಂಡೇಶ್ವರಿ ಅಯ್ಯಪ್ಪ ಭಜನಾ ಮಂಡಳಿಯಿಂದ ಕೆ.ಎಸ್.ಆರ್.ಟಿ.ಸಿ.ಡಿಪೋ ರಸ್ತೆಯಲ್ಲಿರುವ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ 14 ನೇ ವರ್ಷದ ಪಡಿಪೂಜೆಯಲ್ಲಿ ಭಾಗವಹಿಸಿ ಮಾತನಾಡಿದರು.
ಇಡೀ ಜಗತ್ತನ್ನೆ ತಲ್ಲಣಿಸಿರುವ ಕೊರೋನಾದಿಂದ ದೇಶದ ಆರ್ಥಿಕ ಪರಿಸ್ಥಿತಿ ಕುಸಿದಿದೆ. ಲಾಕ್‍ಡೌನ್ ಸಂದರ್ಭದಲ್ಲಿ ದಿನನಿತ್ಯವೂ ದುಡಿದು ತಿನ್ನುವ ಕೂಲಿ ಕಾರ್ಮಿಕರು, ಬಡವರು, ಮಧ್ಯಮ ವರ್ಗದವರು ಇನ್ನು ಚೇತರಿಸಿಕೊಳ್ಳಲು ಆಗುತ್ತಿಲ್ಲ. ಈ ನಿಟ್ಟಿನಲ್ಲಿ ಅಯ್ಯಪ್ಪ ಮಾಲಾಧಾರಿಗಳು ಕೊರೋನಾ ನಿವಾರಣೆಗೆ ಅಯ್ಯಪ್ಪಸ್ವಾಮಿಯಲ್ಲಿ ಪ್ರಾರ್ಥಿಸುವ ಜೊತೆಗೆ ಕಡ್ಡಾಯವಾಗಿ ಮಾಸ್ಕ್‍ಗಳನ್ನು ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಂಡು ಸ್ಯಾನಿಟೈಸರ್ ಬಳಕೆ ಮಾಡುವಂತೆ ಹೇಳಿದರು
ಅಯ್ಯಪ್ಪ ಮಾಲೆಯನ್ನು ಧರಿಸಿದಾಗ ಕಠಿಣ ವ್ರತ ಆಚರಿಸಿ ನಿಷ್ಟೆಯಿಂದ ನಡೆದುಕೊಳ್ಳಬೇಕು. ಯಾವುದೇ ದುಶ್ಚಟಗಳಿಗೆ ಬಲಿಯಾಗಬಾರದು. ಅಯ್ಯಪ್ಪನ ದರ್ಶನಕ್ಕೆ ಹೋಗಿ ಬಂದ ನಂತರ ಬೀಡಿ, ಸಿಗರೇಟು, ಮದ್ಯಸೇವನೆ ಚಟಕ್ಕೆ ಮತ್ತೆ ಅಂಟಿಕೊಳ್ಳಬಾರದು, ಆರೋಗ್ಯಕ್ಕಿಂತ ದೊಡ್ಡ ಸಂಪತ್ತು ಬೇರೊಂದಿಲ್ಲ ಎಂದರು.
ರಾಷ್ಟ್ರಪತಿ ಹಾಗೂ ಮುಖ್ಯಮಂತ್ರಿಗಳ ಚಿನ್ನದ ಪದಕ ಪುರಸ್ಕøತ ಡಿ.ಆರ್.ಡಿ.ವೈ.ಎಸ್ಪಿ. ತಿಪ್ಪೇಸ್ವಾಮಿ, ಇನ್ಸ್‍ಪೆಕ್ಟರ್ ಸೋಮಶೇಖರ್, ಡಾ.ಮಧು, ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಹವ್ಯಾಸಿ ಪತ್ರಕರ್ತ ಕೆ.ಎಂ.ಮುತ್ತುಸ್ವಾಮಿ(ಕಣ್ಣನ್) ಇವರುಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಎ.ಎಸ್.ಐ.ವೆಂಕಟಾಚಲ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಅಯ್ಯಪ್ಪ ಮಾಲಾಧಾರಿಗಳಾದ ಕೆ.ಟಿ.ಶಿವಕುಮಾರ್‍ಸ್ವಾಮಿ, ಉದಯ್‍ಸ್ವಾಮಿ, ರಮೇಶ್‍ಸ್ವಾಮಿ, ಶಬರಿಗಿರೀಶಸ್ವಾಮಿ, ರಾಂದಾಸ್‍ಸ್ವಾಮಿ, ರಾಂಕುಮಾರ್‍ಸ್ವಾಮಿ, ಧನರಾಜ್‍ಸ್ವಾಮಿ, ರಾಜುಸ್ವಾಮಿ ಸೇರಿದಂತೆ ನೂರಾರು ಮಾಲಾಧಾರಿಗಳು ಭಜನೆಯಲ್ಲಿ ಅಯ್ಯಪ್ಪನನ್ನು ಸ್ತುತಿಸಿದರು.
ಅಯ್ಯಪ್ಪ ಭಜನಾ ಮಂಡಳಿಯಿಂದ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದ್ದ 14 ನೇ ವರ್ಷದ ಪಡಿಪೂಜೆಯಲ್ಲಿ ಡಾ.ಶಾಂತವೀರಮಹಾಸ್ವಾಮೀಜಿ ಭಾಗವಹಿಸಿ ಜ್ಯೋತಿ ಬೆಳಗಿದರು. ಫೋಟೋ-3.