ಬೆಂಗಳೂರು: ಕಳೆದ ಕೆಲ ದಿನಗಳಿಂದ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಭಾರೀ ಇಳಿಕೆ ಕಂಡುಬರುತ್ತಿದೆ. ಫೆಬ್ರವರಿಯ ಈ ವಾರದಲ್ಲಿ ಚಿನ್ನದ ದರ 10 ಗ್ರಾಂಗೆ 50 ಸಾವಿರದ ಕೆಳಗೇ ಇದ್ದು ಚಿನ್ನಾಭರಣ ಪ್ರಿಯರು ಶಾಪಿಂಗ್ ಮೂಡ್ನಲ್ಲಿದ್ದಾರೆ. ಅಂದ ಹಾಗೆ ಇಂದು ಚಿನ್ನದ ದರ ಎಷ್ಟಿದೆ ಎನ್ನುವುದಕ್ಕೆ ಇಲ್ಲಿದೆ ಮಾಹಿತಿ..
ಶನಿವಾರದಂದು ಬೆಂಗಳೂರಿನದಲ್ಲಿ 22 ಕ್ಯಾರೆಟ್ ಚಿನ್ನದ ದರದಲ್ಲಿ 55 ರೂಪಾಯಿ ಮತ್ತು 24 ಕ್ಯಾರೆಟ್ ಚಿನ್ನದ ದರದಲ್ಲಿ 60 ರೂಪಾಯಿ (ಗ್ರಾಂಗೆ) ಇಳಿಕೆ ಕಂಡುಬಂದಿದೆ. ಈ ಮೂಲಕ 22 ಕ್ಯಾರೆಟ್ ಚಿನ್ನದ ದರ (1 ಗ್ರಾಂ. ಗೆ) 4270 ರೂಪಾಯಿ ಹಾಗೂ 24 ಕ್ಯಾರೆಟ್ ಚಿನ್ನದ ದರ (1 ಗ್ರಾಂ ಗೆ) 4,658 ರೂಪಾಯಿಯಷ್ಟಾಗಿದೆ. ಬೆಳ್ಳಿ ದರದಲ್ಲಿ 1 ಕೆಜಿಗೆ ಒಂದು ಸಾವಿರ ರೂಪಾಯಿ ಇಳಿಕೆಯಾಗಿದ್ದು, 69,600 ರೂಪಾಯಿಗೆ ಇಳಿದಿದೆ.
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಚಿನ್ನದ ದರದಲ್ಲಿ 342 ರೂಪಾಯಿ ಇಳಿಕೆ (10 ಗ್ರಾಂಗೆ) ಕಂಡಿದ್ದು, ದರ 45,499 ರೂಪಾಯಿಯಾಗಿದೆ. ಹಾಗೆಯೇ ಬೆಳ್ಳಿದ ದರದಲ್ಲೂ 2007 ರೂಪಾಯಿ ಇಳಿಕೆ ಉಂಟಾಗಿದ್ದು, ಒಂದು ಕೆಜಿ ಬೆಳ್ಳಿ ದರ 67,410 ರೂಪಾಯಿಯಾಗಿದೆ. ಕಳೆದ ಆರು ತಿಂಗಳಲ್ಲಿ ಚಿನ್ನದ ದರದಲ್ಲಿ ಶೇ 18 ಅಂದರೆ 10 ಸಾವಿರ ರೂಪಾಯಿ ಇಳಿಕೆ ಕಂಡುಬಂದಿದೆ.