ಬಂಟ್ವಾಳ: ಬಿ.ಸಿ.ರೋಡ್‌ನ ಖಾಸಗಿ ಆಡಿಟೋರಿಯಂವೊಂದರಲ್ಲಿ ರವಿವಾರ ಹಸೆಮಣೆ ಏರಿದ ನವ ಜೋಡಿಯೊಂದು ಮದುವೆಯ ದಿನ ಅಂಗಾಂಗ ದಾನದ ನೋಂದಣಿಯ ಮೂಲಕ ಪ್ರತಿಜ್ಞೆ ಮಾಡಿ, ಹಲವರಿಗೆ ನೋಂದಣಿ ಮಾಡುವುದಕ್ಕೆ ಪ್ರೇರಣೆ ನೀಡಿದೆ.
ಬಂಟ್ವಾಳ ವಿ.ಸಭಾ ಕ್ಷೇತ್ರ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಪ್ರದೀಪ್ ಅಜ್ಜಿಬೆಟ್ಟು ಅವರ ವಿವಾಹ ಸ್ವಾತಿ ಅವರೊಂದಿಗೆ ರವಿವಾರ ನಡೆದಿದ್ದು, ಇವರು ಕೂಡ ಮದುವೆಯ ಸಭಾಂಗಣದಲ್ಲೇ ಜೀವ ಸಾರ್ಥಕತೆ ಸಂಸ್ಥೆಯ ಮೂಲಕ ಅಂಗಾಂಗ ದಾನದ ನೋಂದಣಿ ಮಾಡಿದ್ದಾರೆ.
ಜತೆಗೆ ಸಭಾಂಗಣದ ಹೊರಭಾಗದಲ್ಲಿ ಬ್ಯಾನರೊಂದರನ್ನು ಅಳವಡಿಸಿ, ಅಂಗದಾನ ಮಾಡಿ, ಜೀವ ಉಳಿಸಿ ಎಂಬ ವಾಕ್ಯಗಳೊಂದಿಗೆ ಬಹುತೇಕ ಮಂದಿಗೆ ಅಂಗಾಂಗ ದಾನದ ನೋಂದಣಿ ಮಾಡಿಕೊಳ್ಳಲು ಪ್ರೇರಣೆ ನೀಡಿದೆ. ಅಂಗಾಂಗ ದಾನದ ನೋಂದಣಿಗಾಗಿ ಸಭಾಂಗಣದಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಹೆಚ್ಚಿನ ಮಂದಿ ನಿಗದಿತ ಅರ್ಜಿಯನ್ನು ತುಂಬಿ ನೋಂದಣಿ ಮಾಡಿಕೊಂಡಿದ್ದಾರೆ.