ಗೋವಾ ಕಡೆ ಟ್ರಿಪ್ ಹೊರಟಿರುವ ಮಂದಿ ಒಂಚೂರು ಗಮನಿಸಿ…ಗೋವಾ ಪ್ರವಾಸೋದ್ಯಮ ಇಲಾಖೆ ಅಲ್ಲಿನ ಬೀಚ್ ಗಳಲ್ಲಿ ಅತಿರೇಕದ ದುರ್ವತನೆಗಳನ್ನು ಗಂಭೀರವಾಗಿ ಪರಿಗಣಿಸಿದ್ದು, ಅಂಥವರಿಗೆ ಭಾರೀ ದಂಡ ವಿಧಿಸಲು ನಿರ್ಧರಿಸಿದೆ.
ಗೋವಾದ ಬೀಚ್ ಗಳಲ್ಲಿ ಯಾವುದೇ ವ್ಯಕ್ತಿ ಮದ್ಯ ಸೇವನೆ ಮಾಡಿದ್ರೆ ಅಂಥವರಿಗೆ 2000 ರೂ ದಂಡ , ಗುಂಪು ಗುಂಪಾಗಿ ಬೀಚ್ ನಲ್ಲಿ ಮದ್ಯ ಸೇವಿಸಿದ್ರೆ 10,000 ರೂ ದಂಡ ವಿಧಿಸಲಾಗುತ್ತದೆ ಎಂದು ಗೋವಾ ಪ್ರವಾಸೋದ್ಯಮ ಇಲಾಖೆ ತಿಳಿಸಿದೆ.
ಬೀಚ್ ನಲ್ಲಿ ಈ ಎಲ್ಲಾ ಚಟುವಟಿಕೆಗಳಿಗೆ ನಿರ್ಬಂಧ
1) ಆಲ್ಕೋಹಾಲ್ ಸೇವಿಸುವಂತಿಲ್ಲ
2) ಧೂಮಪಾನ ಮಾಡೋ ಹಾಗಿಲ್ಲ
3) ಬೆತ್ತಲೆಯಾಗಿ ಇರುವಂತಿಲ್ಲ
4) ಸೂರ್ಯ ಹುಟ್ಟುವುದಕ್ಕೆ ಮುನ್ನ ಹಾಗೂ ಸೂರ್ಯ ಮುಳುಗಿದ ನಂತರ ಬೀಚ್ ಗೆ ಎಂಟ್ರಿ ಇರುವುದಿಲ್ಲ
5) ಬೀಚ್ ಗಳಲ್ಲಿ ವಾಹನ ಸಂಚಾರಕ್ಕೆ ನಿಷೇಧ ಹೇರಲಾಗಿದೆ,
6) ಮಳೆಗಾಲದಲ್ಲಿ ಸಮುದ್ರದಲ್ಲಿ ಈಜು ನಿಷೇಧ
7) ಲೈಸೆನ್ಸ್ ಇಲ್ಲದೇ ಜಲಕ್ರೀಡೆ ನಡೆಸುವಂತಿಲ್ಲ