ಸರ್ಕಾರಿ ನೌಕರರೆಲ್ಲಾ ತುಂಬಾ ಜವಾಬ್ದಾರಿಯುತವಾಗಿ ಯಾವುದೇ ಚ್ಯುತಿ ಬರೆದಂತೆ ಕರ್ತವ್ಯ ನಿರ್ವಹಿಸಬೇಕೆಂದು ಎಲ್ಲಾ ನೌಕರರಿಗೆ ಕಿವಿ ಮಾತು :ದಂಡಾಧಿಕಾರಿ ಸತ್ಯನಾರಾಯಣ

ನಿತ್ಯವಾಣಿ. ಚಿತ್ರದುರ್ಗ,(ಮೇ. 11) : ಕರೋನಾ ಎರಡನೆಯ ಅಲೆಯ ಭೀಕರತೆಗೆ ಇಡೀ ಪ್ರಪಂಚವೇ ನಲುಗಿ ಹೋಗಿದೆ. ಇಂತಹ ಸಂದರ್ಭದಲ್ಲಿ ಕೊವಿಡ್ ಕರ್ತವ್ಯನಿರತ ಶಿಕ್ಷಕರಿಗೆ ಬಿ.ಎಲ್.ಒ. ಗಳಿಗೆ ಹಾಗೂ ಎಲ್ಲಾ ನೌಕರರಿಗೆ ಅತಿ ಅಗತ್ಯವಾದ ಮಾಸ್ಕ್ ಸ್ಯಾನಿಟೈಸರ್, ಹಾಗೂ ಗ್ಲೌಸ್ ಗಳನ್ನು ನೀಡುವಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಹಿರಿಯೂರು ತಾಲ್ಲೂಕು ಶಾಖೆಯ ಅಧ್ಯಕ್ಷ ಶಿವಕುಮಾರ್ ಹಾಗೂ ಸಂಘದ ಪದಾಧಿಕಾರಿಗಳು ತಾಲ್ಲೂಕು ದಂಡಾಧಿಕಾರಿ ಸತ್ಯನಾರಾಯಣ ಇವರಲ್ಲಿ ಮನವಿ ಸಲ್ಲಿಸಿರುವ ಮೇರೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ ತಾಹಸಿಲ್ದಾರ್ ಅವರು ವೈಯಕ್ತಿಕವಾಗಿ ಕೋವಿಡ್ ಕರ್ತವ್ಯದಲ್ಲಿ ನಿರತರಾದ ಶಿಕ್ಷಕರಿಗೆ ಬಿ.ಎಲ್.ಒ ಗಳಿಗೆ ಹಾಗೂ ನೌಕರರಿಗೆ ಕೊವಿಡ್ ಸಂದರ್ಭದಲ್ಲಿ ಅಗತ್ಯ ವಸ್ತುಗಳಾದ ಮಾಸ್ಕ್, ಸ್ಯಾನಿಟೈಸರ್ ಹಾಗೂ ಗ್ಲೌಸಗಳನ್ನು ಈ ದಿನ ವಿತರಿಸಿರುತ್ತಾರೆ. ಅವರಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತಾಲ್ಲೂಕು ಶಾಖೆ ಅಧ್ಯಕ್ಷ ಶಿವಕುಮಾರ್ ಹಾಗೂ ಜಿಲ್ಲಾ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಕೆ ಮಂಜುನಾಥ್ ರವರು ಅಭಿನಂದಿಸುತ್ತಾರೆ

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಶಿವಕುಮಾರ್ ಹಾಗೂ ಪದಾಧಿಕಾರಿಗಳು, ಶಿಕ್ಷಣ ಇಲಾಖೆಯ ಉಪನಿರ್ದೇಶ ರವಿಶಂಕರ್ ರೆಡ್ಡಿ, BEO ನಾಗಭೂಷಣ್,AADPI ನಾಗರಾಜಾಚಾರ್, ಉಪಸ್ಥಿತರಿದ್ದರು. ತಹಸಿಲ್ದಾರ್ ಸತ್ಯನಾರಾಯಣ ಅತ್ಯಂತ ಕ್ಲಿಷ್ಟಕರವಾದ ಕೋವಿಡ್ ಕರ್ತವ್ಯಕ್ಕೆ ಹಾಜರಾಗಿರುವ ನೌಕರರೆಲ್ಲಾ ತುಂಬಾ ಜವಾಬ್ದಾರಿಯುತವಾಗಿ ಯಾವುದೇ ಚ್ಯುತಿ ಬರೆದಂತೆ ಕರ್ತವ್ಯ ನಿರ್ವಹಿಸಬೇಕೆಂದು ಎಲ್ಲಾ ನೌಕರರಿಗೆ ಕಿವಿ ಮಾತನ್ನು ಹೇಳಿದರು.

 

Leave a Reply

Your email address will not be published.