ರಾಜ್ಯದ ಸರ್ಕಾರಿ ಕಚೇರಿಗಳಲ್ಲೂ ರೊಟೇಷನ್ ಪದ್ದತಿ ಅನುಸರಿಸುವಂತೆ ಕೋರಿ ರಾಜ್ಯ ನೌಕರರ ಸಂಘದ ಅಧ್ಯಕ್ಷ ರಾದ ಸಿ.ಎಸ್.ಷಡಕ್ಷರಿ ಅವರ ಮನವಿಗೆ ಸೂಕ್ತ ಸ್ಪಂದನೆ ಸಿಕ್ಕಿದ್ದು, ಶೀಘ್ರ ಜಾರಿಗೆ ಬರುವ ನಿರೀಕ್ಷೆ ಇದೆ ಎಂದು ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಮಂಜುನಾಥ ಕೆ

ಚಿತ್ರದುರ್ಗ,ನಿತ್ಯವಾಣಿ,(ಏ.19) : ಭಾನುವಾರ ಬೆಳಿಗ್ಗೆ 11.15 ಕ್ಕೆ ರಾಜ್ಯದ ಎಲ್ಲ ಜಿಲ್ಲಾಧ್ಯಕ್ಷರುಗಳ ಜೊತೆ ವರ್ಚುಯಲ್ ಮೀಟಿಂಗ್ ನಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಅಧ್ಯಕ್ಷರಾದ ಶ್ರೀ ಸಿ.ಎಸ್ ಷಡಕ್ಷರಿಯವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ  ಸರ್ಕಾರಿ ನೌಕರರ ಕುಂದುಕೊರತೆಗಳ  ಬಗ್ಗೆ ಸುದೀರ್ಘವಾಗಿ ಚರ್ಚೆ ಮಾಡಲಾಯಿತು. ಅದರಲ್ಲಿ ಪ್ರಮುಖ ವಿಷಯಗಳಾದ*ಸದಸ್ಯತ್ವ ಶುಲ್ಕ,**ಶಿಕ್ಷಕರ ವರ್ಗಾವಣೆ ಬಗ್ಗೆ,**ಇಲಾಖೆಗಳ C&R,ಮುಂಬಡ್ತಿ,**ಜೇಷ್ಠಾತಾಪಟ್ಟಿ,**ಪ್ರತಿಭಾ ಪುರಸ್ಕಾರ* , &R,ಮುಂಬಡ್ತಿ,**ಜೇಷ್ಠಾತಾಪಟ್ಟಿ,**ಪ್ರತಿಭಾ ಪುರಸ್ಕಾರ* ,*ನೌಕರರಿಗೆ ಸರ್ವೋತ್ತಮ ಪ್ರಶಸ್ತಿ,**ಜಂಟಿ ಸಮಾಲೋಚನೆ ಸಭೆ,**371 ಜೆ ಯಲ್ಲಿ ನೌಕರರಿಗೆ ಆಗುವ ಅನ್ಯಾಯಗಳ ಬಗ್ಗೆ ಚರ್ಚೆ ಉಧಾ.( ಮುಂಬಡ್ತಿ, ನೇಮಕಾತಿ )*
*N. P. S. ರದ್ದು ಮಾಡುವ ಕುರಿತು (ಯಾವ ಹಂತದಲ್ಲಿದೆ)**D. A. ಬಗ್ಗೆ* *ಆರೂಗ್ಯ ಇಲಾಖೆಯ ವೇತನ,*  *ಸರ್ಕಾರಿ ನೌಕರರ ಸಂಘದ ಸಮಗ್ರ  ಬೈಲಾ ತಿದ್ದುಪಡಿ* ಇನ್ನು ಹಲವಾರು ಸಮಸ್ಯೆಗಳ ಬಗ್ಗೆ  ಈ  ವರ್ಚುಯಲ್ ಮೀಟಿಂಗನಲ್ಲಿ ಚರ್ಚೆ ಮಾಡಲಾಯ್ತುಕೊರೋನಾ ೨ನೇ ಅಲೆ ಉಲ್ಬಣಗೊಳ್ಳುತ್ತಿರುವ ಹಿನ್ನಲೆಯಲ್ಲಿ ನೌಕರರ ಸುರಕ್ಷತೆ ದೃಷ್ಟಿಯಿಂದ ಕೇಂದ್ರ ಸರ್ಕಾರದ ಮಾದರಿಯಲ್ಲಿ ರಾಜ್ಯದ ಸರ್ಕಾರಿ ಕಚೇರಿಗಳಲ್ಲೂ ರೊಟೇಷನ್ ಪದ್ದತಿ ಅನುಸರಿಸುವಂತೆ ಕೋರಿ ರಾಜ್ಯ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಅವರ ಮನವಿಗೆ ಸೂಕ್ತ ಸ್ಪಂದನೆ ಸಿಕ್ಕಿದ್ದು, ಶೀಘ್ರ ಜಾರಿಗೆ ಬರುವ ನಿರೀಕ್ಷೆ ಇದೆ ಎಂದು ಚಿತ್ರದುರ್ಗ ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಮಂಜುನಾಥ ಕೆ ತಿಳಿಸಿದ್ದಾರೆ.
ಭಾನುವಾರ ಮಧ್ಯಾಹ್ನ  ಕೋವಿಡ್ ಹಿನ್ನೆಲೆಯಲ್ಲಿ ರಾಜ್ಯ ನೌಕರರ ಸಂಘದ ವತಿಯಿಂದ ನಡೆದ ಆನ್‌ಲೈನ್ ಮೀಟಿಂಗ್‌ನಲ್ಲಿ ಭಾಗವಹಿಸಿದ ನಂತರ ಮಾಧ್ಯಮಗಳಿಗೆ ಈ ಕುರಿತು ಅವರು ಹೇಳಿಕೆ ನೀಡಿದ್ದಾರೆ.

ರಾಜ್ಯ ಸರ್ಕಾರ ಸೋಂಕು ತಡೆಗೆ ಹಲವಾರು ಮುಂಜಾಗ್ರತಾ ಕ್ರಮ ಕೈಗೊಂಡಿದೆ, ಸರ್ಕಾರದ ಈ ಕಾರ್ಯದಲ್ಲಿ ನೌಕರರು ಹಗಲಿರುಳು ಶ್ರಮಿಸಿ ಸರ್ಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಮತ್ತು ಕಾರ್ಯಗತಗೊಳಿಸುವಲ್ಲಿ  ಸರ್ಕಾರಿ ನೌಕರರು ಮಹತ್ವದ ಪಾತ್ರ ವಹಿಸಿ ತಮ್ಮ ಜೀವದ ಹಂಗು ತೊರೆದು ಕೆಲಸ ನಿರ್ವಹಿಸುತ್ತಿದ್ದಾರೆ.
ಕೋವಿಡ್ ಸೋಂಕಿನ ತೀವ್ರತೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ನೌಕರರ ಕುಟುಂಬ ವರ್ಗದಲ್ಲಿ ಆತಂಕ ಮೂಡಿರುವುದರಿಂದ ಸರ್ಕಾರ ಕೇಂದ್ರ ಮಾದರಿಯಲ್ಲಿ ರಾಜ್ಯದಲ್ಲಿ ನೌಕರರ ಸುರಕ್ಷತೆ ದೃಷ್ಟಿಯಿಂದ ರೊಟೇಷನ್ ಪದ್ದತಿ ಜಾರಿಗೆ ತರುವ ನಿರೀಕ್ಷೆ ಇದೆ ಎಂದು ತಿಳಿಸಿದ್ದಾರೆ.
ಈ ಆದೇಶ ಹೊರಬಿದ್ದರೆ ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಇಲಾಖಾ ಮುಖ್ಯಸ್ಥರು ಹಾಗೂ ಶೇ.೫೦ ಹಾಗೂ ಶೇ.೩೩ ಅನುಪಾತ ಅನುಸರಿಸಿ ನೌಕರರು ಕಚೇರಿಗೆ ರೋಟೇಷನ್ ಆಧಾರಾದ ಮೇಲೆ ಹಾಜರಾಗಲು ಅವಕಾಶ ಕಲ್ಪಿಸಲಾಗುತ್ತದೆ.
ಈ ನಡುವೆ ಗರ್ಭಿಣಿ ಮಹಿಳಾ ನೌಕರರಿಗೆ ಹಾಗೂ ೫೫ ವರ್ಷ ವಯೋಮಿತಿ ಮೀರಿ ಅನಾರೋಗ್ಯದಿಂದ ಬಳಲುತ್ತಿರುವ ನೌಕರರಿಗೆ ಹಾಜರಾತಿಯಿಂದ ವಿನಾಯಿತಿ ನೀಡಿ ಮನೆಯಿಂದಲೇ ಕರ್ತವ್ಯ ನಿರ್ವಹಣೆಗೆ (WORK FROM HOME) ಅವಕಾಶ ಕಲ್ಪಿಸಲು ಸರ್ಕಾರಕ್ಕೆ ಷಡಕ್ಷರಿ ಅವರು ಮನವಿ ಮಾಡಿದ್ದು, ಶೀಘ್ರ ಆದೇಶ ಹೊರಬೀಳುವ ನಿರೀಕ್ಷೆ ಇದೆ ಎಂದು ತಿಳಿಸಿದ್ದಾರೆ.
ಶಿಕ್ಷಕರ ವರ್ಗಾವಣೆಗೆ ಸುಗ್ರಿವಾಜ್ಞೆ ವಿಳಂಬ ಶಿಕ್ಷಕರ ಕಡ್ಡಾಯ,ಹೆಚ್ಚುವರಿ ವರ್ಗಾವಣೆ ಸಂಬಂಧ ಚರ್ಚಿಸಿ ಶೀಘ್ರ ಈ ವರ್ಗಾವಣೆ ಕಾರ್ಯ ಮುಗಿಸಲು ಸುಗ್ರಿವಾಜ್ಞೆ ತರುವ ನಿಟ್ಟಿನಲ್ಲಿ ಏ.೧೯ ರಂದು ಸಚಿವ ಸಂಪುಟದಲ್ಲಿ ಚರ್ಚೆಗೆ ಬರುವುದಿತ್ತು. ಆದರೆ ಮುಖ್ಯಮಂತ್ರಿಗಳು ಕೋವಿಡ್‌ಗೆ ತುತ್ತಾಗಿರುವುದರಿಂದ ಇದು ವಿಳಂಬವಾಗಿದೆ ಎಂದು ಸಭೆಯಲ್ಲಿ ರಾಜ್ಯಾಧ್ಯಕ್ಷರು ಮಾಹಿತಿ ನೀಡಿದ್ದಾರೆ ಎಂದು ಸರ್ಕಾರಿ ನೌಕರರ ಸಂಘದ  ಜಿಲ್ಲಾ ಅಧ್ಯಕ್ಷರಾದ ಮಂಜುನಾಥ್ ತಿಳಿಸಿದ್ದಾರೆ.
*ನೌಕರರ ಸಂಘಕ್ಕೆ ಬೈಲಾ ತಿದ್ದುಪಡಿ*
ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಹೊಸ ಬೈಲಾ ಸಿದ್ದವಾಗಿದ್ದು, ಹೊಸ ಬೈಲಾ ಏ.೧೫ ರಿಂದಲೇ ಜಾರಿಗೆ ಬಂದಿದೆ, ಬೈಲಾದಲ್ಲಿ ಸಂಘದ ಚುನಾವಣೆ ಪ್ರಕ್ರಿಯೆಯಿಂದ, ಶಿಸ್ತು, ಆರ್ಥಿಕ ಭ್ರಷ್ಟತೆತಡೆ ಸೇರಿದಂತೆ ಎಲ್ಲಾ ಅಗತ್ಯ ತಿದ್ದುಪಡಿ ಮಾಡಲಾಗಿದ್ದು, ೧೯೬ ಪುಟಗಳ ಬೈಲಾವನ್ನು ಅನುಮೋದಿಸಲಾಗಿದೆ ಎಂದು ತಿಳಿಸಿದ್ದಾರೆ.*ಕೋವಿಡ್ ಮುಗಿದ ನಂತರ ನೌಕರರ ದಿನಾಚರಣೆ ನಡೆಸಲು ತೀರ್ಮಾನ,* ಈ ಸಂಬಂಧ ನೌಕರರಿಗೆ ನೀಡಬೇಕಾದ ಸರ್ವೋತ್ತಮ ಪ್ರಶಸ್ತಿಗೆ ಆಯ್ಕೆ ಮಾಡುವಾಗ ಕೋವಿಡ್ ಸಂದರ್ಭದಲ್ಲಿ ವಾರಿಯರ‍್ಸ್ ಆಗಿ ಮಾಡಿದ ಅತ್ಯುತ್ತಮ ಸೇವೆಯನ್ನು ಆದ್ಯತೆ ಮೇಲೆ ಪರಿಗಣಿಸಲು ಸಂಘ ಮನವಿ ಮಾಡಿದೆ, ಜತೆಗೆ ಉತ್ತಮ ನೌಕರರನ್ನು ಗುರುತಿಸಿ ಪುರಸ್ಕರಿಸಲು ಕೋರಿದೆ ಎಂದು ತಿಳಿಸಿದ್ದಾರೆ.
*ನಗದು ರಹಿತ ಚಿಕಿತ್ಸೆಗೆ* ರೂಪುರೇಷೆ
ರಾಜ್ಯ ಸರ್ಕಾರ ಈಗಾಗಲೇ ನೌಕರರಿಗೆ ನಗದು ರಹಿತ ಚಿಕಿತ್ಸೆಯನ್ನು ಏ.೧ ರಿಂದಲೇ ಜಾರಿಗೆ ತಂದಿದೆ, ಆದರೆ ಅದಕ್ಕೆ ಸಂಬಂಧಿಸಿ ರೂಪು ರೇಷೆಗಳನ್ನು ಸಿದ್ದಪಡಿಸುವ ಕಾರ್ಯ ಪ್ರಗತಿಯಲ್ಲಿದ್ದು, ಶೀಘ್ರ ಈ ಕೆಲಸ ಮುಗಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಜಿಲ್ಲಾ ಮಟ್ಟದಲ್ಲಿ ನೌಕರರ ಸಮಸ್ಯೆಗಳ ಕುರಿತು ಚರ್ಚಿಸಲು ಜಂಟಿ ಸಮಾಲೋಚನಾ ಸಮಿತಿ ಸಭೆ ಕರೆಯುವಂತೆ ತಮ್ಮ ತಮ್ಮ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲು ಸಂಘದ ರಾಜ್ಯಾಧ್ಯಕ್ಷರು ಸೂಚಿಸಿದ್ದು, ಅದಕ್ಕೂ ಮುನ್ನಾ ಇಲಾಖಾವಾರು ಸಮಸ್ಯೆಗಳನ್ನು ವೃಂದ ಸಂಘಗಳ ಪದಾಧಿಕಾರಿಗಳು ಜಿಲ್ಲಾ ಸಂಘಕ್ಕೆ ನೀಡಬೇಕು ಎಂದು ಮಂಜುನಾಥ ಕೆ ಮನವಿ ಮಾಡಿದ್ದಾರೆ.ಜಿಲ್ಲೆಯಲ್ಲಿ ವಸೂಲಾದ ಸದಸ್ಯತ್ವ ಶುಲ್ಕ ಜಿಲ್ಲೆಯಲ್ಲಿ ಸರ್ಕಾರಿ ನೌಕರರು ಸಂಘಕ್ಕೆ ನೀಡಿರುವ ಸದಸ್ಯತ್ವ ಶುಲ್ಕದ ಮಾಹಿತಿಯನ್ನು ವರ್ಚ್ಯುಯಲ್  ಆನ್ ಲೈನ್ ಸಭೆಯಲ್ಲಿ ಒದಗಿಸಿದ್ದು, ಅದರಂತೆ *ಚಿತ್ರದುರ್ಗ* ತಾಲ್ಲೂಕಿನಲ್ಲಿ ಶೇ.97.17 ರಷ್ಟು ನೌಕರರು ಶುಲ್ಕ ಪಾವತಿಸಿದ್ದಾರೆ. ಉಳಿದಂತೆ *ಚಳ್ಳಕೆರೆ* ತಾಲ್ಲೂಕಿನಿಂದ ಶೇ 85.69%,*ಹಿರಿಯೂರು* ತಾಲ್ಲೂಕಿನಿಂದ 98.17 *ಹೊಳಲ್ಕೆರೆ* ತಾಲ್ಲೂಕಿನಿಂದ ಶೇ.83.15%,*ಮೊಳಕಾಲ್ಮುರು* ತಾಲ್ಲೂಕಿನಿಂದ ಶೇ.81.36%,*ಹೊಸದುರ್ಗ* ತಾಲ್ಲೂಕಿನಿಂದ ಶೇ.97.26% ರಷ್ಟ ಸದಸ್ಯತ್ವ ಶುಲ್ಕ ರಾಜ್ಯ ಸಂಘಕ್ಕೆ ಸಂದಾಯವಾಗಿದೆ ಎಂದು ರಾಜ್ಯಾಧ್ಯಕ್ಷರು  ತಿಳಿಸಿದ್ದಾರೆ.
ಇಂದಿನ ವಚ್ಯುಯಲ್ ಆನ್‌ಲೈನ್ ಸಭೆಯಲ್ಲಿ ರಾಜ್ಯ ಸಂಘದ ಎಲ್ಲಾ ಪದಾಧಿಕಾರಿಗಳು, ರಾಜ್ಯದ ಎಲ್ಲಾ ಜಿಲ್ಲೆಗಳ ಅಧ್ಯಕ್ಷರುಗಳು ಪಾಲ್ಗೊಂಡಿದ್ದರು ಎಂದು ಮಂಜುನಾಥ್ ಕೆ  ನಿತ್ಯವಾಣಿ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.

Leave a Reply

Your email address will not be published.