,ನಿತ್ಯವಾಣಿ, ಭರಮಸಾಗರ, ಜ.06 : ಕೃಷಿಕರಿಗೆ ಅತ್ಯ ಗತ್ಯವಾದ ಪಹಣಿ ಬೆಲೆಯನ್ನು 15 ರಿಂದ 25 ರೂ ಗೆ ಬೆಲೆ ಏರಿಕೆ ಮಾಡಿರುವುದು
ಕಾಂಗ್ರೆಸ್ ಮುಖಂಡರಾದಂತ ಎಸ್ಎಂಎಲ್ ಪ್ರವೀಣ್ ಭರಮಸಾಗರದಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಮಾತನಾಡುತ್ತ,
ಸಣ್ಣ ಮತ್ತು ಅತಿ ಸಣ್ಣ ಸಾಲ ಸೌಲಭ್ಯ ಪಡೆಯಲು,ಇಲಾಖೆಗಳಿಂದ ಲಭ್ಯವಾಗುವ ಸೌಲಭ್ಯವನ್ನು ಪಡೆಯಲು, ಸಹಕಾರಿ ಸಂಘಗಳಿಂದ ಬೆಳೆ ಸಾಲ,ಇನ್ನಿತರ ಸಹಾಯ ಪಡೆಯಲು ಅಗತ್ಯವಾಗಿ ಬೇಕಾಗಿದೆ.
ಕೆಲವೊಮ್ಮೆ ವರ್ಷದಲ್ಲಿ ಕೃಷಿಕರು ಹತ್ತಾರು ಬಾರಿ ಪಹಣಿಯನ್ನು ಪಡೆಯಬೇಕಾಗಿದೆ ಪರಿಸ್ಥಿತಿಯೂ ಇದೆ. ಇದರ ಬೆಲೆ ಏರಿಸಿ ರೈತರ ಜೋಬಿಗೆ ಕತ್ತರಿ ಹಾಕಿರುವುದು ಸರಿ ಇಲ್ಲ ಎಂದು ಹೇಳಿದರು. ಆರ್ ಟಿ ಸಿ ಬೆಲೆಯನ್ನು ಇದ್ದಕ್ಕಿದ್ದಂತೆ ಏರಿಸಿರುವುದು ರಾಜ್ಯ ಬಿಜೆಪಿ ಸರ್ಕಾರವು ರೈತರ ವಿರೋಧಿಯಾಗಿರುವುದು ಇದರಿಂದ ಸ್ಪಷ್ಟವಾಗಿದೆ ಎಂದು ದೂರಿದರು. ರೈತರ ಕೃಷಿ ಸಾಲದಿಂದ ಹಿಡಿದು ರಸ ಗೊಬ್ಬರ ಬಿತ್ತನೆ ಬೀಜ, ಖುಷಿ ಯಂತ್ರಗಳು, ಹನಿ ನೀರಾವರಿ ಪಾವತಿ ಖಾತೆ ವಿಭಾಗದ ಖಾತೆಗಳನ್ನು ಹಾಗೂ ಬೆಳೆ ದೃಡೀಕರಣ, ಅಲ್ಪಾವಧಿಯ ಸಾಲ ಪಡೆಯಲು ಪ್ರತಿಯೊಬ್ಬರಿಗೂ ಈ ದಾಖಲೆ ಬೇಕಾಗಿದೆ,
2017 ರಲ್ಲಿ ಇದರ ಬೆಲೆ 10 ಇತ್ತು, ಈಗ 25 ರೂಗೆ ಏರಿಸಿರುವುದು ಸಮರ್ಥನೆ ಅಲ್ಲ. ಇದು ರೈತರ ವಿರೋಧಿ ನಡುವಳಿಕೆ ಒಂದು ಸಾಕ್ಷಿಯಾಗಿದೆ ಎಂದು ತೀರ್ವ ಆಕ್ರೋಶ ವ್ಯಕ್ತಪಡಿಸಿದರು . ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಕಿಸಾನ್ ಸಂಘದ ಸದಸ್ಯರು ಬ್ಲಾಕ್ ಅಧ್ಯಕ್ಷರು ಹಾಜರಿದ್ದರು.