ನಿತ್ಯವಾಣಿ,ಚಿತ್ರದುರ್ಗ,(ಜೂ.22) : ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರಿಗೆ ಶಿಶುಪಾಲನಾ ರಜೆ ಮಂಜೂರು ಮಾಡಲು ಬಜೆಟ್ ನಲ್ಲಿ ಅವಕಾಶ ಕಲ್ಪಿಸಿ ಆದೇಶ ಮಾಡಿದ ಕರ್ನಾಟಕ ರಾಜ್ಯದ ಸರ್ಕಾರಿ ನೌಕರರ ಬಗ್ಗೆ ಅಪಾರ ಗೌರವ, ಪ್ರೀತಿ, ಕಾಳಜಿ, ಹೊಂದಿರುವ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪ ನವರಿಗೆ ಹಾಗೂ ಈ ಆದೇಶ ಮಾಡಿಸುವಲ್ಲಿ ಶ್ರಮಿಸಿದ ಯುವಕರು, ಉತ್ಸಾಹಿಗಳು, ಕ್ರೀಯಾಶೀಲರು, ನೌಕರರ ಬಗ್ಗೆ ಅಪಾರ ಕಾಳಜಿಯಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ.ಎಸ್ ಷಡಕ್ಷರಿಯವರಿಗೆ ಮಹಾ ಪ್ರಧಾನ ಕಾರ್ಯದರ್ಶಿಗಳಾದ ಜಗದೀಶ್ ಗೌಡ ಪಾಟೀಲ್ ರವರಿಗೆ, ಖಜಾಂಚಿ ಗಳಾದ ಶ್ರೀನಿವಾಸ್ ರವರಿಗೆ, ಹಾಗೂ ಕೇಂದ್ರ ಸಂಘದ ಎಲ್ಲಾ ಪದಾಧಿಕಾರಿಗಳಿಗೆ ಹಾಗೂ ಈ ಆದೇಶ ಹೊರಡಿಸಲು ಕಾರಣೀಭೂತರಾದ ಎಲ್ಲಾ ಹಂತದ ಅಧಿಕಾರಿ/ನೌಕರರಿಗೆ ಚಿತ್ರದುರ್ಗ ಜಿಲ್ಲಾ ಸರ್ಕಾರಿ ನೌಕರರ ಸಂಘದ ವತಿಯಿಂದ, ತಾಲ್ಲೂಕು ಸಂಘಗಳ ವತಿಯಿಂದ ಹಾಗೂ ಜಿಲ್ಲೆಯ/ರಾಜ್ಯದ ಸಮಸ್ತ ಮಹಿಳಾ ನೌಕರರ ಪರವಾಗಿ ರಾಜ್ಯದ ಮುಖ್ಯಮಂತ್ರಿಗಳಿಗೆ ಹಾಗೂ ರಾಜ್ಯಾಧ್ಯಕ್ಷರಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆ ಚಿತ್ರದುರ್ಗ ಅಧ್ಯಕ್ಷರಾದ ಮಂಜುನಾಥ ಕೃಷ್ಣಮೂರ್ತಿ ಚಿಕ್ಕಂದವಾಡಿ ರವರು ಪತ್ರಿಕಾ ಪ್ರಕಟಣೆ ಮೂಲಕ ಧನ್ಯವಾದಗಳನ್ನು ತಿಳಿಸಿದ್ದಾರೆ.ಉಚಿತ ಸುದ್ದಿ, ಜಾಹೀರಾತಿಗಾಗಿ ,👉ನಿತ್ಯವಾಣಿ ಕನ್ನಡ ದಿನಪತ್ರಿಕೆ, ಸಂಪಾದಕರು ಎಸ್. ಟಿ .ನವೀನ್ ಕುಮಾರ್, ಚಿತ್ರದುರ್ಗ, ಮೊಬೈಲ್ -9901254020 , www.nithyavaninews.com