ಚಿತ್ರದುರ್ಗ , ನಿತ್ಯವಾಣಿ, ಮಾ 27 : ಕೇಂದ್ರ ಪುರಸ್ಕೃತ ನ್ಯಾಷನಲ್ ಹ್ಯಾಂಡ್ಲೂಮ್ ದೆವಲಪ್ಮೆಂಟ್ ಪ್ರೋಗ್ರಂ ಯೋಜನೆಯಡಿ ಯುಗಾದಿ ಹಬ್ಬದ ಪ್ರಯುಕ್ತ ದಿನಾಂಕ.. 28-03-2021 ರಿಂದ 10-4-2021 ರವರೆಗೆ ಶ್ರೀಮತಿ ಕಾಟಮ್ಮ ವೀರನಾಗಪ್ಪ ಸಮುದಾಯಭವನ ವಿ ಪಿ ಬಡವಣೆ ಅರಣ್ಯ ಇಲಾಖೆ ಎದುರು ಚಿತ್ರದುರ್ಗ , ಇಲ್ಲಿ ವಸ್ತ್ರಾಂಜಲಿ 2021 ಹೆಸರಿನಲ್ಲಿ ರಾಜ್ಯಮಟ್ಟದ ವಿಶೇಷ ಕೈಮಗ್ಗ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಏರ್ಪಡಿಸಲಾಗಿದೆ, ಜಿಲ್ಲೆಯ ಹಾಗೂ ಹೊರಜಿಲ್ಲೆಗಳ ಕೈಮಗ್ಗ ನೇಕಾರ ಸಹಕಾರ ಸಂಘಗಳ ನೇಕಾರರಿಂದ ಉತ್ಪಾದಿಸಲ್ಪಟ್ಟ ವಸ್ತುಗಳ ಮಾರಾಟವನ್ನು ಉತ್ತೇಜಿಸುವ ಸಲುವಾಗಿ ಭಾರತ ಸರ್ಕಾರದ ಸಹಯೋಗದೊಂದಿಗೆ ಈ ಮೇಳವನ್ನು ಆಯೋಜಿಸಲಾಗಿದೆ, ಈ ಮೇಳದ ಸದರಿ ಮೇಳದಲ್ಲಿ ಜಿಲ್ಲೆಯ ಪ್ರಖ್ಯಾತ ಮೊಳಕಾಲ್ಮೂರು ಅಪ್ಪಟ ಅವಧಿಯಲ್ಲಿ ರಾಜ್ಯ ಸರ್ಕಾರದಿಂದ ಶೇಕಡ 20ರಷ್ಟು ರಿಯಾಯಿತಿ ದರದಲ್ಲಿ ಕೈಮಗ್ಗ ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶವಿರುತ್ತದೆ, ಸದರಿ ಮೇಳದಲ್ಲಿ ಜಿಲ್ಲೆಯ ಪ್ರಖ್ಯಾತ ಮೊಳಕಾಲ್ಮೂರು ಅಪ್ಪಟ ರೇಷ್ಮೆ ಸೀರೆಗಳು, ಚಳ್ಳಕೆರೆಯ ವಿವಿಧ ನಮೂನೆಯ ಉಣ್ಣೆ ಕಂಬಳಿಗಳು ಹಾಗೂ ಜಿಲ್ಲೆಯ ವಿವಿಧ ಭಾಗಗಳಲ್ಲಿ ತಯಾರಾಗುತ್ತಿರುವ ಹತ್ತಿ ಕೈಮಗ್ಗ ಉತ್ಪನ್ನಗಳಾದ, ಲುಂಗಿ ಗಳು ಬೆಡ್ ಶೀಟ್, ಶರ್ಟಿಂಗ್ ಗಳು, ಕೈವಸ್ತ್ರ, ಟವಲ್, ಇಳಕಲ್ ಸೀರೆಗಳು ಇತ್ಯಾದಿ ಕೈಮಗ್ಗ ಉತ್ಪನ್ನಗಳು ನೇಕಾರ ಸಹಕಾರ ಸಂಘಗಳಿಂದ ನೇರವಾಗಿ ಗ್ರಾಹಕರಿಗೆ ಮಾರಾಟಕ್ಕೆ ಲಭ್ಯವಾಗುತ್ತದೆ, ಈ ಮೇಳದಲ್ಲಿ ಭಾಗವಹಿಸುವ ನೇಕಾರ ಸಹಕಾರ ಸಂಘಗಳ ಅವರಿಗೆ ಉಚಿತವಾಗಿ 10*10 ಅಳತೆಯ, ವಿದ್ಯುತ್ ಸೌಲಭ್ಯವನ್ನು ಒಳಗೊಂಡ ಸುಸಜ್ಜಿತ ಮಳಿಗೆಯನ್ನು ಉಚಿತವಾಗಿ ನೀಡಲಾಗುವುದು, ಹಾಗೂ ಮಳಿಗೆಗಳಲ್ಲಿರುವ ದಾಸ್ತಾನಿಗೆ ವಿಮೆ ಭದ್ರತೆಯನ್ನು ಒದಗಿಸಲಾಗುವುದು, ಮೇಳಕ್ಕೆ ಹೆಚ್ಚಿನ ಗ್ರಾಹಕರನ್ನು ಆಕರ್ಷಿಸಲು ವಿವಿಧ ಪ್ರಚಾರ ಕಾರ್ಯವನ್ನು ಕೈಗೊಳ್ಳಲಾಗಿದೆ, ಹಾಗೂ ನಗರದ ಗ್ರಾಹಕರು ಹೆಚ್ಚಿನದಾಗಿ ಮೇಳಕ್ಕೆ ಭೇಟಿ ನೀಡಿ ಕೈಮಗ್ಗ ಉತ್ಪನ್ನಗಳನ್ನು ಖರೀದಿಸಿ ಕೈಮಗ್ಗ ನೇಕಾರರಿಗೆ ಪ್ರೋತ್ಸಾಹಿಸಲು ಕೋರಲಾಗಿದೆ, ಮೇಳಕ್ಕೆ ಭೇಟಿ ನೀಡುವ ಗ್ರಾಹಕರ ಕಡ್ಡಾಯವಾಗಿ ಮುಖಗವಸು (ಮಾಸ್ಕ್ ) ಧರಿಸುವುದು ಸಾಮಾಜಿಕ ಅಂತರ ಕಾಪಾಡುವುದು ಮತ್ತು ಸ್ಯಾನಿಟೈಜರ್ ಬಳಸುವುದು ಕಡ್ಡಾಯವಾಗಿದೆ, ಮತ್ತು ಆಟೋ ಪ್ರಚಾರವನ್ನು ಕೈಗೊಂಡಿದೆ, ಈ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಕವಿತಾ ಮನ್ನಿಕೆರೆ, ಶಾಸಕ ತಿಪ್ಪಾರೆಡ್ಡಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶಶಿಕಲ ಸುರೇಶ್ ಬಾಬು, ಜಿಲ್ಲಾ ಪಂಚಾಯತ್ ಕೃಷಿ ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷೆ ಕೌಸಲ್ಯ ತಿಪ್ಪೇಸ್ವಾಮಿ ಭಾಗವಹಿಸುವರು ಎಂದು ಚಿತ್ರದುರ್ಗ ಕೈಮಗ್ಗ ಮತ್ತು ಜವಳಿ ಉಪನಿರ್ದೇಶಕರಾದ ಡಾ.ಶಿವರಾಜು ಆರ್. ಕುಲಕರ್ಣಿಯವರು ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ