ನಿತ್ಯವಾಣಿ,ಚಿತ್ರದುರ್ಗ, ಜೂ.07 : ಈಶ್ವರ ಪೌಂಡೇಶನ್ ಭೀಮಸಮುದ್ರ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಚಿತ್ರದುರ್ಗ ಇವರ ಸಹಯೋಗದೊಂದಿಗೆ ಭೀಮಸಮುದ್ರ ದಲ್ಲಿ ನಾಳೆ ಅಂದರೆ ಬುಧವಾರ ಉಚಿತ ನೇತ್ರ ತಪಾಸಣಾ ಶಿಬಿರ, ನೇತ್ರ ಶಸ್ತ್ರಚಿಕಿತ್ಸೆ ಹಾಗೂ ರಕ್ತದಾನ ಶಿಬಿರ, ಭೀಮಸಮುದ್ರ ದ ದಿವಂಗತ ಡಾಕ್ಟರ್ ಈಶ್ವರಪ್ಪನವರ ಸ್ವಗೃಹದಲ್ಲಿ ಕಾರ್ಯಕ್ರಮ ಬೆಳಗ್ಗೆ 9.30 ರಿಂದ ಮಧ್ಯಾಹ್ನ 3.30 ರ ವರೆಗೆ ನಡೆಯಲಿದೆ, ಹೆಸರಾಂತ ನೇತ್ರ ತಜ್ಞರಾದ ಕೊಂಡ್ಲಹಳ್ಳಿ ಯ ಡಾಕ್ಟರ್ ನಾಗರಾಜು, ಸಕ್ಕರೆ ಕಾಯಿಲೆ ಹಾಗು ಥೈರಾಯಿಡ್ ವೈದ್ಯರಾದ ಹಾಲೂರು ಮಂಜುನಾಥ್ ರವರು ಶಿಬಿರದ ನೇತೃತ್ವವನ್ನು ವಹಿಸುವರು, ಇದೇ ಸಂದರ್ಭದಲ್ಲಿ 2021-22 ಸಾಲಿನ 10ನೇ ತರಗತಿಯಲ್ಲಿ ಶೇಕಡ 85% ರಷ್ಟು ಮಾರ್ಕ್ಸ್ ತೆಗೆದ ಭೀಮಸಮುದ್ರದ ಸುತ್ತಮುತ್ತಲಿನಲ್ಲಿರುವ ವಿದ್ಯಾರ್ಥಿಗಳಿಗೆ ನಗದು ಮತ್ತು ಪ್ರಶಸ್ತಿ ಪತ್ರವನ್ನು ನೀಡಲಾಗುವುದು, ಈ ಕಾರ್ಯಕ್ರಮದಲ್ಲಿ ಆಮ್ ಆದ್ಮಿ ಪಕ್ಷದ ಕರ್ನಾಟಕ ಉಸ್ತುವಾರಿ ಯಾದ ದಿಲೀಪ್ ಪಾಂಡೆ, ಕರ್ನಾಟಕ ರಾಜ್ಯ ಅಧ್ಯಕ್ಷ ಪೃಥ್ವಿ ರೆಡ್ಡಿ, ಉಪಾಧ್ಯಕ್ಷ ಭಸ್ಕರ್ ರಾವ್ ಭಾಗವಹಿಸುವವರು ಎಂದು ಈಶ್ವರ ಪೌಂಡೇಶನ್ ಮುಖ್ಯಸ್ಥ ಬಿ ಜಗದೀಶ್ ಅವರು ಚಿತ್ರದುರ್ಗದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು,
ಈ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ಚಿತ್ರದುರ್ಗ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶೇಖರಪ್ಪ, ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಶಶಿಧರ್, ಗುರುಮೂರ್ತಿ,ಇನ್ನಿತರರು ಭಾಗವಹಿಸಿದ್ದರು,