ನಿತ್ಯವಾಣಿ,ಚಿತ್ರದುರ್ಗ: ಡಿ.23 : ಕ್ಷಯರೋಗ ಮಾರಣಾಂತಿಕ ಕಾಯಿಲೆಯಲ್ಲ ರೋಗಿಗೆ ಕೇವಲ ಔಷಧ, ಮಾತ್ರೆಗಳನ್ನು ನೀಡುವುದನ್ನು ಬಿಟ್ಟು ಸರಿಯಾದ ಸಮಯಕ್ಕೆ ಪೌಷ್ಟಿಕ ಆಹಾರ ನೀಡಬೇಕು ರೋಗಿಗೆ ಊಟವಿಲ್ಲದೆ ಕೇವಲ ಮಾತ್ರೆಗಳನ್ನು ನೀಡಿದರೆ ಆತನ ದೇಹ ಮಾತ್ರೆಗೆ ಸ್ಪಂದಿಸದೆ ವಾಂತಿಯಾಗುತ್ತದೆ ಇದರಿಂದ ರೋಗಿ ಮಾತ್ರೆಗಳನ್ನು ಸೇವಿಸುವುದನ್ನು ಬಿಟ್ಟು ಬಿಡುತ್ತಾನೆ ನಂತರದಲ್ಲಿ ದೇಹ ಕೃಷವಾಗಿ ಮರಣ ಸಂಭವಿಸುವ ಅಪಾಯ ವಿರುತ್ತದೆ ಅದಕ್ಕಾಗಿ ಆಶಾ ಕಾರ್ಯಕರ್ತೆಯರ ಜೊತೆಗೆ ಇತರ ಅರೋಗ್ಯ ಕಾರ್ಯಕರ್ತರು ರೋಗಿಯ ಆಹಾರ ವಿಹಾರದ ಬಗ್ಗೆ ಕಾಳಜಿ ವಹಿಸಬೇಕು” ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಬಿ.ವಿ.ಗಿರೀಶ್ ಹೇಳಿದರು.
ಅವರು ಇಂದು ತಾಲ್ಲೂಕಿನ ಬೆಳಗಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಗತಿ ಪರಿಶೀಲನಾ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ “ಬಡ ಕ್ಷಯ ರೋಗಿಗಳಿಗೆ ಪೌಷ್ಟಿಕ ಆಹಾರ ಸೇವನೆಗಾಗಿ ಡಿಬಿಟಿ ಯೋಜನೆಯ ಮೂಲಕ ರೋಗಿಯ ಖಾತೆಗೆ ನೇರವಾಗಿ ಮಾಸಿಕ 500 ರೂ. ನೀಡುತಲಿದ್ದು , ಹಣವನ್ನು ರೋಗಿ ದುಷ್ಚಟಗಳಿಗೆ ಉಪಯೋಗಿಸದೆ ಹಣ್ಣು,ತರಕಾರಿ, ಮೊಟ್ಟೆಯಂತಹ ಪೌಷ್ಟಿಕ ಆಹಾರ ಸೇವನೆ ಮಾಡುಂತೆ ರೋಗಿಗೆ ಸಲಹೆ ನೀಡಬೇಕು ” ಎಂದು ಆಶಾ ಕಾರ್ಯಕರ್ತೆಯರಿಗೆ ಸಲಹೆ ನೀಡಿದರು.
ಇದೇ ಸಭೆಯಲ್ಲಿ ಭಾಗವಹಿಸಿದ್ದ ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎ.ಎಸ್. ಮಂಜುನಾಥ್ ಮಾತನಾಡಿ ” ಈಗ ಎಲ್ಲಾ ಉಪ ಅರೋಗ್ಯ ಕೇಂದ್ರಗಳನ್ನು ಆರೋಗ್ಯ ಕ್ಷೇಮ ಕೇಂದ್ರಗಳನ್ನಾಗಿ ಘೋಷಿಸಿದ್ದು ಈ ಕ್ಷೇಮ ಕೇಂದ್ರಗಳಲ್ಲಿ ರೋಗಿಗಳ ಆರೈಕೆ ಜೊತೆಗೆ ಪ್ರಾಥಮಿಕ ಅರೋಗ್ಯ ಯೋಗ ತರಬೇತಿ ಕ್ಷತ್ರಗಳನ್ನು ಏರ್ಪಡಿಸಿ ಆಶಾ ಹಾಗೂ ಆರೋಗ್ಯ ಕಾರ್ಯಕರ್ತರು ತಾವೂ ಯೋಗ ಕಲಿಯುವುದರ ಜೊತೆಗೆ ಗ್ರಾಮದ ಜನರಿಗೂ ಯೋಗ ಕಲಿತು ಆರೋಗ್ಯ ಸುಧಾರಿಸಿಕೊಳ್ಳುವಂತೆ ಪ್ರೇರೇಪಿಸಬೇಕು. ಒಂದು ಸಿಗರೇಟ್ ಹತ್ತು ರೂಪಾಯಿ ಅದನ್ನು ಸೇದಿ ಅರೋಗ್ಯ ಹಾಳು ಮಾಡಿಕೊಳ್ಳುವ ಬದಲು ಅದೇ ದುಡ್ಡಿನಲ್ಲಿ ಎರಡು ಮೊಟ್ಟೆ ತಿಂದು ಆರೋಗ್ಯ ಕಾಪಾಡಿಕೊಳ್ಳುವಂತೆ ಕ್ಷಯ ರೋಗಿಗಳಿಗೆ ಸಲಹೆ ನೀಡಿ” ಎಂದರು.
ಸಭೆಯಲ್ಲಿ ಬೆಳಗಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ನಳಿನಾಕ್ಷಿ, ಜಿಲ್ಲಾ ಪಂಚಾಯತಿ ಎಸ್.ಬಿ.ಸಿ.ಸಿ. ಸಂಯೋಜಕರಾದ ಸುನೀಲ್ ,ಆರೋಗ್ಯ ನಿರೀಕ್ಷಣಾಧಿಕಾರಿ ಡಿ.ಮಹೇಶ್, ತಾಲ್ಲೂಕು ಆರೋಗ್ಯ ಸಂರಕ್ಷಣಾಧಿಕಾರಿ ಪರ್ವಿನ್ ಬಾನು, ತಾಲ್ಲೂಕು ಕ್ಷಯರೋಗ ಮೇಲ್ವಿಚಾರಕ ಮಾರುತಿ, ಜಿಲ್ಲಾ ಸುಶ್ರುಷಣಾಧಿಕಾರಿ ಶಾಂತಮ್ಮ, ಬೆಳಗಟ್ಟ ಆರೋಗ್ಯ ಸಂರಕ್ಷಣಾಧಿಕಾರಿಗಳಾದ ಟಿ.ನಿರ್ಮಲಾ, ಭಾರತೀ ಕಟ್ಟಿಮನಿ,ಆರೋಗ್ಯ ಕೇಂದ್ರದ ಯೋಗ ತರಬೇತುದಾರರಾದ ಲಲಿತ ಬೇದ್ರೆ, ಕೆ.ರವಿ ಅಂಬೇಕರ್ ಹಾಗೂ ಆಶಾ ಕಾರ್ಯಕರ್ತೆಯರು ಭಾಗವಹಿಸಿ