ಪಟ್ಟಣ ಪಂಚಾಯಿತಿಯ ನೂತನ ಅಧ್ಯಕ್ಷರಾದ ಆರ್ ಎ ಅಶೋಕ್ ರವರ ಅಧ್ಯಕ್ಷತೆಯಲ್ಲಿ ಮೊದಲನೆ ಸಾಮಾನ್ಯ ಸಭೆ

ಶಾಸಕ ಎಂ ಚಂದ್ರಪ್ಪನವರು, ಉಪಸ್ಥಿತಿಯಲ್ಲಿ ಪಟ್ಟಣ ಪಂಚಾಯಿತಿಯ ನೂತನ ಅಧ್ಯಕ್ಷರಾದ ಆರ್ ಎ ಅಶೋಕ್ ರವರ ಅಧ್ಯಕ್ಷತೆಯಲ್ಲಿ ಮೊದಲನೆ ಸಾಮಾನ್ಯ ಸಭೆಯನ್ನು ನಡೆಸಲಾಯಿತು
ಹೊಳಲ್ಕೆರೆ ಪಟ್ಟಣಕ್ಕೆ ಶುದ್ಧ ಕುಡಿಯುವ ನೀರಿನ ಟ್ಯಾಂಕರ್ ಒದಗಿಸಲು ಕ್ರಮ ವಹಿಸಲಾಗುವುದು ಮತ್ತು ಪಟ್ಟಣದ ಬೀದಿ ದೀಪಗಳ ನಿರ್ವಹಣೆಗಾಗಿ ಏಣಿ ಹೊಂದಿರುವ ಜೀಪ್ ಒದಗಿಸಲಾಗುವುದು, ಬೀದಿ ದೀಪಗಳ ಸೌಲಭ್ಯ ಒದಗಿಸಲಾಗುವುದು ಎಂದು ಶಾಸಕರು ತಿಳಿಸಿದರು.
ರೂ 9.14 ಕೋಟಿ ಅಂದಾಜು ವೆಚ್ಛದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಹೊಳಲ್ಕೆರೆ ಪಟ್ಟಣ ಪಂಚಾಯಿತಿಯ ನೂತನ ಕಛೇರಿ ಕಟ್ಟಡ ನಿರ್ಮಾಣಕ್ಕೆ ಕರೆಯಲಾದ ಟೆಂಡರ್ ತಾಂತ್ರಿಕ ಪ್ರಸ್ತಾವನೆಯ ಮಂಜೂರಾತಿಗಾಗಿ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲು ಸಭೆಯಲ್ಲಿ ಅನುಮೋದಿಸಲಾಯಿತು. ಹೊಳಲ್ಕೆರೆ ಪಟ್ಟಣ ಪಂಚಾಯಿತಿಯ ಅಧೀನದಲ್ಲಿರುವ ಸುಸ್ಥಿತಿಯಲ್ಲಿರದ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ರಿಪೇರಿ ಮಾಡಿಸಿ ತದನಂತರ ಎಲ್ಲಾ 09 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ವಹಣೆ ಮಾಡಲು ಹರಾಜು ಮೂಲಕ ವಿಲೇಪಡಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ನೀರು ಸರಬರಾಜು ನಿರ್ವಹಣೆಗೆ, ಬೀದಿ ದೀಪ ನಿರ್ವಹಣೆಗೆ ವಾರ್ಷಿಕ ಟೆಂಡರ್ ಕರೆಯಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯಲ್ಲಿ ಉಪಾಧ್ಯಕ್ಷರಾದ ಕೆ ಸಿ ರಮೇಶ್, ಸದಸ್ಯರುಗಳಾದ ನಾಗರತ್ನ. ಹೆಚ್.ಆರ್., ಪಿ.ಆರ್. ಮಲ್ಲಿಕಾರ್ಜುನ, ಡಿ.ಎಸ್. ವಿಜಯ, ಬಿ.ಎಸ್.ರುದ್ರಪ್ಪ, ವಿಜಯಸಿಂಹ ಖಾಟ್ರೋತ್.ಎಲ್, ಮಮತ ಜಯಸಿಂಹ ಖಾಟ್ರೋತ್, ಪಿ.ಹೆಚ್. ಮುರುಗೇಶ್, ಶಬೀನ ಅಶ್ರಫ್‍ವುಲ್ಲಾ, ಸೈಯದ್ ಸಜೀಲ್, ಸೈಯದ್ ಮನ್ಸೂರ್, ಪೂರ್ಣಿಮ ಬಸವರಾಜ್, ಸುಧಾ ಬಸವರಾಜ, ಸವಿತ ನರಸಿಂಹ ಖಾಟ್ರೋತ್, ಬಿ. ವಸಂತ ಆರ್. ರಾಜಪ್ಪ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ ವಾಸಿಂ ಹಾಗೂ ಸಿಬ್ಬಂದಿ ವರ್ಗ ಹಾಜರಿದ್ದರು.
ಪೌರಸೇವಾ ನೌಕರರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬಿ ಉನ್ನಿಕುಮಾರ್ ರವರಿಗೆ ಪಟ್ಟಣ ಪಂಚಾಯಿತಿ ಸರ್ವ ಸದಸ್ಯರುಗಳು ಅಭಿನಂದನೆ ಸಲ್ಲಿಸಿದರು.

 

Leave a Reply

Your email address will not be published.