ನಿತ್ಯವಾಣಿ,ಚಿತ್ರದುರ್ಗ,(ಜು .1) : ಮಾಡನಾಯಕನಹಳ್ಳಿಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಹೆಚ್.ಡಿ.ಮಂಜುಳಾದೇವಿ ಇಂದು ನಿವೃತ್ತಿ ಹೊಂದಿದರು. ಮಾಡನಾಯಕನಹಳ್ಳಿ ಗ್ರಾಮದ ಶಾಲೆಯಲ್ಲಿ ಸುಧೀರ್ಘ ಸೇವೆ ಸಲ್ಲಿಸಿ ಗ್ರಾಮಸ್ಥರ ಮನ್ನಣೆ ಗಳಿಸಿದ್ದ ಮಂಜುಳಾದೇವಿ ಅವರ ಸೇವೆಯನ್ನು ಶ್ಲಾಘಿಸಿದ ಎಸ್.ಡಿ.ಎಮ್.ಸಿ ಅಧ್ಯಕ್ಷರು.ಸದಸ್ಯರು. ಸಹಶಿಕ್ಷಕರು, ಪ್ರೌಢಶಾಲೆ ಶಿಕ್ಷಕರು, ಶಾಲಾ ಸಿಬ್ನಂದಿಗಳು, ಅಂಗನವಾಡಿ ಹಾಗು ಆಶಾ ಕಾರ್ಯಕರ್ತೆಯರು, ಗ್ರಾಮ ಪಂಚಾಯತಿ ಸಿಬ್ಬಂದಿಗಳು, ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತು ಸದಸ್ಯರೆಲ್ಲರೂ ಸೇರಿ ಶಾಲೆಯ ಆವರಣದಲ್ಲಿ ಅದ್ದೂರಿ ಕಾರ್ಯಕ್ರಮ ಆಯೋಜನೆ ಮಾಡಿ ಸನ್ಮಾನಿಸಿ ಆತ್ಮೀಯವಾಗಿ ಬೀಳ್ಕೊಟ್ಟರು, ಈ ವೇಳೆ ಪ್ರೌಢಶಾಲೆ ಮುಖ್ಯ ಶಿಕ್ಷಕ ಶ್ರೀನಿವಾಸ್ ಮಾತನಾಡಿ ಮಂಜುಳಾದೇವಿ ಅವರ ಸುದೀರ್ಘ ಸೇವೆಯ ಅವಧಿಯಲ್ಲಿ ಮಾಡಿದ ಕೆಲಸಗಳು, ಅವರು ಗಳಿಸಿದ ಜನಮನ್ನಣೆಯ ಬಗ್ಗೆ ಗುಣಗಾನ ಮಾಡಿದರು.ಎಸ್.ಡಿ.ಎಮ್.ಸಿ.ಅದ್ಯಕ್ಷ ಮೈಲಾರಪ್ಪ.ಕೃಷ್ಣಮೂರ್ತಿ.ಗ್ರಾಮ ಪಂಚಾಯತಿ ಅದ್ಯಕ್ಷೆ ಗೌರಮ್ಮ. ಸದಸ್ಯ ಲಿಂಗರಾಜು.ಪಿ.ಡಿ.ಒ .ಕೇಶವಮೂರ್ತಿ. ಶಿಕ್ಷಣ ಸಂಯೋಜಕರಾದ ವೇಣುಗೋಪಾಲ. ಬಿ.ಆರ್.ಪಿ .ದಿನೇಶ್.ಸಿ.ಆರ್.ಪಿ.ಶೈಲ ಮತ್ತು ಶಾಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.