ನಿತ್ಯವಾಣಿ,ಚಿತ್ರದುರ್ಗ,(ಆ.10) : ಸೆಲ್ಯೂಟ್ ವಾರಿಯರ್ಸ್ ಕನ್ನಡ ವೀಡಿಯೋ ಆಲ್ಬಂ ಬಿಡುಗಡೆ ಹಾಗೂ ಕೋವಿಡ್ ವಾರಿಯರ್ಸ್‍ಗಳಿಗೆ ಸನ್ಮಾನ ಸಮಾರಂಭದಲ್ಲಿ ನಿತ್ಯವಾಣಿ ದಿನಪತ್ರಿಕೆಯ ಸಂಪಾದಕರಾದ ಎಸ್.ಟಿ.ನವೀನ್‍ಕುಮಾರ್ ರವರಿಗೆ ಮಾನ್ಯ ಪ್ರಧಾನ ಚಿತ್ರದುರ್ಗ ಜಿಲ್ಲಾ ಮತ್ತು ಸತ್ರಾ ನ್ಯಾಯಾಧೀಶೆ ಶ್ರೀಮತಿ ಪ್ರೇಮಾವತಿ ಮನಗೊಳಿಯವರು ಅಭಿನಂದನಾ ಪತ್ರ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ, ಜಿ.ಪಂ ಸಿಇಓ ಡಾ.ನಂದಿನಿದೇವಿ, ಡಿಹೆಚ್‍ಓ ಡಾ.ಆರ್.ರಂಗನಾಥ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಮಂಜುನಾಥ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಶಿವುಯಾದವ್, ವೈದ್ಯರಾದ ಡಾ.ರವಿಕುಮಾರ್, ಕ್ರಿಯೇಟಿವ್ ಹೆಡ್ ಮಾಲತೇಶ್‍ಅರಸ್ ಹರ್ತಿಕೋಟೆ ಉಪಸ್ಥಿತರಿದ್ದರು.