ಸಿಸಿಬಿಗೆ ದಾಖಲೆ ನೀಡಿದ್ದೇನೆ ಎಂದಿದ್ದ ಇಂದ್ರಜಿತ್ ಲಂಕೇಶ್ ಸುಳ್ಳು ಹೇಳಿದ್ರಾ ?

ಬೆಂಗಳೂರು : ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್ ಜಾಲದ ಆರೋಪ ಪ್ರಕರಣ ಸಂಬಂಧ ಸಿಸಿಬಿ ವಿಚಾರಣೆಗೆ ಹಾಜರಾಗಿದ್ದ ಇಂದ್ರಜಿತ್ ಲಂಕೇಶ್, 10-15 ಜನ ಹೆಸರು ಹಾಗು ದಾಖಲೆ ನೀಡಿದ್ದೇನೆ ಎಂದು ತಿಳಿಸಿದ್ದರು. ಆದ್ರೆ ಈ ಹೇಳಿಕೆ ಇದೀಗ ಸಿಸಿಬಿ ಅಧಿಕಾರಿಗಳೇ ತಳ್ಳಿ ಹಾಕಿದ್ದಾರೆ.ಹೌದು, ಶನಿವಾರ ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್ ನಂಟು ಇದೆ ಎಂದು ಹೇಳಿಕೆ ನೀಡಿದ್ದ ಇಂದ್ರಜಿತ್ ಲಂಕೇಶ್ ಆಗಸ್ಟ್ 31 ರಂದು ಸಿಸಿಬಿ ಕಚೇರಿಗೆ ಆಗಮಿಸಿ, ತಮ್ಮ ಹೇಳಿಕೆಯನ್ನ ನೀಡಿದ್ದಾರೆ. ಬಳಿಕ ಮಾದ್ಯಮಗಳಿಗೆ ಹೇಳಿಕೆ ನೀಡಿದ್ದ ಇಂದ್ರಜಿತ್, ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿದ್ದ 10-15 ಜನ ಹೆಸರು ಹಾಗು ಅದಕ್ಕೆ ಸಂಬಂಧಿಸಿದಂತೆ ದಾಖಲೆ ನೀಡಿದ್ದೇನೆ ಎಂದು ಹೇಳಿದ್ದರು. ಆದರೆ ಇದೀಗ ಹೇಳಿಕೆಯನ್ನ ಸಿಸಿಬಿ ಡಿಸಿಪಿ ಸಂದೀಪ್ ಪಾಟೀಲ್ ಅಲ್ಲಗೆಳೆದಿದ್ದಾರೆ. ಇಂದ್ರಜಿತ್ ಲಂಕೇಶ್ ಯಾವುದೇ ಸಾಕ್ಷ್ಯ ನೀಡಿಲ್ಲ ಎಂದು ಡಿಸಿಪಿ ಸಂದೀಪ್ ಪಾಟೀಲ್ ತಿಳಿಸಿದ್ದಾರೆ. ಈಗಾಗಲೇ ಮತ್ತೆ ವಿಚಾರಣೆಗೆ ಸಿಸಿಬಿ ಅಧಿಕಾರಿಗಳು ಕರೆದಿದ್ದು, ನಾಳೆ ಮತ್ತೆ ಸಿಸಿಬಿ ಎದುರು ಹಾಜರಾಗಲಿದ್ದಾರೆ. ನಾಳೆ ವಿಚಾರಣೆ ವೇಳೆ ಸಾಕ್ಷ್ಯಾಧಾರಗಳನ್ನ ಇಂದ್ರಜಿತ್ ಲಂಕೇಶ್ ನೀಡುತ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ.

Leave a Reply

Your email address will not be published.