ಪರೀಕ್ಷೆ ಇಲ್ಲದೆ ಪಾಸ್ ಮಾಡುವ ಆಲೋಚನೆ ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ಮತ್ತು ಉದ್ಯೋಗ ಜೀವನವನ್ನು ಕಸಿದುಕೊಳ್ಳುತ್ತದೆ : ವಿದ್ಯಾರ್ಥಿನಿ ನಯನ ಓ ಜೋಗಿ

ನಿತ್ಯವಾಣಿ,ಚಿತ್ರದುರ್ಗ,(ಜೂ.11) : ಪ್ರಸ್ತುತ ಕರೋನ ಮಹಾಮಾರಿಯ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರಕಾರ ಮತ್ತು ಶಿಕ್ಷಣ ಇಲಾಖೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳನ್ನು 10ನೇ ಮತ್ತು 11ನೇ ತರಗತಿಯ ಫಲಿತಾಂಶದಲ್ಲಿ ಶೇಕಡವಾರು ಅಂಕಗಳನ್ನು ನೀಡಿ ಯಾವುದೇ ಪರೀಕ್ಷೆ ಇಲ್ಲದೆ ಪಾಸ್ ಮಾಡುವ ಆಲೋಚನೆ ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ಮತ್ತು ಉದ್ಯೋಗ ಜೀವನವನ್ನು ಕಸಿದುಕೊಳ್ಳುತ್ತದೆ.  ವಿದ್ಯಾರ್ಥಿಗಳು 10ನೇ ತರಗತಿಯಲ್ಲಿ 11ನೇ ತರಗತಿಯ ಸೆಮಿಸ್ಟರ್ ಪೂರಕ ರೂಪಣಾತ್ಮಕ ಪರೀಕ್ಷೆಗಳನ್ನು ವಯಸ್ಸಿನಲ್ಲಿ ಹುಡುಗಾಟಿಕೆಯಲ್ಲಿ ಅಥವಾ ವೈಯಕ್ತಿಕ ಒತ್ತಡದಿಂದ ಚೆನ್ನಾಗಿ ಬರೆದಿರುವುದಿಲ್ಲ. ಇಲ್ಲಿ ಖಚಿಟಿಞ ವಿದ್ಯಾರ್ಥಿ ಅಥವಾ ಸಾಮಾನ್ಯ ವಿದ್ಯಾರ್ಥಿ ಎಂಬ ಭೇದಭಾವವಿಲ್ಲ ಏಕೆಂದರೆ ಸ್ವತಃ ನಾವು ಕೂಡ ಟೆಸ್ಟುಗಳಲ್ಲಿ ಚೆನ್ನಾಗಿ ಅಂಕ ಬಂದಿರದೇ ಉತ್ತಮ ಅಂಕ ಪಡೆದವರನ್ನು ನೋಡಿ ಪ್ರೇರಣೆಯಿಂದ ಮುಖ್ಯ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದಿದ್ದೇವೆ ಇಂತಹ ಅನೇಕ ಉದಾಹರಣೆಗಳಿವೆ ಹಾಗಾಗಿ  ಸಮಯವಾಗಲಿ ಆಗಸ್ಟ್ ಅಲ್ಲ ನವೆಂಬರ್ ಆಗಲಿ 2021ರ ವರ್ಷದೊಳಗೆ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಮಾಡಲೇಬೇಕು. ಪಿಯುಸಿ ಅಂಕಗಳ ಮೇಲೆ ಸರ್ಕಾರದ ಹಲವಾರು ಉದ್ಯೋಗ ಗಳಾದ ಪೊಲೀಸ್, ವಿಲೇಜ್ ಅಕೌಂಟೆಂಟ್, ಪಿ ಡಿ ಒ, ಎಸ್.ಡಿ.ಓ, ಗ್ರೂಪ್-ಛಿ, ರೈಲ್ವೆ ಇಲಾಖೆ ಹಾಗೂ ಇತರೆ ಇಲಾಖೆಗಳಲ್ಲಿ ಮತ್ತು ಶಿಕ್ಷಕರು ಮತ್ತು ಉಪನ್ಯಾಸಕರುಗಳಿಗೆ ಪಿಯುಸಿ ಅಂಕವನ್ನು ಶೇಕಡವಾರು ಪರಿಗಣಿಸುವುದರಿಂದ ಮುಂದೆ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ ಮತ್ತು ನೇರ ನೇಮಕಾತಿ ಪ್ರಕ್ರಿಯೆಗಳಲ್ಲಿ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತದೆ.
ಆದ್ದರಿಂದ ಪಿಯುಸಿ ಶೇಕಡವಾರು ಅಂಕಗಳನ್ನು ಕೊಡುವುದರಿಂದ  ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಜಗತ್ತಿನಲ್ಲಿ ಸರಕಾರದ ನೌಕರಿಯಿಂದ ವಂಚಿತರಾಗುತ್ತಾರೆ. ವಿದ್ಯಾರ್ಥಿಗಳ ಐಕ್ಯೂ ಮಟ್ಟವು ಪೂರ್ವಭಾವಿ ಪರೀಕ್ಷೆಗಿಂತ ಅಂತಿಮ ಪರೀಕ್ಷೆಯಲ್ಲಿ ಹೆಚ್ಚಿರುತ್ತದೆ.ಸಚಿವರು,ಶಿಕ್ಷಣತಜ್ಞರು ಮತ್ತು ಸ್ಪರ್ಧಾತ್ಮಕ ಪರೀಕ್ಷೆಯ ಮುಖ್ಯಸ್ಥರ ಜೊತೆ ಚರ್ಚೆ ಮಾಡಿ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಮಾಡುವ ಮುಖಾಂತರ ಲಕ್ಷಾಂತರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕಾಗಿ ರಾಜ್ಯಸರ್ಕಾರಕ್ಕೆ ಹಾಗೂ ಮಾನ್ಯ ಶಿಕ್ಷಣ ಸಚಿವರಿಗೆ ಮನವಿ ಮಾಡಿಕೊಳ್ಳುತ್ತೇನೆ.

ನಯನ ಓ ಜೋಗಿ
ವಿದ್ಯಾರ್ಥಿನಿ
ರಾಜ್ಯ ಯುವ ಪ್ರತಿಭಾ ಪ್ರಶಸ್ತಿ ಪುರಸ್ಕøತರು
ಚಿತ್ರದುರ್ಗ, ಮೊ : 9449177058

Leave a Reply

Your email address will not be published.