ನಿತ್ಯ ವಾಣಿ, ಚಿತ್ರದುರ್ಗ, (ಮೇ. 19) : ಚಿತ್ರದುರ್ಗ ನಗರದಲ್ಲಿ ಪ್ರವಾಸಿಮಂದಿರದಲ್ಲಿ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಬಿ ಶ್ರೀರಾಮುಲು ಪತ್ರಿಕಾಗೋಷ್ಠಿ ನಡೆಸುವಾಗ ಕರ್ನಾಟಕ ನವನಿರ್ಮಾಣ ಸೇನೆ ಚಿತ್ರದುರ್ಗ ಜಿಲ್ಲಾಧ್ಯಕ್ಷ ಕೆ ಟಿ ಶಿವುಕುಮಾರ್ ಮಧ್ಯಪ್ರವೇಶಿಸಿ ಚಿತ್ರದುರ್ಗದಲ್ಲಿ ಮೆಡಿಕಲ್ ಕಾಲೇಜಿಗೆ ಭರವಸೆಕೊಟ್ಟು ಜಿಲ್ಲೆಯ ಶಾಸಕರುಗಳು ತಾವು ಲೋಕಸಭಾ ಸದಸ್ಯರು ಹಾಗೂ ಆರೋಗ್ಯ ಸಚಿವ ಡಾಕ್ಟರ್ ಸುಧಾಕರ್ ಮೂರು ವರ್ಷಗಳು ಪ್ರಾರಂಭವಾಗುತ್ತದೆ ಎಂದು ಸುಳ್ಳು ಹೇಳಿ ಮುಖ್ಯಮಂತ್ರಿಯಿಂದ ಆಶ್ವಾಸನೆ ತೆಗೆದುಕೊಂಡು ಬಂದು ಮಾಧ್ಯಮಗಳ ಮುಂದೆ ಹೇಳಿದ್ದರು, ಆದರೆ ಇದುವರೆಗೂ ಇದರ ಸುದ್ದಿನೇ ಇಲ್ಲ ಮುಖ್ಯಮಂತ್ರಿಗಳು ಬಜೆಟ್ ನಲ್ಲಿ ಇದರ ಘೋಷಣೆ ಖಾಸಗಿ ಸಹಭಾಗಿತ್ವದ ಮೆಡಿಕಲ್ ಎಂದು ಘೋಷಿಸಿದರು ಇದು ಚಿತ್ರದುರ್ಗದ ಜಿಲ್ಲೆಗೆ ತಾವೆಲ್ಲರೂ ಮಾಡಿರುವ ಮೋಸ ಎಲ್ಲರೂ ರಾಜೀನಾಮೆ ಕೊಟ್ಟರು ಪರವಾಗಿಲ್ಲ ಮೆಡಿಕಲ್ ಕಾಲೇಜು ಹಾಗೂ ಕೇಂದ್ರಸರ್ಕಾರ ಆಕ್ಸಿಜನ್ ಉದ್ಘಾಟನಾ ಘಟಕವನ್ನು ತರಬೇಕೆಂದು ದೊಡ್ಡ ಧ್ವನಿಯಲ್ಲಿ ಕೇಳುತ್ತಿರುವಾಗ ಪೊಲೀಸರು ತಡೆ ಹಿಡಿದರು