ಖಾಸಾಬೇಡರಪಡೆ ಕಲೆ ಪ್ರದರ್ಶನ

ಖಾಸಾಬೇಡರಪಡೆ ಪ್ರದರ್ಶನ

ಜಿಲ್ಲಾ ಜಾನಪದ ಕಲಾ ಮಂಡಲ(ರಿ.) ಚಿತ್ರದುರ್ಗ ಇವರಿಂದ ಜ-10 ರಂದು ಚಿತ್ರದುರ್ಗ ತಾಲ್ಲೂಕು ಹುಲ್ಲೂರಿನಲ್ಲಿ ಖಾಸಾಬೇಡರಪಡೆ ಕುಣಿತ ಜಾನಪದ ಕಲೆಯನ್ನು ಪ್ರದರ್ಶಿಸಲಾಯಿತು. ಕರೋನ ನಿರ್ಮೂಲನೆಯ ಪ್ರಯುಕ್ತ ಗ್ರಾಮೀಣ ಪ್ರದೇಶಗಳ ಜನಸಾಮಾನ್ಯ ಮೂಡಿಸುವಲ್ಲಿ ಈ ಸಂಸ್ಥೆಯ ಸ್ವಂತ ಖರ್ಚಿನಲ್ಲಿ ಜಾನಪದ ತಿರುಗಾಟ 2021-21 ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಜನರಿಗೆ ಕರೋನಾ ಪ್ರಯುಕ್ತ ಸಾಮಾಜಿಕ ಅಂತರವಿರಲಿ, ಮಾಸ್ಕ್ ಕಡ್ಡಾಯ ಹಾಗೂ ಸಾಮಾಜಿಕ ಅಂತರವಿರಲಿ ಮತ್ತು ಸ್ಯಾನಿಟೈಜರ್ ಉಪಯೋಗಿಸಿ ಎಂದು ಅರಿವು ಮೂಡಿಸಲಾಯಿತು. 20 ಜನ ಕಲಾವಿದರು ಭಾಗವಹಿಸಿದ್ದರು. ಹುಲ್ಲೂರಿನ ಜನ ಈ ಕಾರ್ಯಕ್ರಮ ವೀಕ್ಷಿಸಿದರು. ಕರೋನ ಲಸಿಕೆ ಅತಿ ಶೀಘ್ರದಲ್ಲಿಯೇ ಸರ್ಕಾರಿ ಆಸ್ಪತ್ರೆಗೆ ಬರಲಿದ್ದು ಜನಸಾಮಾನ್ಯರು ಉಚಿತ ಲಸಿಕೆ ಪಡೆದುಕೊಂಡು ಕರೋನ ಮುಕ್ತ ರಾಜ್ಯವಾಗಿಸಲು ಸಂಸ್ಥೆಯ ಕಾರ್ಯದರ್ಶಿ ಜಿ.ರಾಜಣ್ಣ ಹಾಗೂ ಸಾರ್ವಜನಿಕ ಸೇವಾ ಅಧ್ಯಕ್ಷ ಜಿ.ಗಿರೀಶ್ ಕರೋನ ಬಗ್ಗೆ ಪ್ರಚಾರ ಪಡಿಸಿದರು.

Leave a Reply

Your email address will not be published.