ನಿತ್ಯವಾಣಿ, ಚಿತ್ರದುರ್ಗ,(ಅ.12) : ಚಿತ್ರದುರ್ಗ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಜಿಲ್ಲಾ ವಕೀಲರ ಸಂಘ ಜಿಲ್ಲಾ ಕಾರಾಗೃಹ ಇಲಾಖೆಯ ವತಿಯಿಂದ ಬಂದಿಖಾನೆಯಲ್ಲಿರುವ ವಿಚಾರಣಾ ದೀನ ಖೈದಿಗಳಿಗೆ ಉಚಿತ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮವನ್ನು ಸೋಮವಾರ ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಬಂದಿಖಾನೆಯಲ್ಲಿ ಏರ್ಪಡಿಸಲಾಗಿತ್ತು,
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಬಂದಿಖಾನೆಯ ಅದಿಕಾರಿ ಪ್ರಸನ್ನ ರವರು ವಹಿಸಿದ್ದರು ಈ ಸಮಾರಂಭದ ಉದ್ಘಾಟನೆಯನ್ನು ಹಿರಿಯ ಸಿವಿಲ್ ನ್ಯಾಯಾಧೀಶರಾದ ಬಿ ಕೆ ಗಿರೀಶ್ ರವರು ನೆರವೇರಿಸಿದರು ಸಮಾರಂಭದ ಮುಖ್ಯ ಅತಿಥಿಗಳಾಗಿ ಜಿಲ್ಲಾ ವಕೀಲರ ಸಂಘದ ಅದ್ಯಕ್ಷರಾದ ಸಿ ಶಿವುಯಾದವ್ ಉಪಾಧ್ಯಕ್ಷ ದಯಾನಂದ ಪ್ರದಾನ ಕಾರ್ಯದರ್ಶಿ ಮೂರ್ತಿ ಜೈಲರ್ ಗಳಾದ ಅಲ್ಲಾಭಕ್ಷಿ ಪಾಟೀಲ ಮತ್ತಿತರು ಬಾಗವಹಿಸಿದ್ದರು.
ವಿಚಾರಣಾದೀನ ಖೈದಿಗಳನ್ನು ಉದ್ದೇಶಿಸಿ ಮಾತನಾಡಿದ ಶಿವುಯಾದವ್ ತಾವುಗಳು ತಮ್ಮ ಆಕ್ರೋಶ ಮತ್ತು ಸಿಟ್ಟಿಗೆ ಬುದ್ಧಿಯನ್ನು ಕೊಟ್ಟಿದ್ದರಿಂದ ತಾವು ಇಲ್ಲಿ ಬಂದಿಗಳಾಗಬೇಕಾಗಿದೆ ತಾವು ತಾಳ್ಮೆ ಮತ್ತು ಸಹನೆ ವಹಿಸಿದ್ದರೆ ನಿವು ಇಲ್ಲಿಗೆ ಬರುವ ಪ್ರಮೇಯ ಬರುತ್ತಿರಲಿಲ್ಲ ನಿಮಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಪುಕ್ಕಟೆಯಾಗಿ ವಕೀಲರ ನೇಮಕ ಮಾಡಿಕೊಡಲಾವುದು ನಿಮಗೆ ಜೈಲಿನಲ್ಲಿ ಯಾವುದೇ ತೊಂದರೆ ಇರುವುದಿಲ್ಲ ನಿಮ್ಮೆಲ್ಲರ ಅರೋಗ್ಯ ರಕ್ಷಣೆ ಸರ್ಕಾರದ್ದು ಸರ್ಕಾರ ನಿಮಗಾಗಿ ಅನೇಕ ಸೌಲಭ್ಯ ಒದಗಿಸಿದೆ ಇಲ್ಲಿ ಗ್ರಂಥಾಲಯ ಟಿವಿ ವೈದ್ಯಕೀಯ ವ್ಯವಸ್ಥೆ ಮಾಡಿದೆ ಇಲ್ಲಿ ಅನೇಕ ತರಬೇತಿ ಗಳನ್ನು ಸಹ ನೀಡಲಾಗುವುದು
ನೀವು ಅದರ ಸೌಲಭ್ಯ ಉಪಯೋಗ ಮಾಡಿಕೊಂಡು ಒಳ್ಳೆಯ ಸುಸಂಸ್ಕೃತರಾಗಿ ಹೊರಹೊಗಬೇಕೆಂದು ತಿಳಿ ಹೇಳಿದರು