ನಿತ್ಯವಾಣಿ, ಭರಮಸಾಗರ,(ಅ.11) : ಚಿತ್ರದುರ್ಗ ತಾಲ್ಲೂಕಿನ ಭರಮಸಾಗರದ ಪ್ರವಾಸಿ ಮಂದಿರದಲ್ಲಿ ಭರಮಸಾಗರ ಹೋಬಳಿ ಮಟ್ಟದ ಜೆಡಿಎಸ್ ಕಾರ್ಯಕರ್ತರ ಸಭೆಯನ್ನ ಹಮ್ಮಿಕೊಳ್ಳಲಾಗಿತ್ತು. ಸುಮಾರು 200 ಕ್ಕೂ ಹೆಚ್ಚು ಜೆಡಿಎಸ್ ಕ ಕಾರ್ಯಕರ್ತರು ಈ ಸಭೆಯಲ್ಲಿ ವಭಾಗವಹಿಸಿದ್ದರು. ಇನ್ನೂ ಈ ಸಭೆಯ ನೇತೃತ್ವವನ್ನ ಹೊಳಲ್ಕೆರೆ ಜೆಡಿಎಸ್ ನ ಅಧ್ಯಕ್ಷರಾದ ಪರಮೇಶ್ವರ ಅವರು ವಗಿಸಿಕೊಂಡಿದ್ದು ಸಂದರ್ಭದಲ್ಲಿ ಮುಂಬರುವ ಜಿಲ್ಲಾ ಪಂಚಾಯತ್ ಹಾಗೂ ತಾಲ್ಲೂಕು ಪಂಚಾಯತ್ ಚುನಾವಣೆಯ ಕುರಿತು ಚರ್ಚೆಯನ್ನ ನಡೆಸಲಾಗಿದ್ದು ಚುನಾವಣೆಯಲ್ಲಿ ಯಾವ ರೀತಿ ಕೆಲಸ ಮಾಡಿ ಪಕ್ಷವನ್ನ ಅದಿಕಾರಕ್ಕೆ ತರಬಹುದು ಎಂದು ಚರ್ಚೆಯನ್ನ ನಡೆಸಲಾಯಿತು. ಇನ್ನೂ ಈ ಸಂದರ್ಭದಲ್ಲಿ ಆರ್ ಲಿಂಗಾನಾಯ್ಕ್, ಮತ್ತು ದಲಿತ ಸಂಘರ್ಷ ಸಮಿತಿ ರಾಜ್ಯ ಮಹಿಳಾ ಅಧ್ಯಕ್ಷರಾದ ತುಳಸಿ ರಮೇಶ್, ಜೆಡಿಎಸ್ ಮುಖಂಡರಾದ ಶರಣಪ್ಪ ಗೌಡ, ದಲಿತ ಹಿಂದುಳಿದ ಅಲ್ಪಸಂಖ್ಯಾತರ ಸಮಿತಿಯ ಜಿಲ್ಲಾ ಅಧ್ಯಕ್ಷರಾದ ಕೆ ಜಿ ಅನಂತ, ಮೂರ್ತಿ ನಾಯಕ್, ಕನ್ನಡ ಸೇನೆಯ ಜಿಲ್ಲಾಧ್ಯಕ್ಷರಾದ ರಮೇಶ್ ಕುಮಾರ್ ಸೇರಿ ಹಲವರು ಭಾಗವಹಿಸಿದ್ದರು