ಚಿತ್ರದುರ್ಗ, : ಚಿತ್ರದುರ್ಗದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆಯುತ್ತಿದ್ದ ಸಾಮಾನ್ಯ ಸಭೆಯಲ್ಲಿ ವಿದ್ಯುತ್ ಕೈ ಕೊಟ್ಟು ಕತ್ತಲಲ್ಲಿ ಸಭೆ ನಡೆಸಿದ ಘಟನೆ ನಡೆಯಿತು. ನರೇಗಾ ಹೊರ ಗುತ್ತಿಗೆ ನೌಕರರ ನೇಮಕಾತಿ ಅಕ್ರಮ ಚರ್ಚೆ ವೇಳೆ ಪವರ್ ಕಟ್ ಆಯ್ತು. ಕೈ ಕೊಟ್ಟಿದ್ದರಿಂದ ಸದಸ್ಯರು ಹಾಗೂ ಅಧಿಕಾರಿಗಳು ಕತ್ತಲಲ್ಲೆ ಕುಳಿತುಕೊಂಡು ಚರ್ಚಿಸಿದರು. ಇದರಿಂದ ಸದಸ್ಯರು ಅಧಿಕಾರಿಗಳ ವಿರುದ್ಧ ಗರಂ ಆದರೂ ಯಾವುದೇ ಪ್ರಯೋಜನ ಆಗಲಿಲ್ಲ. ವಿದ್ಯುತ್ ಬರಲೇ ಇಲ್ಲ. ಇದರಿಂದ ಬೇಸರಗೊಂಡ ಸದಸ್ಯರು ಸಭೆಯಿಂದ ಹೊರಗೂ ಹೋದರು.ಇದರಿಂದ ಅಧಿಕಾರಿಗಳು ಪೇಚಿಗೆ ಸಿಲುಕಿದರು.