.
ಇಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಅರವಿಂದ್ ಬೋಬ್ಡೆ ಅವರು ಚಿಕ್ಕಮಗಳೂರು ಜಿಲ್ಲೆಯ ಪ್ರಸಿದ್ದ ದೇವಾಯಲ ಶೃಂಗೇರಿಗೆ ಆಗಮಿಸಿ ಶಾರದೆ ದರ್ಶನ ಪಡೆದರು.
ಸಂಕ್ರಾಂತಿ ಹಬ್ಬದ ದಿನದಂದು ಶಾರದೆ ದರ್ಶನ ಪಡೆದ ಬೋಬ್ಡೆ ಅವರು ಬಳಿಕ ಶಾರದಾಂಬ ಮಠದ ಜಗದ್ಗುರುಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಜಡ್ಜ್ ಅರವಿಂದ್ ಬೋಬ್ಡೆ ಶೃಂಗೇರಿಗೆ ಆಗಮಿಸುವ ಹಿನ್ನೆಲೆ ತಾಲೂಕಿನಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಹಾಕಲಾಗಿತ್ತು.