ಮಾ. 7 ರಿಂದ ಶ್ರೀ ಕಬೀರಾನಂದಾಶ್ರಮದ 91ನೇ ಮಹಾ ಶಿವರಾತ್ರಿ ಮಹೋತ್ಸವ

91ನೇ ಮಹಾ ಶಿವರಾತ್ರಿ ಮಹೋತ್ಸವ ; 11ಕ್ಕೆ ಪಲ್ಲಕ್ಕಿ ಉತ್ಸವ, ಆರೂಢಶ್ರೀ ಪ್ರಶಸ್ತಿ ಪ್ರಧಾನ, 12ಕ್ಕೆ ಕೌದಿ ಪೂಜೆ

ಚಿತ್ರದುರ್ಗ ಮಾ 05

ನಗರದ ಶ್ರೀ ಕಬೀರಾನಂದಾಶ್ರಮದ ವರ್ಷಾಚರಣೆಯಾದ 91ನೇ ಮಹಾ ಶಿವರಾತ್ರಿ ಮಹೋತ್ಸವವೂ ಮಾ. 07 ರಿಂದ 12ರವರೆಗೆ ಶ್ರೀಮಠದ ಆವರಣದಲ್ಲಿರುವ ಶ್ರೀ ಸದ್ಗುರು ಕಬೀರಾನಂದಸ್ವಾಮಿ ಮಹಾ ಮಂಟಪದಲ್ಲಿ ನಡೆಯಲಿದ್ದು ಮಾ. 11 ರಂದು ಆರೂಢಶ್ರೀ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುವುದೆಂದು ಆಶ್ರಮದ ಶ್ರೀ ಶಿವಲಿಂಗಾನಂದ ಶ್ರೀಗಳು ತಿಳಿಸಿದರು.

ಚಿತ್ರದುರ್ಗ ನಗರದ ಆಶ್ರಮದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಶ್ರೀಗಳು, ಮಾ. 07 ರಿಂದ ಪ್ರಾರಂಭವಾಗಿ ಮಾ. 12ರವರೆಗೆ ವಿವಿಧ ರೀತಿಯ ಸಾಂಸ್ಕøತಿಕ, ಧಾರ್ಮಿಕ, ಶೈಕ್ಷಣಿಕ ಕಾರ್ಯಕ್ರಮಗಳನ್ನು ಒಳಗೊಂಡಿದೆ, ಕಳೆದ 90 ವರ್ಷದಿಂದ ಶಿವರಾತ್ರಿ ಮಹೋತ್ಸವನ್ನು ನಡೆಸಿಕೊಂಡು ಬರಲಾಗುತ್ತಿದೆ. ಪ್ರಾರಂಭದಲ್ಲಿ ಸಣ್ಣ ಪ್ರಮಾಣದಲ್ಲಿ ಇದ್ದ ಮಹೋತ್ಸವ ಇತ್ತೀಚೀನ ದಿನದಲ್ಲಿ ಭಕ್ತಾಧಿಗಳ ಸಹಕಾರದಿಂದ ಬೃಹತ್ ಆಗಿ ಕಾರ್ಯಕ್ರಮವನ್ನು ಮಾಡಲಾಗುತ್ತಿದೆ. ಪ್ರತಿ ದಿನ ಸಂಜೆ ವಿವಿಧ ಮಠಾಧೀಶರಿಂದ ಜ್ಞಾನವನ್ನು ನೀಡುವ ಸಂದೇಶಗಳು, ಸನ್ಮಾನ ಮತ್ತು ನಾಟಕ, ಶಾಲಾ ಮಕ್ಕಳಿಂದ ಸಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದರು.

ಸಿದ್ದಾರೂಢರ ಸಂಕಲ್ಪದಂತೆ ಪ್ರತಿ ವರ್ಷವೂ ಮಹಾಶಿವರಾತ್ರಿ ಮಹೋತ್ಸವವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಅದರಂತೆ ನಾಳೆಯಿಂದ 12 ರವರೆಗೆ ಆರು ದಿನಗಳ ಕಾಲ ನಡೆಯುವ ಮಹಾಶಿವರಾತ್ರಿ ಮಹೋತ್ಸವದಲ್ಲಿ ಸಂತರು, ಸಾಹಿತಿಗಳು, ವಿದ್ವಾಂಸರು, ಕಲಾವಿದರು, ರಾಜಕಾರಣಿಗಳು ಆಗಮಿಸಲಿದ್ದಾರೆ. ಮಾಘ ಮಾಸದಲ್ಲಿ ಬರುವ ಶಿವರಾತ್ರಿ ಮಹೋತ್ಸವ ಅತ್ಯಂತ ಪಾವನವಾದುದು. ಎಷ್ಟೋ ರಾತ್ರಿಗಳನ್ನು ಕಳೆಯುವುದು ಮುಖ್ಯವಲ್ಲ. ಮಹಾಶಿವರಾತ್ರಿಯಂದು ರಾತ್ರಿಯಿಡಿ ಶಿವನನ್ನು ಧ್ಯಾನಿಸುವುದು ಪವಿತ್ರವಾದುದು. ಹಿಂದಿನ ಕಾಲದಲ್ಲಿ ಋಷಿಮುನಿಗಳು ಸದ್ಗತಿಗಳನ್ನು ಹೇಳುತ್ತಿದ್ದರು. ಕಬೀರಾನಂದ ಸ್ವಾಮಿಗಳು ಇಲ್ಲಿಗೆ ಬಂದಿದ್ದೆ ಗೋಶಾಲೆ ಆರಂಭಿಸುವುದಕ್ಕಾಗಿ ಆದ್ದರಿಂದ ಕಾತ್ರಾಳು ಸಮೀಪ ಆದಿ ಚುಂಚನಗಿರಿ ಮಹಾ ಸಂಸ್ಥಾನದ ಪದ್ಮಭೂಷಣ ಡಾ.ಶ್ರೀ ಬಾಲಗಂಗಾಧರನಾಥ್ ಶ್ರೀಗಳು ಗೋಶಾಲೆಯನ್ನು ನಿರ್ಮಿಸಿ ಜಾನುವಾರುಗಳಿಗೆ ಮೇವು ನೀರು ಒದಗಿಸುವ ಕೆಲಸ ಪ್ರಾರಂಭಿಸಿದ್ದು ಇದು ನಿರಂತರವಾಗಿ ನಡೆಯುತ್ತಿದೆ ಎಂದು ಹೇಳಿದರು.

ಗೋಸಂಪತ್ತಿಗಿಂತ ಮಿಗಿಲಾದುದು ಬೇರೆ ಯಾವುದೂ ಇಲ್ಲ. ಯಾಂತ್ರಿಕ ಉಪಕರಣದ ಮೇಲೆ ಇಂದಿನ ಕೃಷಿ £ಂತಿರುವುದರಿಂದ ಜಾನುವಾರುಗಳನ್ನು ಬಳಸುವವರೆ ಕಡಿಮೆಯಾಗಿದ್ದಾರೆ. ಇದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ಅದಕ್ಕಾಗಿ 2006 ರಲ್ಲಿ ಗೋಶಾಲೆ ನಿರ್ಮಿಸಿ ಅನೇಕ ಜಾನುವಾರುಗಳನ್ನು ಸಲಹಲಾಗುತ್ತಿದೆ.

ಮಾ.07ರ ಸಂಜೆ 6.30ಕ್ಕೆ 91 ನೇ ಶಿವರಾತ್ರಿ ಮಹೋತ್ಸವದಲ್ಲಿ ಶ್ರೀ ಶಿವಮೂರ್ತಿ ಮುರುಘಾ ಶರಣರು ಮತ್ತು ಹುಬ್ಬಳ್ಳಿಯ ವಿಜಾಪುರ ಶಾಂತಾಶ್ರಮದ ಶ್ರೀ ಅಭಿನವ ಸಿದ್ದಾರೂಢಸ್ವಾಮಿಜಿ ಸಾನಿಧ್ಯವಹಿಸಲಿದ್ದಾರೆ.

ಕಾರ್ಯಕ್ರಮವನ್ನು ಸಮಾಜ ಕಲ್ಯಾಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀರಾಮುಲು, ಸಭಾ ಮಂಟಪವನ್ನು ಮೂಲಭೂತ ಸೌಕರ್ಯ ಹಜ್ ಮತ್ತು ವಕ್ಛ್ ಸಚಿವರಾದ ಆನಂದಸಿಂಗ್ ಉದ್ಘಾಟಿಸಲಿರುವರು.

ಕಾರ್ಯಕ್ರಮದಲ್ಲಿ ಸಂಸದರಾದ ಎ.ನಾರಾಯಣಸ್ವಾಮಿ,ದಾವಣಗೆರೆ ಸಂಸದರಾದ ಜಿ.ಎಂ.,ಸಿದ್ದೇಶ್ವರ್, ಶಾಸಕರು, ಕರಾರಸಾರಿಗೆ ನಿಗಮದ ಅಧ್ಯಕ್ಷರಾದ ಎಂ.ಚಂದ್ರಪ್ಪ, ಜಿಲ್ಲಾಧಿಕಾರಿ ಶ್ರೀಮತಿ ಕವಿತಾ ಎಸ್ ಮನ್ನಿಕೇರಿ, ಬಿಜೆಪಿ ಓಬಿಸಿ ರಾಜ್ಯ ಉಪಾಧ್ಯಕ್ಷ ಸಿದ್ದೇಶ್ ಯಾದವ್, ರಾಜ್ಯ ಕಾರ್ಯದರ್ಶಿ ಕೆ.ಎಸ್.ನವೀನ್, ಜಿಲ್ಲಾಧ್ಯಕ್ಷ ಎ.ಮುರುಳಿ, ಜಿಲ್ಲಾ ಮದಕರಿ ನಾಯಕ ವಿದ್ಯಾ ಸಂಸ್ಥೆಯ ಅಧ್ಯಕ್ಷ ಎಸ್.ಸಂದೀಪ್, ಬಿಜೆಪಿ ಯುವ ಮುಖಂಡರಾದ ಜಿ.ಎಸ್.ಸುಂದೀಪ್ ಗುಂಡಾರ್ಪಿ, ಶರಣ ಸಾಹಿತ್ಯ ಪರಿಷತ್‍ನ ಕಾರ್ಯದರ್ಶಿ ಹುರಳಿ ಬಸವರಾಜ್ ನಗರಸಭಾ ಸದಸ್ಯರಾದ ಶ್ರೀಮತಿ ಪೂಜಾ ಮಂಜುನಾಥ್, ಗ್ರಾಮಾಂತರ ಘಟಕದ ಅಧ್ಯಕ್ಷ ನಂದಿ ನಾಗರಾಜ್, ಮಾಜಿ ಅಧ್ಯಕ್ಷ ಜಿ.ಟಿ.ಸುರೇಶ್ ಭಾಗವಹಿಸಲಿದ್ದಾರೆ.

ರಾಷ್ಟ್ರಪತಿ ಪೋಲಿಸ್ ಪದಕ ವಿಜೇತರಾದ ಗ್ರಾಮಾಂತರ ವೃತ್ತ ನಿರೀಕ್ಷಕರಾದ ಬಾಲಚಂದ್ರ ನಾಯಕ್ ರವರನ್ನು ಸನ್ಮಾನಿಸಲಾಗುವುದು. ಶ್ರೀ ಸದ್ಗುರು ಕಬೀರಾನಂದಸ್ವಾಮಿ ವಿದ್ಯಾಪೀಠದ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿದೆ.

ಮಾ. 8ರ ಸಂಜೆಯ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾ ಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ಡಾ.ನಿರ್ಮಾಲನಂದಾನಾಥ್ ಶ್ರೀಗಳು, ಮಾದಾರ ಗುರುಪೀಠ ಶ್ರೀಬಸವಮೂರ್ತಿ ಮಾದಾರಚನ್ನಯ್ಯ ಶ್ರೀಗಳು, ಕಾಗಿನೆಲೆ ಹೂಸದುರ್ಗ ಶಾಖೆ ಮಠದ ಶ್ರೀ ಈಶ್ವರಾನಂದ ಶ್ರೀಗಳು ಸಾನಿಧ್ಯವಹಿಸಲಿದ್ದಾರೆ.

ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ವಾಣಿಜ್ಯೋದ್ಯಮಿಗಳಾದ ಬಿ.ಟಿ.ಸಿದ್ದೇಶ್, ನಗರಾಭೀವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಬದರಿನಾಥ್, ಸದಸ್ಯರಾದ ಎನ್.ಓಂಕಾರ್, ಶ್ರೀಮತಿ ರೇಖಾ, ಶ್ರೇಣಿಕ್ ಮಂಜುನಾಥ್, ಬೆಂಗಳೂರಿನ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಸಚ್ಚಿದಾನಂದಮೂರ್ತಿ, ಬಿಜೆಪಿ ಮುಖಂಡರಾಧ ಸೇತುರಾಂ, ಮುಖ್ಯಮಂತ್ರಿಗಳ ಸಲಹೆಗಾರರಾದ ಎಂ.ಲಕ್ಷ್ಮೀನಾರಾಯಣ, ಮಹಿಳಾ ಅಭೀವೃದ್ದಿ ನಿಗಮದ ಅಧ್ಯಕ್ಷರಾದ ಶ್ರೀಮತಿ ಶಶಿಕಲಾ ತೆಂಗಲಿ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಶ್ರೀಮತಿ ರಾಧಿಕಾ, ನಿವೃತ್ತ ಪ್ರಚಾರ್ಯರಾದ ಡಾ.ವೈ.ರಾಜಾರಂ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರಾದ ಕೆ.ಜಿ.ಮೂಡಲಗಿರಿಯಪ್ಪ, ಚಿತ್ರದುರ್ಗ ತಾ.ಪಂ.ಅಧ್ಯಕ್ಷ ಲಿಂಗರಾಜು ಭಾಗವಹಿಸಲಿದ್ದಾರೆ.ಶ್ರೀ ಕಬೀರಾನಂದಸ್ವಾಮಿ ಸ್ಕೂಲ್‍ಆಫ್ ನರ್ಸಿಂಗ್ ಮತ್ತು ಶಿಕ್ಷಣ ಮಹಾ ವಿದ್ಯಾಲಯದ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ.

ಮಾ.9 ರ ಸಂಜೆಯ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಅದಿಚುಂಚನಗಿರಿ ಮಹಾ ಸಂಸ್ಥಾನದ ಕಾರ್ಯದರ್ಶಿಗಳಾದ ಶ್ರೀ ಪ್ರಸನ್ನನಾಥ ಶ್ರೀಗಳು, ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳು ಹಾಗೂ ತೀರ್ಥ ಕಟ್ನೂರು ನೇರ್ಲಗಿ ವಿರಕ್ತಮಠದ ಶ್ರೀ ಚನ್ನಬಸವದೇಶಿಕೇಂದ್ರ ಶ್ರೀಗಳ ಸಾನಿಧ್ಯವಹಿಸಲಿದ್ದಾರೆ.
ಮಾಜಿ ಸಚಿವರಾದ ಹೆಚ್.ಅಂಜನೇಯ, ಮಾಜಿ ಸಂಸರಾದ ಬಿ.ಎನ್..ಚಂದ್ರಪ್ಪ, ಶಾಸಕರಾಧ ರಘುಮೂರ್ತಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಶಶಿಕಲಾ ಸುರೇಶ್ ಬಾಬು, ಮುಖ್ಯ ಕಾರ್ಯ ನಿರ್ವಹಕ ಅಧಿಕಾರಿ ಶ್ರೀಮತಿ ನಂದಿನಿದೇವಿ, ರಾಜ್ಯ ಪೌರ ಸೇವಾ ನೌಕರರ ಸಂಘದ ಅಧ್ಯಕ್ಷ ಜಿ.ಎಸ್.ಮಂಜುನಾಥ್, ಭದ್ರಾವತಿಯ ಸಿದ್ದಾರೂಢ ಶಾಖಾ ಮಠದ ಉಪಾಧ್ಯಕ್ಷ ಬಿ,ಬೆನಕಪ್ಪ, ಕಾರ್ಯದರ್ಶಿ ಡಿ.ರಾಮಮೂರ್ತಿ, ಚಿತ್ರದುರ್ಗ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಕಾಂಗ್ರೇಸ್ ಮುಖಂಡರಾದ ಜಿ.ಎಸ್.ಮಂಜುನಾಥ್, ಮಾಜಿ ಅಧ್ಯಕ್ಷ ಫಾತ್ಯರಾಜನ್, ಜಿಲ್ಲಾ ರಕ್ಷಣಾ ವೇದಿಕೆ ಅಧ್ಯಕ್ಷ ರಮೇಶ್, ನಗರಸಭಾ ಸದಸ್ಯ ಚಂದ್ರಶೇಖರ್, ವಾಣೀಜ್ಯೋದ್ಯಮಿ ದ್ಯಾಮಣ್ಣ ಕೋಗುಂಡೆ ಸಾಹಿತಿ ನಿರಂಜನ ದೇವರಮನೆ, ಭದ್ರಾವತಿ ಲಯಸ್ಸ್ ಕ್ಲಬ್ ಗೌವರ್ನರ್ ಬಿ.ದಿವಾಕರ ಶಟ್ಟಿ, ಸಹಾಯಕಲ ಕಾರ್ಯಪಾಲಕ ಅಭೀಯಂತರರಾಎದ ವಾಗೀಶ್, ಗುತ್ತಿಗೆದಾರರಾದ ಕೆ.ಎಸ್.ವಿಜಯಕುಮಾರ್, ರಂಗನಾಥ್‍ಗಿರಿ ಡಿ.ಎಸೆ.ಮಂಜುನಾಥ್ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ.
ಸಾಹಿತಿಗಳು, ಕನ್ನಡ ನಿವೃತ್ತ ಪ್ರಾಧ್ಯಪಕರಾದ ಪ್ರೋ.ಡಿ.ಟಿ.ರಂಗಸ್ವಾಮಿಯವರನ್ನು ಸನ್ಮಾನಿಸಲಾಗುವುದು. ಅಂಜನಾ ನೃತ್ಯಾ ಕಲಾ ಕೇಂದ್ರದ ಶ್ರೀಮತಿ ನಂದಿನಿ ಶಿವಪ್ರಕಾಶ್ ತಂಡದಿಂದ ನೃತ್ಯ ವೈವಿಧ್ಯ ಕಾರ್ಯಕ್ರಮ ನಡೆಯಲಿದೆ.
ಮಾ. 10ರ ಕಾರ್ಯಕ್ರಮದಲ್ಲಿ ಸಾಣೆಹಳ್ಳಿಯ ಶ್ರೀ ಡಾ.ಪಂಡಿತರಾಧ್ಯ ಶಿವಾಚಾರ್ಯ ಶ್ರೀಗಳು, ಮತ್ತು ಹೊಸದುರ್ಗದ ಭಗೀರಥ ಪೀಠದ ಶ್ರೀ ಪುರುಷೋತ್ತಮಾನಂದ ಶ್ರೀಗಳು ಸಾನಿಧ್ಯವಹಿಸಲಿದ್ದಾರೆ.
ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಉಪ ಆಯುಕ್ತರಾದ ಭೋಜರಾಜ್ ಮುಟಗಾರ, ಡಿಬಿಸಿಡಿಸಿಯ ನಿವೃತ್ತ ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಚಂದ್ರಪ್ಪ ಎಸ್, ರಾಷ್ಟ್ರೀಯ ಸ್ವಯಂ ಸೇವಾ ಸಂಘದ ವಿಭಾಗ ಸಹ ಪ್ರಚಾರಕ್ ನವೀನ್ ಸುಬ್ರಹ್ಮಣ್ಯ, ಬಂದರು ಒಳನಾಡು ಜಲ ಸಾರಿಗೆ ಇಲಾಖೆಯ ಕಾರ್ಯ ಪಾಲಕ ಅಭೀಯಂತರರಾದ ಎನ್.ಸತೀಶ್ ಬಾಬು, ಪೌರಾಯುಕ್ತರಾದ ಹನುಮಂತರಾಜು, ವಾಣಿಜ್ಯೋದ್ಯಮಿಗಳಾದ ಬಿ.ಟಿ.ಪುಟ್ಟಣ್ಣ, ಶಂಕರಮೂರ್ತಿ, ಸಿದ್ದಾಪುರದ ನಾಗಣ್ಣ, ಜಿ.ಎಂ.ಜಯಕುಮಾರ್, ವೀರಶೈವ ಅರ್ಬನ್ ಕೋ-ಆಪ್ ಬ್ಯಾಂಕ್ ಅಧ್ಯಕ್ಷ ಪಟೇಲ್ ಶಿವಕುಮಾರ್, ಜಿಲ್ಲಾ ಮಹಿಳಾ ಸಮಾಜದ ಅಧ್ಯಕ್ಷ ಶ್ರೀಮತಿ ಮೋಕ್ಷಾ ರುದ್ರಸ್ವಾಮಿ ನ್ಯಾಯವಾದಿ ಕುಮಾರಗೌಡ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ.
ತುಮಕೂರಿನ ನಾಟಕ ಮನೆಯ ಕಲಾವಿದರಿಂದ ಎನ್.ಆರ್.ಪ್ರಕಾಶ್ ರವರ ನಿದೇಶನದ ಹಾಸ್ಯ ನಾಟಕ ಕಾಲ ಚಕ್ರ ಪ್ರದರ್ಶನವಾಗಲಿದೆ.
ಮಾ. 11ರಂದು ಶಿವರಾತ್ರಿ ದಿನದಂದು ನಗರದ ರಾಜ ಬೀದಿಗಳಲ್ಲಿ ಶ್ರೀ ಶಿವಲಿಂಗಾನಂದ ಶ್ರೀಗಳ ಪಲ್ಲಕ್ಕಿ ಉತ್ಸವ ಮತ್ತು ಜಾನಪದ ಉತ್ಸವ ಕಾರ್ಯಕ್ರಮವೂ ಮಧ್ಯಾಹ್ನ 3 ಗಂಟೆಗೆ ಪ್ರಾರಂಭವಾಗಲಿದ್ದು ನಗರದ ಪ್ರಮುಖ ಬೀದಿಗಳಲ್ಲಿ ಸಂಚಾರ ಮಾಡಿ ನಂತರ ಆಶ್ರಮಕ್ಕೆ ಮರಳಲಿದೆ ಇದರಲ್ಲಿ ನಾಡಿನ ವಿವಿಧ ಜಾನಪದ ಕಲಾಮೇಳಗಳು ಮತ್ತು ಮಕ್ಕಳಿಂದ ವಿವಿಧ ಗಣ್ಯರ ವೇಷಭೂಷಣಗಳು ಪ್ರದರ್ಶನವಾಗಲಿದೆ. ನಗರಸಭಾ ಸದಸ್ಯರಾದ ಬಿ.ವೆಂಕಟೇಶ್ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ.
ಸಂಜೆ ನಡೆಯುವ ಕಾರ್ಯಕ್ರಮದ ಸಾನಿಧ್ಯವನ್ನು ಶ್ರೀ ಕೃಷ್ಣಾ ಯಾದವ ಮಹಾ ಸಂಸ್ಥಾನದ ಶ್ರೀ ಕೃಷ್ಣಾಯಾದವಾನಂದ ಶ್ರೀಗಳ, ಬಾಗಲಕೋಟೆಯ ಕೌದೀಶ್ವರ ಮಹಾ ಸಂಸ್ಥಾನದ ಶ್ರೀ ಮಾಧವಾನಂದ ಶ್ರೀಗಳು ಹಾಗೂ ಕೂಸನೂರಿನ ತಿಪ್ಪಯ್ಯ ಸ್ವಾಮಿ ಮಠದ ಶ್ರೀ ಜ್ಯೋತಿರ್ಲಿಗಾನಂದ ಶ್ರೀಗಳು ವಹಿಸಲಿದ್ದಾರೆ.
ನಗರಸಭಾ ಅಧ್ಯಕ್ಷರಾದ ಶ್ರೀಮತಿ ತಿಮ್ಮಪ್ಪ, ಸದಸ್ಯರಾದ ವೆಂಕಟೇಶ್, ಮಾಜಿ ಶಾಸಕ ಎಸ್.ಕೆ.ಬಸವರಾಜನ್, ಮಹಿಳಾ ಆಯೋಗದ ಅಧ್ಯಕ್ಷರಾದ ಶ್ರೀಮತಿ ಪ್ರಮೀಳಾ ನಾಯ್ಡು, ಉಪ್ಪಾರ ಅಭೀವೃದ್ದಿ ನಿಗಮದ ಅಧ್ಯಕ್ಷ ಜಿ.ಕೆ.ಗಿರೀಶ್ ಉಪ್ಪಾರ್, ಜಿ.ಆರ್.ಹಳ್ಳಿಯ ನಿದೇಶಕರಾದ ಡಾ.ಎಚ್.ವಿಶ್ವನಾಥ್, ವಾಣೀಜ್ಯೋದ್ಯಮಿ ರುದ್ರಮುನಿ ವಿಹಿಂಪ ಹುಬ್ಬಳಿ ಉತ್ತರ ಪ್ರಾಂತದ ಸಹ ಕಾರ್ಯವಾಹ ಮನೋಹರ್ ಮಠದ್, ಪತಂಜಲಿ ಆಸ್ಪತ್ರೆಯ ಡಾ.ಮುಕುಂದರಾವ್, ದೇವರಾಜು ಅರಸು ವಿದ್ಯಾ ಸಂಸ್ಥೆಯ ಸಿಇಓ ರಘುಚಂದನ್ ನಿವೃತ್ತ ಅಧಿಕಾರಿಗಳಾದ ಕೆ.ಎಸ್.ಶ್ರೀನಿವಾಸಲು, ಬಿ.ಭೀಮಯ್ಯ, ಶ್ರೀಮತಿ ಕಮಲಮ್ಮ, ಸೀಡ್ ಸಂಸ್ಥೆಯ ಕಾರ್ಯದರ್ಶಿ ಎಚ್.ಶ್ರೀನಿವಾಸ್, ಅನುಪಮ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಎಸ್.ಭಾಸ್ಕರ್, ಸೇರಿದಂತೆ ಇತರರು ಭಾಗವಹಿಲಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಶ್ರೀಮಠದಿಂದ ಕೂಡಮಾಡಲ್ಪಡುವ ಆರೂಢಶ್ರೀ ಪ್ರಶಸ್ತಿಗೆ ಭಾಜನರಾಗಿರುವ ಶ್ರೀಮತಿ ಹನುಮವ್ವ ಗಿಡ್ಡರ ಹೊಂಕಣ ಇವರಿಗೆ ಪ್ರಧಾನ ಮಾಡಲಾಗುವುದು. ವಿರೂಪಾಕ್ಷ ಆಯಿತೋಳು ಸಂಗಡಿಗರಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ.
ಫೆ.12 ರಂದು ಶಿವರಾತ್ರಿ ಮಹೋತ್ಸವದ ಕೊನೆಯ ದಿನವಾಗಿದ್ದು, ಬ್ರಾಹ್ಮಿ ಮಹೋರ್ತದಲ್ಲಿ ಶಿವಮಹಿಮ್ನಾ ಸ್ತೋತ್ರ ಸ್ನಾನÀದೊಂದಿಗೆ ಸಪ್ತಾಹ ಸಮಾಪ್ತಿಯಾಗಲಿದೆ. ಸಂಜೆ 5 ಗಂಟೆಗೆ ಸನ್ಯಾಸ ವಿಧಿಯಂತೆ ಕೌದಿ ಪೂಜೆ ನಡೆಯಲಿದ್ದು, , ಈ ಸಂದರ್ಭದಲ್ಲಿ ಅದಿಚುಂಚನಗಿರಿ ಹಾಸನ ಶಾಖೆಯ ಶಂಭುನಾಥ್ ಶ್ರೀಗಳು, ಕುಂಬಳ ಗೋಡು ಎ.ಸಿ.ಎಂ.ಮಠದ ವ್ಯವಸ್ಥಾಪಕ ನಿದೇಶಕರಾದ ಶ್ರೀ ಪ್ರಕಾಶನಾಥ್ ಶ್ರೀಗಳು ಭಾಗವಹಿಸಲಿದ್ದಾರೆ.

ಮಾ. 05ರ ಇಂದಿನಿಂದ ಬ್ರಾಹ್ಮೀ ಮಹೊರ್ತದಲ್ಲಿ ಕಳಸ ಸ್ಥಾಪನೆಯಾಗಿ ಶ್ರೀ ಗುರು ಕರ್ತೃ ಗದ್ದಿಗೆಯ ಮೂರ್ತಿಗೆ ರುದ್ರಾಭೀಷೇಕ, ಶಿವಮಹಿಮ್ನಾ ಸ್ತೋತ್ರದೊಂದಿಗೆ ಶಿವನಾಮ ಸಪ್ತಾಹ ಪ್ರಾರಂಭವಾಗಿದ್ದು ಮಾ. 11ರವರೆಗೆ ಪ್ರತಿ ದಿನ ಸಂಜೆ 5.30 ರಿಮದ 6.30ರವರೆಗೆ ಸಾಮೂಹಿಕ ಶ್ರೀಮದ್ ಭಗವದ್ಗೀತಾ ಪಾರಾಯಣ ಕಾರ್ಯಕ್ರಮ ನಡೆಯಲಿದೆ ಹಾಗೂ ಪ್ರತಿ ದಿನ ರಾತ್ರಿ ಕಾರ್ಯಕ್ರಮದ ನಂತರ ಕಿರೀಟ ಪೊಜೆ, ಮಹಾ ಮಂಗಳಾರತಿ ಕಾರ್ಯಕ್ರಮಗಳು ನಡೆಯಲಿದೆ.

91ನೇ ಶಿವರಾತ್ರಿ ಮಹೋತ್ಸವ ಸಮಿತಿಯ ಅಧ್ಯಕ್ಷರಾದ ಬಿ.ವೆಂಕಟೇಶ್, ಉಪಾಧ್ಯಕ್ಷರಾದ ಬದರಿನಾಥ್, ಕಾರ್ಯದರ್ಶಿ ವಿ .ಎಲ್.ಪ್ರಶಾಂತ್ ಸದಸ್ಯರುಗಳಾದ ಎಸ್.ಸಿದ್ದೇಶ್ ಯಾದವ್ ಭಾಗವಹಿಸಿದ್ದರು.

Leave a Reply

Your email address will not be published.