ಇಡೀ ರಾಜ್ಯದ ಸಮುದಾಯ ಅನಾಥ ವಾಗಲು ಬಿಡುವದಿಲ್ಲ ನಮ್ಮ ಗುರಿ ಮುಟ್ಟುವ ತನಕ ನಿರಂತರ ಹೋರಾಟ:ಕಾಗಿನೆಲೆ ಕನಕ ಗುರುಪೀಠದ ಜಗದ್ಗುರುಗಳು

ಕಾಗಿನೆಲೆ ಕನಕ ಗುರುಪೀಠ, ಮತ್ತು ಜಿಲ್ಲಾ ಕುರುಬರ ಸಂಘ, ಚಿತ್ರದುರ್ಗ ಹಾಲುಮತ ಮಹಾಸಭಾ ಸಂಘಟನೆ ಗಳು ನೇತೃತ್ವದಲ್ಲಿ ನಡೆದ ಎಸ್. ಟಿ.ಹೋರಾಟ ಸಮಿತಿ ರಾಜ್ಯ ಮಟ್ಟದ ಬೃಹತ್ ಸಮಾವೇಶದ ಅಂಗವಾಗಿ ಪೂರ್ವ ಭಾವಿ ಸಭೆ ನಡೆಯಿತು.
ಕಾಗಿನೆಲೆ ಹಿಂದ ಬೆಂಗಳೂರು ನವರಿಗೆ ಸುಮಾರು 340 ಕಿಲೋ ಮೀಟರ್ ಸುದೀರ್ಘ 24 ದಿನಗಳ ಕಾಲ ನಡೆಯಲಿರುವ ಪಾದಯಾತ್ರೆ ನಡೆಸಿ ತಮ್ಮ ಹಕ್ಕನ್ನು ಪಡೆಯಲು ತೀರ್ಮಾನಸಲಾಯಿತು.
ಕರ್ನಾಟಕ ಎಸ್. ಟಿ.ಹೋರಾಟ ಸಮಿತಿ ಮುಖಾಂತರ ಇಡೀ ರಾಜ್ಯದಲ್ಲಿ ಇರುವ ಹಿಂದುಳಿದ ಬುಡಕಟ್ಟು ಸಂಸ್ಕೃತಿ ಇರುವ ಹಾಲುಮತ ಸಮುದಾಯಕ್ಕೆ ಎಸ್. ಟಿ.ಮೀಸಲಾತಿ ಪಡೆಯಲು ರಾಜ್ಯದ ಎಲ್ಲಾ ಪಕ್ಷಗಳ ಮುಖಂಡರು ಪಕ್ಷಾತೀತವಾಗಿ  ಭಾಗವಹಿಸಲು ಹೊಸದುರ್ಗ ತಾಲ್ಲೂಕಿನ ಕೆಲೋ ಡು ಶಾಖಾ ಮಠದ ಶ್ರೀ ಈಶ್ವರ ನಂದಾಪುರಿ ಶ್ರೀಗಳು ಕರೆಕೊಟ್ಟರು.ನಮ್ಮ ಜಿಲ್ಲೆಯ ಲ್ಲಿ ಸುಮಾರು ಏಳು ಗ್ರಾಮಗಳ  ರಾತ್ರಿ ವಾಸ್ತವ್ಯ ಕೇಂದ್ರಗಳು ನಿಗದಿ ಪಡಿಸಲಾಗಿದೆ,ಆದ್ದರಿಂದ ಇದು ಕುರುಬರ ಹಕ್ಕಿನ ಪ್ರಶ್ನೆಯಾಗಿ,ನಿರಂತರ ಪ್ರಯತ್ನ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಕರೆ ನೀಡಿದರು
ಪ್ರತಿ ಗ್ರಾಮ ಮಟ್ಟದ,ಹೋಬಳಿ,ಮಟ್ಟದ,ತಾಲೂಕು ಮಟ್ಟದ,ಜಿಲ್ಲಾ,ಮಟ್ಟದ ಹೋರಾಟ ಸಮಿತಿ ಮುಖಾಂತರ ಎಸ್. ಟಿ.ಹೋರಾಟದ ಮುಖಾಂತರ ನಮ್ಮ ಹೋರಾಟ ನಡೆಸಲು ಮುಂಚೂಣಿ ವಹಿಸಿ ಜವಾಬ್ದರಿಯುತ ಹೋರಾಟಕ್ಕೆ ಸಾಜಾಗಿ ಎಂದು ಕರೆ ಕೊಟ್ಟರು .
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಶಶಿಕಲಾ ಸುರೇಶ್ ಬಾಬು ಜಿಲ್ಲೆಯ ಸಮಾಜ ಭಂದುಗಳು ಪಾದಯಾತ್ರೆಯಲ್ಲಿ ಭಾಗವಹಿಸಿ ಯಶಸ್ವಿಯಗಾಲಿ ಎಂದು ಕರೆಕೊಟ್ಟರು  ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಮಣಿಗಳು ಸಹ ಪಾದಯಾತ್ರೆಯಲ್ಲಿ ಭಾಗವಹಿಸಿ ಯಶಸ್ವಿ ಯಾಗಬೇಕೆಂದು ತಿಳಿಸಿದರು . ಈ ಸಂರ್ಭದಲ್ಲಿ ಕಾಗಿನೆಲೆ ಕನಕ ಗುರುಪೀಠದ ಜಗದ್ಗುರುಗಳು ಬೆಂಗಳೂರಿನ ಅರಮನೆ ಮೈದಾನದಲ್ಲಿ ಕೇವಲ 2000 ಜನಸಂಖ್ಯೆಗೆ ವ್ಯವಸ್ಥೆ ಯಾಗಿತ್ತು ಆದರೆ ಅಲ್ಲಿ ಸೇರಿದ್ದು 6000 ಸಾವಿರ ಜನ ಸಂಖ್ಯೆ ,ಯಾರು ಸ್ವಾರ್ಥಕ್ಕೆ ತಾಗೆದುಕೊಳ್ಳಬೇಡಿ,ಕಟ್ಟ ಕಡೆಯ ಕುರುಬರಿಗೆ ನ್ಯಾಯ ಸಿಗಬೇಕು ಎಂದರು.ಸರ್ಕಾರದ ಸವಲತ್ತು ಪಡೆಯಲು, ಈ ಜಾತಿಗೆ ಮೆಡಿಕಲ್ ಕಾಲೇಜ್, ಇಂಜಿನಿಯರಿಂಗ್ ಕಾಲೇಜು ಮುಕ್ಯ ಅಲ್ಲ  ಮೀಸಲಾತಿ ಮುಖ್ಯ ಎಂದರು.ಇಡೀ ರಾಜ್ಯದ ಸಮುದಾಯ ಅನಾಥ ವಾಗಲು ಬಿಡುವದಿಲ್ಲ ನಮ್ಮ ಗುರಿ ಮುಟ್ಟುವ ತನಕ ನಿರಂತರ ಹೋರಾಟ ,ಇದು ಸಾಮಾಜದ ಹಿತದೃಷ್ಟಯಿಂದ ಎಲ್ಲರೂ ತೀಕ್ಷ್ಣ ಬುದ್ದಿಮತ್ತೆ ಯಿಂದ ನಮ್ಮ ಹೋರಾಟ ಸಮಿತಿ ಮುಖಾಂತರ,ಅಂಧೋಲನಾವಾಗಿ ರೂಪಗೊಳ್ಳಬೇಕು ಎಂದು ಕರೆ ಕೊಟ್ಟರು, ಎಸ್. ಟಿ.ಹೋರಾಟ ಒಂದು ಮಹತ್ತರ ಘಟ್ಟ,ಆದ್ದರಿಂದ ಎಸ್. ಟಿ ಹೋರಾಟ ಸಮುದ್ರ ಮಂಥನ ವಾಗಬೇಕು ಎಂದರು.ದೊಡ್ಡ ಮಟ್ಟದ ಹೋರಾಟ ಜವಾಬ್ದಾರಿ,ಯಾವುದೇ ಅವ್ಯವಸ್ಥೆ ಯಾಗಬರದು ಎಂದರು.
ಜಿಲ್ಲಾ ಮತ್ತು ತಾಲೂಕು ಸಂಘಗಳ ಆಶ್ರಯದಲ್ಲಿ ಪಾದಯಾತ್ರೆ ನಡೆಸಿ ಯಶಸ್ವಿಯಾಗಲು ಪ್ರಯತ್ನದ ಫಲವಾಗಿ ನಮ್ಮ ಹಕ್ಕನ್ನು ಪಡೆಯಲು ಕಂಕಣ ಬದ್ದಾರಾಗಬೇಕು ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಶ್ರೀರಾಮ್,ಕರ್ನಾಟಕ ಪ್ರದೇಶ ಕುರುಬರ ಸಂಘದ ಹಿರಿಯ ಉಪಾಧ್ಯಕ್ಷ ಬಿ. ಟಿ.ಜಗದೀಶ್, ಎಂ.ಹೆಚ್.ಕೃಷ್ಣಮೂರ್ತಿ,ರಜನಿ ಲೇಪಾಕ್ಷಿ,ಕರಿಯಪ್ಪ ಮಾಜಿ ಜಿಲ್ಲಾ ಕುರುಬರ ಸಂಘದ ಮುಖಂಡರು ಗಳಾದ ನಿಶಾನ ಜಯಣ್ಣ ಹೇಚ್.ಮಂಜಪ್ಪ,ಮಲ್ಲಿಕಾರ್ಜುನ್,ತಾಲೂಕು ಅಧ್ಯಕ್ಷ ಜಗನ್ನಾಥ,ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ನಿರ್ದೇಶಕ ರುಗಳಾದ ಎಮ್ಮೆ ಹಟ್ಟಿ ಹನುಮಂತಪ್ಪ, ಕಂದಿಕೆರೆ ಸುರೇಶ್ ಬಾಬು,ಮಂಜುನಾಥ್,ಕುಮಾರ್ ಗೌಡ್ರು.ಗುರುಲಿಂಗಪ್ಪ,ಚಳ್ಳಕೆರೆ ಮಲ್ಲೇಶಪ್ಪ,ಹೊಳಲ್ಕೆರೆ ಬಿ. ಎಸ್.ರುದ್ರಪ್ಪ.ಹೊಸದುರ್ಗದ ಕೆ. ಟಿ ಮಂಜುನಾಥ್,ಇನ್ನೂ ಮುಂತಾದ ಜಿಲ್ಲಾ ಮುಖಂಡರು ಹಾಜರಿದ್ದರು.

Leave a Reply

Your email address will not be published.