ಪರಿಷತ್‍ಗೆ ಸಾಹಿತ್ಯದ ಗಂಧವೇ ಇಲ್ಲದವರು ಸದಸ್ಯರಾಗುವುದರ ಮೂಲಕ ಅಧಿಕಾರ ಚುಕ್ಕಾಣೀಯನ್ನು ಹಿಡಿಯುವ ಪ್ರಯತ್ನವನ್ನು ಮಾಡುತ್ತಿದ್ದಾರೆ:: ಸ್ಫರ್ಧಾಕಾಂಕ್ಷಿ ಸಂಗಮೇಶ ಬಾದವಾಡಗಿ

ಮೇ.9 ರಂದು ನಡೆಯಲಿರುವ ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಫರ್ದೇಯನ್ನು ಮಾಡಲಿದ್ದು ಗೆಲುವಿಗೆ ನಾಲ್ಕು ಸೂತ್ರಗಳನ್ನು ಅನುಸರಿಸುತ್ತಿರುವುದಾಗಿ ಸ್ಫರ್ಧಾಕಾಂಕ್ಷಿ ಸಂಗಮೇಶ ಬಾದವಾಡಗಿ ತಿಳಿಸಿದ್ದಾರೆ.

ಚಿತ್ರದುರ್ಗ ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಮಾನದಲ್ಲಿ ಪರಿಷತ್‍ಗೆ ಸಾಹಿತ್ಯದ ಗಂಧವೇ ಇಲ್ಲದವರು ಸದಸ್ಯರಾಗುವುದರ ಮೂಲಕ ಅಧಿಕಾರ ಚುಕ್ಕಾಣೀಯನ್ನು ಹಿಡಿಯುವ ಪ್ರಯತ್ನವನ್ನು ಮಾಡುತ್ತಿದ್ದಾರೆ ಇದರಿಂದ ಪರಿಷತ್ ಪ್ರಗತಿಯನ್ನು ಹೊಂದದೆ ಅವನತಿಯತ್ತ ಸಾಗುತ್ತದೆ ಈ ಹಿನ್ನಲೆಯಲ್ಲಿ ಸಾಹಿತಿಯಾದ ನಾನು ಕಳೆದ ಬಾರಿ ಸ್ಫರ್ದೇ ಮಾಡಿದ್ದೆ ಆದರೆ ಗೆಲುವು ಆಗಲಿಲ್ಲಿ ಈ ಭಾರಿ ಮತ್ತೇ ಸ್ಫರ್ದೆಯನ್ನು ಮಾಡುತ್ತಿದ್ದು ಮತದಾರರು ಕೈಹಿಡಿಯುತ್ತಾರೆ ಎಂಬ ನಂಬಿಕೆ ಇದೆ ಎಂದು ವಿಶ್ವಾಸವನ್ನು ವ್ಯಕ್ತಪಡಿಸಿದರು.

ಪರಿಷತ್ ಚುನಾವಣೆ ಎಂದರೆ ಸಾರ್ವತ್ರಿಕ ಚುನಾವಣೆಯಂತೆ ಅಲ್ಲ ಇದು ಬುದ್ದಿವಂತರ ಚುನಾವಣೆಯಾಗಿದೆ, ಇಲ್ಲಿ ಸ್ಪರ್ಧೇ ಮಾಡುವವರು ಸಾಹಿತಿಗಳಾಗಿರಬೇಕು ಇಲ್ಲವೇ ಸಾಹಿತ್ಯದ ಬಗ್ಗೆ ಅಸಕ್ತಿಯನ್ನು ಹೊಂದಿರುವವರಾಗಿರಬೇಕಿದೆ, ಇದನ್ನು ಬಿಟ್ಟು ಬೇರೆಯವರು ಆಯ್ಕೆಯಾದರೆ ಸಾಹಿತ್ಯ ಕ್ಷೇತ್ರ ನಿಂತ ನೀರಾಗುತ್ತದೆ ಎಂದು ವಿಷಾಧಿಸಿದ ಸಂಗಮೇಶ್, ಈ ಬಾರಿ ಚುನಾವಣೆಯಲ್ಲಿ ಗೆಲವನ್ನು ಸಾಧಿಸಲು ನನ್ನದೆ ಆದ 4 ಸೂತ್ರಗಳನ್ನು ರೂಪಿಸಿಕೊಂಡಿದ್ದೇನೆ, ಇದರಲ್ಲಿ ಪಾಲುದಾರಿಕೆ, ಸಾಹಿತ್ಯ ಒಲವಿಗೆ ಆದ್ಯತೆ, ಪರಿಷತ್ತಿನ ನಂಟು ಹಾಗೂ ಅನುಕಂಪ ಇದರ ಮೇಲೆ ಈ ಬಾರಿ ಚುನಾವಣೆಯಲ್ಲಿ ಗೆಲುವು ಸಾಧಿಸಬೇಕೆಂದು ತೀರ್ಮಾನ ಮಾಡಿರುವುದಾಗಿ ತಿಳಿಸಿದರು.

ರಾಜ್ಯದಲ್ಲಿ ಪರಿಷತ್‍ಗೆ 3.29 ಲಕ್ಷ ಮತದಾರರಿದ್ದು ಇದರಲ್ಲಿ 3.09 ಲಕ್ಷ ಮತದಾರರು ಮಾತ್ರ ಮತದಾನ ಹಕ್ಕನ್ನು ಪಡೆದಿದ್ದಾರೆ. ಚುನಾವಣೇ ಎನ್ನುವುದು ಆರ್ಥಿಕವಾಗಿ ಹೊರೆಯಾಗುತ್ತದೆ ಮುಂದಿನ ದಿನದಲ್ಲಿ ನಿಜವಾದ ಸಾಹಿತಿಗಳು ಚುನಾವಣೆಯಲ್ಲಿ ಸ್ಪರ್ದೆ ಮಾಡಲಾರದಂತ ಪರಿಸ್ಥಿತಿ ನಿರ್ಮಾಣವಾಗುತ್ತದೆ ಇದನ್ನು ತಪ್ಪಿಸುವುದಕ್ಕೆ ನಾಲ್ಕು ಸೂತ್ರಗಳನ್ನು ಪ್ರಾರಂಭಿಸಿರುವುದಾಗಿ ತಿಳಿಸಿದ ಸಂಗಮೇಶ್, ಪ್ರತಿಭಾ, ಪ್ರಾಧೇಶಿಕ ಹಾಗೂ ಸಾಮಾಜಿಕ ನ್ಯಾಯದಡಿ ನಾನು ಕಾರ್ಯಕ್ಷಮತೆಯ ಯೋಜನೆಗಳನ್ನು ರೂಪಿಸಿದ್ದು ಅವುಗಳನ್ನು ಕಾರ್ಯಗತ ಮಾಡಲು ಸಿದ್ದವಿರುವುದಾಗಿ ತಿಳಿಸಿದರು.
ಗೋಷ್ಟಿಯಲ್ಲಿ ಶರಣಬಸಪ್ಪ, ಕೆ.ಎ.ಕಂದಗಲ್, ಬೀಮಣ್ಣ ಭಾಗವಹಿಸಿದ್ದರು.

Leave a Reply

Your email address will not be published.