ನನಗೆ ಅಧಿಕಾರ ಮುಖ್ಯವಲ್ಲ ದೇಶ ಮುಖ್ಯ – ಕಪಿಲ್ ಸಿಬಲ್

ನವದೆಹಲಿ :- ಬಹಿರಂಗವಾಗಿಯೇ ರಾಹುಲ್ ಗಾಂಧಿ ವಿರುದ್ಧ ಅಸಮಾಧಾನ ಹೊರ ಹಾಕಿದ್ದ ಕಾಂಗ್ರೆಸ್ ಹಿರಿಯ ಮುಖಂಡ ಕಪಿಲ್ ಸಿಬಲ್ ಇತೀಗ ಮತ್ತೊಂದು ಟ್ವೀಟ್ ಮಾಡಿದ್ದಾರೆ.

ನನಗೆ ಪದವಿ ಮುಖ್ಯವಲ್ಲ, ದೇಶ ಮುಖ್ಯ ಎಂದು ಟ್ವೀಟ್ ಮಾಡುವ ಮುಖಾಂತರ ತಮ್ಮ ನಿಲುವನ್ನ ಸ್ಪಷ್ಟಪಡಿಸಿದ್ದಾರೆ.

IT’S NOT ABOUT A POST
IT’S ABOUT MY COUNTRY WHICH MATTERS MOST

— KAPIL SIBAL (@KAPILSIBAL) AUGUST 25, 2020

ಕಾಂಗ್ರೆಸ್ ನಡೆಯುತ್ತಿರುವ ಸ್ಥಿತಿಗತಿ ಕಂಡು 23 ಜನ ಕಾಂಗ್ರೆಸ್ ಮುಖಂಡರು ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದರು. ನಿನ್ನೆ ನಡೆಸ ಕಾಂಗ್ರೆಸ್ ಕಾರ್ಯಕಾರಿಣಿ ಸಭೆ ಈ ಬಗ್ಗೆ ಪ್ರಸ್ತಾಪವಾಗುತ್ತಿದ್ದಂತೆ ರಾಹುಲ್ ಗಾಂಧಿ ಹಿರಿಯ ಮುಖಂಡರ ವಿರುದ್ಧ ಗರಂ ಆಗಿದ್ದರು. ಅಲ್ಲದೇ ಬಿಜೆಪಿ ಜೊತೆ ಕೈ ಜೋಡಿಸಿದ್ದಾರೆ ಎಂದಿದ್ದಾರೆ. ರಾಹುಲ್ ಹೇಳಿಕೆ ನೀಡುತ್ತಿದ್ದಂತೆ ಕಾಂಗ್ರೆಸ್ ಹಿರಿಯ ನಾಯಕರು ಆಕ್ರೋಶಗೊಂಡು ಬಿಜೆಪಿ ಜೊತೆ ಕೈ ಜೋಡಿಸಿರುವುದು ಸಾಬೀತಾದ್ರೆ, ರಾಜೀನಾಮೆ ನೀಡುವುದಾಗಿ ತಿಳಿಸಿದ್ದರು.

ಈ ಬಗ್ಗೆ ಹಿರಿಯ ಮುಖಂಡ ಕಪಿಲ್ ಸಿಬಲ್ ಟ್ವೀಟ್ ಮಾಡಿ, ನಾವು 30 ವರ್ಷದಿಂದ ಪಕ್ಷದಲ್ಲಿದ್ದು, ಯಾವುದೇ ಹೇಳಿಕೆಯನ್ನ ಬಿಜೆಪಿ ಪರ ನೀಡಿಲ್ಲ. ರಾಜರ್ಸಥಾನದ ಹೈಕೋರ್ಟ್‌ನಲ್ಲಿ ಕಾಂಗ್ರೆಸ್ ಪರ ಸಮರ್ಥಿಸಿಕೊಳ್ಳುವಲ್ಲಿ ಯಶಸ್ವಿಯಾದೆ. ಆದರೂ ನಾವು ಬಿಜೆಪಿಯೊಂದಿಗೆ ಒಡನಾಟ ಹೊಂದಿದ್ದೇವೆ ಎಂದು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದರು. ಆದ್ರೆ ಕೆಲವು ಗಂಟೆಗಳ ಬಳಿಕ ಕಪಿಲ್ ಸಿಬಲ್ ಯೂಟರ್ನ್ ಹೊಡೆದಿದ್ದರು.

WAS INFORMED BY RAHUL GANDHI PERSONALLY THAT HE NEVER SAID WHAT WAS ATTRIBUTED TO HIM .

I THEREFORE WITHDRAW MY TWEET .

— KAPIL SIBAL (@KAPILSIBAL) AUGUST 24, 2020

ರಾಹುಲ್ ಗಾಂಧಿ ನನಗೆ ಜೊತೆ ಮಾತನಾಡಿ ನಿಮ್ಮನ್ನು ಉದ್ದೇಶಿಸಿ ಹೇಳಿಲ್ಲ ಎಂದು ಹೇಳಿದರು. ಹೀಗಾಗಿ ನನ್ನ ಹೇಳಿಕೆಯನ್ನು ಹಿಂದಕ್ಕೆ ಪಡೆಯುತ್ತೇನೆ ಎಂದು ಹೇಳಿ ಟ್ವೀಟ್ ಡಿಲೀಟ್ ಮಾಡಿದ್ದರು.

Leave a Reply

Your email address will not be published.